ವೇಗದ ಪ್ರೊಸೆಸರ್ ಇರುವ ಈ ಮೊಬೈಲ್‌ನಲ್ಲಿ ಭಾರೀ ಬೆಲೆ ಇಳಿಕೆ!
ಮೊಬೈಲ್ ಮಾರುಕಟ್ಟೆಯಲ್ಲಿ ವಿವೋದ ಸಬ್ ಬ್ರ್ಯಾಂಡ್ ಆಗಿರುವ ಐಕ್ಯೂ ಈಗಾಗಲೇ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಐಕ್ಯೂ ನಿಯೋ 7 ಪ್ರೊ 5G ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇದೀಗ ಈ ಫೋನ್ ಸಖತ್ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, OMG ಎನ್ನುವಂತೆ ಮಾಡಿದೆ.
ಹೌದು, ಐಕ್ಯೂ ಸಂಸ್ಥೆಯು ಐಕ್ಯೂ ಕ್ವೆಸ್ಟ್ ಡೇಸ್ ಆಯೋಜಿಸಿದ್ದು, ತನ್ನ ಕೆಲವು ಫೋನ್‌ಗಳಿಗೆ ರಿಯಾಯಿತಿ ತಿಳಿಸಿದೆ. ಆ ಪೈಕಿ ಐಕ್ಯೂ ನಿಯೋ 7 ಪ್ರೊ 5G ಫೋನ್ ಸದ್ಯ ಭಾರೀ ಡಿಸ್ಕೌಂಟ್ ಪಡೆದಿದ್ದು, 8/128GB ವೇರಿಯಂಟ್ 27,999ರೂ. ಹಾಗೂ 12/256GB ವೇರಿಯಂಟ್ 30,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಆಗಲಿದೆ. ಅಂದಹಾಗೆ ಐಕ್ಯೂ ಸಂಸ್ಥೆಯು ಈ ವಿಶೇಷ ಸೇಲ್ ಇದೇ ಜನೆವರಿ 31ರ ವರೆಗೂ ಚಾಲ್ತಿ ಇರಲಿದೆ.

ಅಂದಹಾಗೆ ಐಕ್ಯೂ ನಿಯೋ 7 ಪ್ರೊ 5G ಫೋನ್ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಈ ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಹಾಗಾದರೆ ಐಕ್ಯೂ ನಿಯೋ 7 ಪ್ರೊ 5G ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ ನಿಯೋ 7 ಪ್ರೊ 5G ಮೊಬೈಲ್ - ಫೀಚರ್ಸ್
ಐಕ್ಯೂ ನಿಯೋ 7 ಪ್ರೊ 5G ಮೊಬೈಲ್ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದ್ದು, 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಸಾಮರ್ಥ್ಯವನ್ನು ಒಳಗೊಂಡಿದೆ.

ಐಕ್ಯೂ ನಿಯೋ 7 ಪ್ರೊ 5G ಮೊಬೈಲ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8/128GB ಹಾಗೂ 12/256GB ವೇರಿಯಂಟ್ ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.
ಐಕ್ಯೂ ಸಂಸ್ಥೆಯ ಈ ನಿಯೋ 7 ಪ್ರೊ 5G ಮೊಬೈಲ್ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದ್ದು, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಹಾಗೆಯೇ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಪಡೆದಿದೆ. ಅಲ್ಲದೇ ಇದು 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಒಳಗೊಂಡಿದೆ.
ಈ ಐಕ್ಯೂ ಸಂಸ್ಥೆಯ ನಿಯೋ 7 ಪ್ರೊ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಇನ್ನು ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್ ಸೌಲಭ್ಯ ಪಡೆದುಕೊಂಡಿದೆ. ಇನ್ನು ಈ ಫೋನ್ ಫಿಯರ್‌ಲೆಸ್ ಫೇಮ್ ಹಾಗೂ ಡಾರ್ಕ್ ಸ್ಟ್ರೋಮ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








