ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್‌ಫೋನ್ ಉಚಿತ!
ಪ್ರಿಯ ಗ್ರಾಹಕರೇ, ಸದ್ಯ ನೀವೇನಾದರೂ ಬಜೆಟ್ ಬೆಲೆಯಲ್ಲಿ ನೂತನ ಸ್ಮಾರ್ಟ್‌ಫೋನ್ ಖರಿದಿಸುವ ಪ್ಲ್ಯಾನ್ ಮಾಡಿದ್ದರೆ, ಈ ಆಫರ್ ನಿಮಗೆ ಸೂಕ್ತ ಎನಿಸುತ್ತದೆ. ಏಕೆಂದರೆ, ಐಕ್ಯೂ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಕ್ಯೂ Z9 5G ಫೋನ್ ಖರೀದಿಯ ಜೊತೆಗೆ ವಿವೋ ಕಂಪನಿಯ ಇಯರ್‌ಫೋನ್ ಡಿವೈಸ್ ಅನ್ನು ಉಚಿತವಾಗಿ ಲಭ್ಯ ಇದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಇದೀಗ ಐಕ್ಯೂ ಕ್ವೆಸ್ಟ್ ಡೇಸ್ (iQOO QUEST DAYS) ಚಾಲ್ತಿ ಇದೆ. ಈ ಕೊಡುಗೆಯಲ್ಲಿ ಐಕ್ಯೂ ಸಂಸ್ಥೆಯು ಆಯ್ದ ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯ ಇದೆ. ಹಾಗೆಯೇ ಐಕ್ಯೂ Z9 5G ಫೋನ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದ್ದು, ಡಿಸ್ಕೌಂಟ್ ಜೊತೆಗೆ ಈ ಫೋನ್ ಖರೀದಿಯೊಂದಿಗೆ ವಿವೋ ಸಂಸ್ಥೆಯ ಇಯರ್‌ಫೋನ್ ಉಚಿತ ಕೊಡುಗೆ ನೀಡಲಾಗಿದೆ.

ಇನ್ನು ಐಕ್ಯೂ Z9 5G ಫೋನ್ 8GB RAM + 128GB ಸ್ಟೋರೇಜ್ ವೇರಿಯಂಟ್ 19,999ರೂ. ಗಳ ಆಫರ್ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇತರೆ ಕೊಡುಗೆ ಪಡೆದುಕೊಂಡರೆ, ಗ್ರಾಹಕರು ಇದನ್ನು 17,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ Z9 5G - ಫೀಚರ್ಸ್ ಹೀಗಿವೆ
ಐಕ್ಯೂ Z9 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, 120Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾಗೆಯೇ ಇದು 1,800 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹಾಗೂ 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಜೊತೆಗೆ 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದುಕೊಂಡಿದೆ. ಇದು ಮೊಬೈಲ್‌ನಲ್ಲಿ ಪ್ರೀಮಿಯಂ ಅನುಭವ ಒದಗಿಸಬಲ್ಲದು.
ಐಕ್ಯೂ Z9 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ARM ಮಾಲಿ-G610 ಜಿಪಿಯು ಪವರ್ ಹೊಂದಿದೆ. ಇದರ ಜೊತೆಗೆ 8GB RAM ಮತ್ತು 128GB/256GB UFS 2.2 ಆಂತರೀಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಅಲ್ಲದೆ ಬಾಹ್ಯ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಲು ಮೈಕ್ರೊ ಎಸ್‌ಡಿ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ. ಅಲ್ಲದೇ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ 14 ಓಎಸ್ ಸಪೋರ್ಟ್ ಪಡೆದಿದೆ.
ಐಕ್ಯೂ Z9 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 50 ಮೆಗಾ ಪಿಕ್ಸೆಲ್ ಸೋನಿ IMX882 ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಆಗಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.
ಐಕ್ಯೂ Z9 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದ್ದು, ಇದಕ್ಕೆ ಪೂರಕವಾಗಿ 44W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ. ಉಳಿದಂತೆ ಈ ಮೊಬೈಲ್ ಫಿಂಗರ್‌ಪ್ರಿಂಟ್ ಸೆನ್ಸರ್, IP54 ರೇಟಿಂಗ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಗ್ರಾಹಕರು ಐಕ್ಯೂ Z9 5G ಫೋನ್ ಅನ್ನು 8GB + 128GB ವೇರಿಯಂಟ್ ಹಾಗೂ 8GB + 256GB ವೇರಿಯಂಟ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








