Home
ಸುದ್ದಿಜಾಲ

ವೇಗದ ಈ ಐಕ್ಯೂ ಫೋನ್‌ ಖರೀದಿಗೆ ಇದು ಬೆಸ್ಟ್‌ ಟೈಮ್‌!..ಭಾರೀ ಉಳಿತಾಯ!

ಐಕ್ಯೂ ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ಐಕ್ಯೂ ಕ್ವೆಸ್ಟ್ ಡೇಸ್ ಸೇಲ್ (iQOO Quest Days Sale) ಈಗ ಲೈವ್‌ ಆಗಿದೆ. ಐದು ದಿನಗಳ ಈ ಮಾರಾಟ ಮೇಳದಲ್ಲಿ ಐಕ್ಯೂ ಸಂಸ್ಥೆಯ ಆಯ್ದ ಕೆಲವು ಫೋನ್‌ಗಳು ಭಾರೀ ರಿಯಾಯಿತಿ ಪಡೆದಿವೆ. ಹೀಗಾಗಿ ಹೊಸ ಐಕ್ಯೂ ಸ್ಮಾರ್ಟ್‌ಫೋನ್‌ ಖರೀದಿಸಲು ಇದು ಸಕಾಲ ಆಗಿದೆ.

ಹೌದು, ಐಕ್ಯೂ ಕಂಪನಿಯ ಐಕ್ಯೂ ಕ್ವೆಸ್ಟ್ ಡೇಸ್ ಸೇಲ್ (iQOO Quest Days Sale) ಪ್ರಾರಂಭವಾಗಿದ್ದು, ಈ ಸೇಲ್‌ ಆಗಸ್ಟ್‌ 25 ರ ವರೆಗೂ ಚಾಲ್ತಿ ಇರಲಿದೆ. ಸಂಸ್ಥೆಯ ಫ್ಲ್ಯಾಗ್‌ಶಿಪ್‌ಗಳು ಮತ್ತು ಮೀಡ್‌ರೇಂಜ್‌ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಬೊಂಬಾಟ್‌ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿವೆ.

ವೇಗದ ಈ ಐಕ್ಯೂ ಫೋನ್‌ ಖರೀದಿಗೆ ಇದು ಬೆಸ್ಟ್‌ ಟೈಮ್‌!..ಭಾರೀ ಉಳಿತಾಯ!

ಇನ್ನು ಫೋನ್‌ ಖರೀದಿದಾರರು ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಮ್‌ಐ ಮೂಲಕ ಖರೀದಿಸಿದರೆ, 5,000 ರೂ.ಗಳ ಇನ್‌ಸ್ಟಂಟ್‌ ರಿಯಾಯಿತಿ ಪಡೆಯಬಹುದಾಗಿದೆ. ಜೊತೆಗೆ ನೋ-ಕಾಸ್ಟ್ ಇಎಮ್‌ಐ ಕೊಡುಗೆ ಸಹ ಲಭ್ಯ ಆಗಲಿದೆ. ಹಾಗಾದರೆ ಈ ಮಾರಾಟ ಮೇಳದಲ್ಲಿ ಯಾವೆಲ್ಲಾ ಫೋನ್‌ಗಳು ಆಫರ್‌ ದರದಲ್ಲಿ ಕಾಣಿಸಿಕೊಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಐಕ್ಯೂ ನಿಯೋ 7 ಪ್ರೊ 5G ಫೋನ್‌ ಆಫರ್‌ :
ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ ಈ ಮಾರಾಟದಲ್ಲಿ 32,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಹೊಂದಿದೆ. ಹಾಗೆಯೇ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.

ಐಕ್ಯೂ Z7s 5G ಸ್ಮಾರ್ಟ್‌ಫೋನ್‌ ಆಫರ್‌ :
ಐಕ್ಯೂ Z7s 5G ಮೊಬೈಲ್‌ 6.38 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಆಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಬಲ ಪಡೆದಿದ್ದು, ಆಂಡ್ರಾಯ್ಡ್‌ 13-ಆಧಾರಿತ Funtouch OS 13ನಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಆಫರ್‌ನಲ್ಲಿ ಇದರ ಬೆಲೆಯು 16,999ರೂ. ಆಗಿದೆ.

ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್‌ ಆಫರ್‌ :
ಐಕ್ಯೂ ನಿಯೋ 7 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಆಗಿದೆ. ಹಾಗೆಯೇ ಇದು AMOLED ಮಾದರಿಯ ಡಿಸ್‌ಪ್ಲೇ ಪಡೆದಿದೆ. ಜೊತೆಗೆ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G SoC ಪ್ರೊಸೆಸರ್‌ ಪವರ್‌ ಪಡೆದಿದ್ದು, ಆಂಡ್ರಾಯ್ಡ್ 13 ಆಧಾರಿತ ಫನ್‌ಟೌಚ್‌ OS 13 ನಲ್ಲಿ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಆಫರ್‌ ಬೆಲೆಯು 26,449ರೂ. ಆಗಿದೆ.

ಐಕ್ಯೂ Z6 ಲೈಟ್‌ 5G ಮೊಬೈಲ್‌ ಕೊಡುಗೆ :
ಐಕ್ಯೂ Z6 ಲೈಟ್‌ 5G ಮೊಬೈಲ್‌ 6.58 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 4 Gen 1 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದೆ. ಇನ್ನು ಇದರ ಆಫರ್‌ ಬೆಲೆಯು 13,999ರೂ. ಆಗಿದೆ.

Best Mobiles in India

English summary
Great discounts on iQOO Neo 7 Pro, iQOO Z7s 5G and more on iQOO Quest Days Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+