Home
ಸುದ್ದಿಜಾಲ

iQOO Pad5e ಟ್ಯಾಬ್ಲೆಟ್, Watch GT 2 ವಾಚ್ ಮತ್ತು TWS 5 ಬಡ್ಸ್ ಬಿಡುಗಡೆ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ iQOO ತನ್ನ ಇತ್ತೀಚಿನ iQOO 15 ಸ್ಮಾರ್ಟ್‌ಫೋನ್ ಜೊತೆಗೆ ಕಂಪನಿಯ ಹೊಸ iQOO Pad5e ಟ್ಯಾಬ್ಲೆಟ್, iQOO Watch GT 2 ಸ್ಮಾರ್ಟ್‌ವಾಚ್, ಮತ್ತು iQOO TWS 5 ಇಯರ್‌ಬಡ್ಸ್ ಸಾಧನಗಳನ್ನು ಸಹ ಬಿಡುಗಡೆ ಮಾಡಿದೆ. ಸೋಮವಾರದಂದು ಚೀನಾದಲ್ಲಿ iQOO ಆಯೋಜಿಸಿದ್ದ ಸಮಾರಂಭದಲ್ಲಿ ಈ ಎಲ್ಲಾ ಉತ್ಪನ್ನಗಳು ಬಿಡುಗಡೆಯಾಗಿದ್ದು, ಅತ್ಯುತ್ತಮ ಫೀಚರ್ಸ್ ಮತ್ತು ಕೈಗೆಟುಕುವ ಬೆಲೆಗಳಿಂದ ಎಲ್ಲಾ ಗ್ಯಾಜೆಟ್ಸ್ ಪ್ರಿಯರ ಗಮನಸೆಳಯುವಲ್ಲಿ ಸಫಲವಾಗಿವೆ. ಹಾಗಾದರೆ, iQOO ಪರಿಚಯಿಸಿರುವ ಹೊಸ iQOO Pad5e ಟ್ಯಾಬ್ಲೆಟ್, iQOO Watch GT 2 ಸ್ಮಾರ್ಟ್‌ವಾಚ್, ಮತ್ತು iQOO TWS 5 ಇಯರ್‌ಬಡ್ಸ್ ಸಾಧನಗಳು ಹೇಗಿವೆ?, ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

iQOO Pad5e ಟ್ಯಾಬ್ಲೆಟ್: ಪ್ರಮುಖ ವೈಶಿಷ್ಟ್ಯಗಳು
iQOO ಪರಿಚಯಿಸಿರುವ ಹೊಸ Pad5e ಟ್ಯಾಬ್ಲೆಟ್‌ನಲ್ಲಿ 12.05 ಇಂಚಿನ LCD ಡಿಸ್‌ಪ್ಲೇ ಇದೆ. ಇದರಲ್ಲಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಇದೆ. ಜೊತೆಗೆ ಈ ಡಿಸ್ಪ್ಲೇಯಲ್ಲಿ DC ಡಿಮ್ಮಿಂಗ್ ತಂತ್ರಜ್ಞಾನವಿದೆ, ಇದು ಕಣ್ಣಿಗೆ ಆರಾಮದಾಯಕವಾದ ದೃಶ್ಯ ನೀಡುತ್ತದೆ.ಈ ಟ್ಯಾಬ್ಲೆಟ್‌ Snapdragon 8 Gen 3 ಪ್ರೊಸೆಸರ್ ಹೊಂದಿದೆ ಮತ್ತು Adreno 750 GPU ಜೊತೆಯಾಗಿದೆ. ಮೆಮೊರಿ ಆಯ್ಕೆಯಲ್ಲಿ 8GB, 12GB, ಮತ್ತು 16GB RAM ನೀಡಲಾಗಿದೆ. ಸ್ಟೋರೇಜ್‌ಗಾಗಿ 128GB ರಿಂದ 512GB ವರೆಗಿನ ಆಯ್ಕೆಗಳು ಲಭ್ಯ.

Android 15 ಆಧಾರಿತ OriginOS 5 ಸಾಫ್ಟ್‌ವೇರ್‌ನಲ್ಲಿ ಈ Pad5e ಟ್ಯಾಬ್ಲೆಟ್ ಸಾಧನ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, 8MP ಹಿಂಭಾಗದ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾ ಇದೆ. 584 ಗ್ರಾಂ ತೂಕದ ಈ ಸಾಧನವು ಕೇವಲ 6.62 mm ದಪ್ಪವಾಗಿದ್ದು, ಯುಎಸ್‌ಬಿ ಟೈಪ್-ಸಿ ಆಡಿಯೋ ಪೋರ್ಟ್ ಮತ್ತು ನಾಲ್ಕು ಸ್ಪೀಕರ್‌ಗಳ ಸೌಲಭ್ಯವಿದೆ. ಚೀನಾದಲ್ಲಿ ಇದರ ಆರಂಭಿಕ ಬೆಲೆ 1,999 ಯುವಾನ್ (ಸುಮಾರು ₹24,600) ಆಗಿದೆ.

iQOO Watch GT 2 ಸ್ಮಾರ್ಟ್‌ವಾಚ್: ಪ್ರಮುಖ ವೈಶಿಷ್ಟ್ಯಗಳು
iQOO ಪರಿಚಯಿಸಿರುವ ಹೊಸ Watch GT 2 ನಲ್ಲಿ 2.07 ಇಂಚಿನ ಕರ್ನರ್‌ಡ್ AMOLED ಡಿಸ್ಪ್ಲೇ ಇದೆ, ಇದು 2,400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ನೀಡುತ್ತದೆ. ವಾಚ್‌ನಲ್ಲಿ ಹೃದಯ ಸ್ಪಂದನ, ರಕ್ತದ ಆಮ್ಲಜನಕ, ನಿದ್ರೆ ಮತ್ತು ಒತ್ತಡ ಮಾಪನ ಸೇರಿದಂತೆ ಅನೇಕ ಸೆನ್ಸರ್‌ಗಳು ಅಳವಡಿಸಲಾಗಿದೆ. Blue OS 3.0 ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುವ ಈ ವಾಚ್‌ನಲ್ಲಿ 100ಕ್ಕೂ ಹೆಚ್ಚು ಕ್ರೀಡಾ ಮೋಡ್‌ಗಳು ಲಭ್ಯ.ಇದರಲ್ಲಿ AI ಸಹಾಯಕ "DeepSeek" ಇದೆ, ಇದು ಧ್ವನಿಯಿಂದ ನಿಯಂತ್ರಣಕ್ಕೆ ಸಹಕಾರಿಸುತ್ತದೆ. eSIM ಮಾದರಿ ಒಂದು ಬಾರಿ ಚಾರ್ಜ್‌ನಲ್ಲಿ 8 ದಿನಗಳವರೆಗೆ ಬ್ಯಾಟರಿ ನೀಡುತ್ತದೆ, ಆದರೆ Bluetooth ಮಾದರಿ 33 ದಿನಗಳವರೆಗೆ ಕೆಲಸ ಮಾಡುತ್ತದೆ. ಇದರ ಬೆಲೆ Bluetooth ಆವೃತ್ತಿಗೆ ಅಂದಾಜು ₹6,200 ಮತ್ತು eSIM ಆವೃತ್ತಿಗೆ ಅಂದಾಜು ₹8,600 ರೂ.ಗಳಾಗಿವೆ.

iQOO Pad5e ಟ್ಯಾಬ್ಲೆಟ್, Watch GT 2 ವಾಚ್ ಮತ್ತು TWS 5 ಬಡ್ಸ್ ಬಿಡುಗಡೆ!

iQOO TWS 5 ಇಯರ್‌ಬಡ್ಸ್: ಪ್ರಮುಖ ವೈಶಿಷ್ಟ್ಯಗಳು
iQOO ಪರಿಚಯಿಸಿರುವ ಈ TWS 5 ಇಯರ್‌ಬಡ್ಸ್ LDAC, AAC, SBC ಮತ್ತು LC3 ಆಡಿಯೋ ಕೋಡೆಕ್‌ಗಳನ್ನು ಬೆಂಬಲಿಸುತ್ತವೆ. ಇವುಗಳಲ್ಲಿ 60 ಡೆಸಿಬೆಲ್‌ಗಳ ಅಡಾಪ್ಟಿವ್ ನೊಯ್ಸ್ ಕ್ಯಾನ್ಸಲೇಷನ್ ತಂತ್ರಜ್ಞಾನವಿದೆ, ಇದು ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ. ಕೇವಲ 42 ಮಿಲಿಸೆಕೆಂಡ್ ಲ್ಯಾಟೆನ್ಸಿ ಇರುವುದರಿಂದ ಗೇಮಿಂಗ್ ಮತ್ತು ವೀಡಿಯೋ ಕಾಲ್‌ಗಳಿಗೆ ಇದು ಸೂಕ್ತ.ಇವು IP54 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತವೆ. ರೇಸಿಂಗ್ ಯೆಲ್ಲೋ ಮತ್ತು ಎಲೆಕ್ಟ್ರಿಕ್ ವೈಟ್ ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್‌ಬಡ್ಸ್ ಬೆಲೆ 399 ಯುವಾನ್ (ಸುಮಾರು ₹4,900) ಗಳಾಗಿವೆ.

ಈ ಎಲ್ಲಾ ಗ್ಯಾಜೆಟ್ಸ್ ಜೊತೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ iQOO 15 ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗಿದೆ. iQOO ತನ್ನ ಈ ಹೊಸ ಸಾಧನಗಳ ಮೂಲಕ ಪ್ರೀಮಿಯಂ ಪರ್ಫಾರ್ಮೆನ್ಸ್‌ನ್ನು ಹಾಗೂ ಉಪಯುಕ್ತತೆಯನ್ನು ಒಟ್ಟಿಗೆ ನೀಡುವ ಪ್ರಯತ್ನ ಮಾಡುತ್ತಿದೆ. ಈ ಸರಣಿ ಭಾರತದಲ್ಲಿಯೂ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ. ಏಕೆಂದರೆ, ಭಾರತದ ಮಾರುಕಟ್ಟೆಗೆ iQOO 15 ಸ್ಮಾರ್ಟ್‌ಫೋನ್ ಆಗಮನದ ಸುದ್ದಿಯನ್ನು iQOO ಇಂಡಿಯಾದ ಸಿಇಒ ನಿಪುಣ್ ಮಾರ್ಯಾ ಅವರು ಅಧಿಕೃತವಾಗಿ ದೃಢಪಡಿಸಿದ್ದಾರೆ.

ನಿಪುಣ್ ಮಾರ್ಯಾ ಅವರ (@nipunmarya) X (ಹಿಂದೆ ಟ್ವಿಟರ್) ಪೋಸ್ಟ್‌ನಲ್ಲಿ iQOO 15 ಸ್ಮಾರ್ಟ್‌ಫೋನ್ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿಸಲಾಗಿದೆ. ಹಾಗೆಯೇ, ಭಾರತೀಯ ರೂಪಾಂತರವು ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ ಹೊಂದಲಿದೆ ಮತ್ತು ಆಂಡ್ರಾಯ್ಡ್ 16-ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಚಾರದ ಚಿತ್ರವು ದೃಢಪಡಿಸಿದೆ. ಇಷ್ಟು ಮಾಹಿತಿಗಳು ಈಗ ಅಧಿಕೃತವಾಗಿ ಲಭ್ಯವಿವೆ.!

Best Mobiles in India

English summary
iQOO expands its product lineup with the launch of the Pad5e tablet, TWS 5 earbuds, and WATCH GT 2 smartwatch, alongside the flagship iQOO 15 smartphone, offering a complete ecosystem of smart devices for tech enthusiasts. check here to know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+