ಐಕ್ಯೂ Z7 5G ಸ್ಮಾರ್ಟ್‌ಫೋನ್‌ಗೆ ಅಮೆಜಾನ್‌ನಲ್ಲಿ ಬೊಂಬಾಟ್ ಡಿಸ್ಕೌಂಟ್!
ಐಕ್ಯೂ ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗೆ ಭಾರಿ ಬೇಡಿಕೆ ಹೊಂದಿದ್ದು, ಈ ಮೂಲಕ ಬಳಕೆದಾರರಿಗೆ ಉತ್ತಮ ಕಾರ್ಯಕ್ಷಮತೆ ಹಾಗೂ ವಿವಿಧ ಫೀಚರ್ಸ್ ಮೂಲಕ ಹಲವು ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಈ ನಡುವೆ ಕೆಲವು ತಿಂಗಳ ಹಿಂದಷ್ಟೇ ಲಾಂಚ್ ಆಗಿರುವ ಐಕ್ಯೂನ ಈ ಫೋನ್‌ಗೆ ಭಾರೀ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.
ಹೌದು, ಐಕ್ಯೂ Z7 5G ( IQOO Z7 5G) ಸ್ಮಾರ್ಟ್‌ಫೋನ್ ಮೇಲೆ 14% ರಿಯಾಯಿತಿ ನೀಡಲಾಗಿದೆ. ಈ ಫೋನ್ 64MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 44W ಫ್ಲ್ಯಾಶ್‌ಚಾರ್ಜ್‌ನೊಂದಿಗೆ ಕಾಣಿಸಿಕೊಂಡಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 920 5G ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್ ಅನ್ನು ಈ ಆಫರ್ ಬೆಲೆಗೆ ಖರೀದಿ ಮಾಡುವುದು ಎಲ್ಲಿ?, ಇದರ ಪ್ರಮುಖ ಫೀಚರ್ಸ್ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಐಕ್ಯೂ Z7 5G ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ HDR10+ ಬೆಂಬಲದೊಂದಿಗೆ 6.38 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 1300nits ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 90 Hz ರಿಫ್ರೆಶ್ ರೇಟ್‌ನೊಂದಿಗೆ ಉತ್ತಮ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.
ಐಕ್ಯೂ Z7 5G ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 920 5G ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ OS 13 ನಲ್ಲಿ ಕೆಲಸ ಮಾಡುತ್ತದೆ. ಈ ಮೂಲಕ ಉತ್ತಮ ಕಾರ್ಯಕ್ಷಮತೆಯನ್ನು ಈ ಫೋನ್‌ನಲ್ಲಿ ನಿರೀಕ್ಷಿಸಬಹುದು.
ಐಕ್ಯೂ Z7 5G ಕ್ಯಾಮೆರಾ ರಚನೆ: ಐಕ್ಯೂ Z7 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ OIS ಬೆಂಬಲದ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆನ್ಸರ್ ಪಡೆದಿದೆ. ಇದರೊಂದಿಗೆ ಸೆಲ್ಫಿ ಫೋಟೊ ಹಾಗೂ ವಿಡಿಯೋ ಉದ್ದೇಶಕ್ಕಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಆಯ್ಕೆ ಇದರಲ್ಲಿದೆ.

ಐಕ್ಯೂ Z75G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 44W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಚಾರ್ಜಿಂಗ್ ಉದ್ದೇಶಕ್ಕೆ ಈ ಫೋನ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ವೇಗವಾಗಿ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನುಳಿದಂತೆ ಅಲ್ಟ್ರಾ-ಗೇಮ್ ಮೋಡ್, ಮೋಷನ್ ಕಂಟ್ರೋಲ್, 4Kವಿಡಿಯೋ ರೆಕಾರ್ಡಿಂಗ್, IP54ರೇಟಿಂಗ್ ಫಿಂಗರ್‌ಪ್ರಿಂಟ್ ಸೆನ್ಸರ್ ಅಯ್ಕೆ ಇದರಲ್ಲಿದೆ.
ಐಕ್ಯೂ Z7 5G ಬೆಲೆ ಹಾಗೂ ಲಭ್ಯತೆ:ಈ ಫೋನ್ 21,999 ರೂಪಾಯಿಗಳ ಸಾಮಾನ್ಯ ಬೆಲೆ ಹೊಂದಿದ್ದು, 14% ರಷ್ಟು ರಿಯಾಯಿತಿ ಪಡೆದುಕೊಳ್ಳುವ ಮೂಲಕ 18,999ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಕನಿಷ್ಠ 1,000 ರೂಪಾಯಿಗಳ ಖರೀದಿ ಮೌಲ್ಯದೊಂದಿಗೆ HSBC ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ 250 ವರೆಗೆ ಅಥವಾ 5% ತ್ವರಿತ ರಿಯಾಯಿತಿಯನ್ನು ಪಡೆಯಲು ಅವಕಾಶ ಇದೆ.

ಆಯ್ದ ಸ್ಮಾರ್ಟ್‌ಫೋನ್‌ಗಳ ಖರೀದಿಯಲ್ಲಿ ಪ್ರೈಮ್ ಸೇವಿಂಗ್ಸ್ ಅಮೆಜಾನ್ ಪೇ ರಿವಾರ್ಡ್‌ಗಳಿಂದ 5,000 ರೂ. ಮೌಲ್ಯದ ಬಹುಮಾನಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ
ಅಮೆಜಾನ್ ಪೇ ICICI ಕ್ರೆಡಿಟ್ ಕಾರ್ಡ್ ಮೂಲಕ 3 ತಿಂಗಳವರೆಗೆ ತಿಂಗಳಿಗೆ 6,333 ರೂ. ಗಳು ಮತ್ತು 6 ತಿಂಗಳಿಗೆ ತಿಂಗಳಿಗೆ 3,167 ರೂ. ಗಳ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ಲಭ್ಯ. ಈ ಫೋನ್ ಅನ್ನು ನೀವು ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








