Home
ಸುದ್ದಿಜಾಲ

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಭಾರೀ ಕುತೂಹಲ ಕೆರಳಿಸಿರುವ ಐಕ್ಯೂ Z7 ಫೋನ್‌!

ಹಲವು ಸ್ಮಾರ್ಟ್‌ಫೋನ್‌ ಗಳ ನಡುವೆ ಇತ್ತೀಚೆಗೆ ಐಕ್ಯೂ ಕಂಪೆನಿಯ ಫೋನ್‌ಗಳು ಸಹ ಮಾರುಕಟ್ಟೆಯಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. ಈ ಕಾರಣಕ್ಕೆ ಐಕ್ಯೂ ವಿವಿಧ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಾ ಬರುತ್ತಿದ್ದು, ಇದೀಗ ಐಕ್ಯೂ Z7 ಫೋನ್ ಶೀಘ್ರದಲ್ಲೇ ಲಾಂಚ್‌ ಆಗಲಿದೆ.

ಹೌದು, ಐಕ್ಯೂ Z7 (iQOO Z7) ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿಯೇ ಭಾರತದಲ್ಲಿ ಲಾಂಚ್ ಆಗುವ ನಿರೀಕ್ಷೆ ಇದ್ದು, ಐಕ್ಯೂ 11 ಮತ್ತು ನಿಯೋ 7 ಅನ್ನು ಲಾಂಚ್‌ ಮಾಡಿದ ನಂತರ ಈಗ ಐಕ್ಯೂ Z6 ನ ಉತ್ತರಾಧಿಕಾರಿಯಾಗಿ ಐಕ್ಯೂ Z7 ಲಾಂಚ್‌ ಮಾಡಲು ಸಿದ್ಧವಾಗಿದೆ. ಐಕ್ಯೂ Z6 ಫೋನ್ ಅನ್ನು ಆಗಸ್ಟ್ 2022 ರಲ್ಲಿ ಅನಾವರಣ ಮಾಡಲಾಗಿತ್ತು. ಈ ಫೋನ್ ಐಕ್ಯೂ Z6, ಐಕ್ಯೂ Z6x ನ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಭಾರೀ ಕುತೂಹಲ ಕೆರಳಿಸಿರುವ ಐಕ್ಯೂ Z7 ಫೋನ್‌!

ಇದೆಲ್ಲದರ ನಡುವೆ ಈಗ ಲಾಂಚ್‌ ಆಗುವ ಮುನ್ನವೇ ಐಕ್ಯೂ Z7 ಸ್ಮಾರ್ಟ್‌ಫೋನ್‌ ಕ್ರೇಜ್‌ ಎಲ್ಲೆಡೆ ಜೋರಾಗಿದೆ. ಅದರಲ್ಲೂ ಐಕ್ಯೂ ಇಂಡಿಯಾದ ಸಿಇಒ ನಿಪುನ್ ಮರಿಯಾ ಅವರು ಈ ಹೊಸ ಸ್ಮಾರ್ಟ್‌ಫೋನ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಐಕ್ಯೂ ಗ್ರಾಹಕರಿಗೆ ಕುತೂಹಲ ಹೆಚ್ಚಿಸಿದ್ದಾರೆ. ಹಾಗಿದ್ರೆ, ಶೇರ್‌ ಆದ ಪೋಟೋದ ಪ್ರಕಾರ ಶೈಲಿ ಹೇಗಿದೆ, ಯಾವ ಬಣ್ಣದಲ್ಲಿ ಕಂಡುಬರಲಿದೆ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ನಿಪುನ್ ಮರಿಯಾ ಅವರು ಶೇರ್‌ ಮಾಡಿಕೊಂಡಿರುವ ಚಿತ್ರವು ವೀಕ್ಷಕರ ತಲೆಗೆ ಹುಳಬಿಟ್ಟಂತೆ ಆಗಿದೆ. ಯಾಕೆಂದರೆ ಅವರು ಪೋಸ್ಟ್ ಮಾಡಿದ ಚಿತ್ರವು ಮುಸುಕಿನಿಂದ ಮುಚ್ಚಿಕೊಂಡಿದೆ. ಹಾಗೆಯೇ ಬ್ಯಾಗ್ರೌಂಡ್‌ನಲ್ಲಿ ಪತ್ತೆ ಮಾಡಲು ಕಷ್ಟವಾಗುವಂತೆ ತುಂಬಾ ಕೌಶಲ್ಯದಿಂದ Z7 ಎಂದು ಬರೆಯಲಾಗಿದೆ. ಜೊತೆಗೆ ಈ ಚಿತ್ರದಲ್ಲಿ ಫೋನ್‌ನ ರಿಯರ್‌ ಭಾಗ ಮಾತ್ರ ಕಾಣಿಸಿದ್ದು, ಇದರಿಂದ ಸುಲಭವಾಗಿ ತಿಳಿಯುವುದು ಏನೆಂದರೆ ಡ್ಯುಯಲ್‌ ರಿಯರ್ ಕ್ಯಾಮೆರಾ ಹೊಂದಿದೆ ಎಂದು.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಭಾರೀ ಕುತೂಹಲ ಕೆರಳಿಸಿರುವ ಐಕ್ಯೂ Z7 ಫೋನ್‌!

ಇನ್ನುಳಿದಂತೆ ಐಕ್ಯೂ ಬ್ರ್ಯಾಂಡಿಂಗ್ ಪ್ಯಾನೆಲ್‌ನ ಕೆಳಭಾಗದ ಮಧ್ಯಭಾಗದಲ್ಲಿ ಕಾಣಿಸಿಕೊಂಡಿದೆ. ಜೊತೆಗೆ ಈ ಫೋಟೋದಿಂದ ಈ ಫೋನ್‌ನ ಬಣ್ಣದ ಬಗ್ಗೆಯೂ ಮಾಹಿತಿ ತಿಳಿದುಬಂದಿದೆ. ಅದರಂತೆ ಇದು ಟೀಲ್ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ ಇತರೆ ಬಣ್ಣಗಳಲ್ಲಿಯೂ ಬರಬಹುದು ಎಂದು ಹೇಳಲಾಗುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆಗೆ ಒಳಗಾಗಿದ್ದು, ಇದು ಯಾವಾಗ ಲಾಂಚ್‌ ಆಗಲಿದೆ, ಪ್ರಮುಖ ಫೀಚರ್ಸ್‌ ಏನು?, ಬೆಲೆ ಎಷ್ಟು ಎಂಬ ಮಾಹಿತಿ ಮಾತ್ರ ತಿಳಿದುಬಂದಿಲ್ಲ.

ಹಾಗೆಯೇ ಈ ಐಕ್ಯೂ Z7 ಮಾದರಿ ಸಂಖ್ಯೆಗಳಾದ I2207 ಮತ್ತು I2213 ನೊಂದಿಗೆ ಐಕ್ಯೂ Z7 5G ಮತ್ತು ಐಕ್ಯೂ Z7 ಪ್ರೊ 5G ಫೋನ್‌ ಎರಡು ವೇರಿಯಂಟ್‌ನಲ್ಲಿ ಲಾಂಚ್‌ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಐಕ್ಯೂ Z7 ಪ್ರೊ 5G ಫೋನ್‌ I2207 ಮತ್ತು I2213 ಎಂಬ ಸಂಕೇತನಾಮವನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಇದೇ ಫೋನ್‌ ಚೀನಾದಲ್ಲಿ ಐಕ್ಯೂ Z7, ಐಕ್ಯೂ Z7x ಎಂಬ ಹೆಸರಿನಲ್ಲಿ ಲಾಂಚ್‌ ಆಗಲಿದೆ.

ಇದರ ನಡುವೆ ಐಕ್ಯೂ ಇತ್ತೀಚೆಗೆ ಭಾರತದಲ್ಲಿ ಐಕ್ಯೂ ನಿಯೋ 7 ಅನ್ನು ಲಾಂಚ್‌ ಮಾಡಿದ್ದು, ಈ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಈ ಫೋನ್ 2400x1080 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದ್ದು, 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಆಯ್ಕೆಯೊಂದಿದೆ ವಿಶೇ‍ಷವೆನಿಸಿದೆ. ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 8200 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ.

ಶೀಘ್ರದಲ್ಲೇ ಲಾಂಚ್‌ ಆಗಲಿದೆ ಭಾರೀ ಕುತೂಹಲ ಕೆರಳಿಸಿರುವ ಐಕ್ಯೂ Z7 ಫೋನ್‌!
ಐಕ್ಯೂ ನಿಯೋ 7 ಫೋನ್ ಎರಡು ರೀತಿಯ ಸ್ಟೋರೇಜ್‌ ವೇರಿಯಂಟ್‌ ಹೊಂದಿದ್ದು, 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ ಆರಂಭಿಕ ಬೆಲೆ 29,999 ರೂ. ಇದ್ದು, 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ನ ಟಾಪ್ ಮಾಡೆಲ್‌ಗೆ 33,999 ರೂ. ಗಳ ಬೆಲೆ ಪಡೆದಿದೆ.
Best Mobiles in India

English summary
iQOO Z7 smartphone is expected to launch in India soon, after the launch of the iQOO11 and the iQOO Z7, the iQOO Z7 is now all set to launch as the successor to the iQOO Z6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+