ಈ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಇದರ ಡಿಸ್‌ಪ್ಲೇಗೆ ನೀವು ಫಿದಾ ಆಗ್ತೀರಾ!
ಐಕ್ಯೂ ಮೊಬೈಲ್ ಕಂಪೆನಿ ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಖಚಿತಪಡಿಸಿಕೊಂಡಿದೆ. ಸಂಸ್ಥೆಯ ಬಹುತೇಕ ಫೋನ್‌ಗಳು ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆ ಪೈಕಿ ಐಕ್ಯೂ Z7 ಪ್ರೊ 5G ಫೋನ್ ಕೂಡಾ ಒಂದಾಗಿದ್ದು, ಈ ಮೊಬೈಲ್ ಇದೀಗ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಭಾರೀ ರಿಯಾಯಿತಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ಐಕ್ಯೂ ಸ್ಮಾರ್ಟ್‌ಫೋನ್ ಕಂಪೆನಿ ತನ್ನ ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಈಗ ಶೇ. 11% ರಷ್ಟು ರಿಯಾಯಿತಿ ಮಾಡಿದೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ 23,999ರೂ. ಗಳ ಬೆಲೆಗೆ ಖರೀದಿಗೆ ಲಭ್ಯ. ಇದರೊಂದಿಗೆ ಅಮೆಜಾನ್ ತಾಣದಲ್ಲಿ ಲಭ್ಯ ಇರುವ ಇತರೆ ಬ್ಯಾಂಕ್ ಕೊಡುಗೆ, ಇಎಮ್‌ಐ ಸೌಲಭ್ಯಗಳನ್ನು ಪಡೆದುಕೊಂಡರೆ ಇನ್ನಷ್ಟು ಡಿಸ್ಕೌಂಟ್ ದೊರೆಯಲಿದೆ.

ಇನ್ನು ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಇದ್ದು, ಅದು 64 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದುಕೊಂಡಿದೆ. ಅಲ್ಲದೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಒಳಗೊಂಡಿದೆ. ಇನ್ನುಳಿದಂತೆ ಐಕ್ಯೂ Z7 ಪ್ರೊ 5G ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹೇಗಿದೆ ಡಿಸ್‌ಪ್ಲೇ ಡಿಸೈನ್
ಐಕ್ಯೂ Z7 ಪ್ರೊ 5G ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತ ಪಡೆದಿದ್ದು, 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ಸ್ಯಾಂಪಲಿಂಗ್ ರೇಟ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒದಗಿಸಲಾಗಿದೆ.

ಪ್ರೊಸೆಸರ್ ಪವರ್ ಯಾವುದು
ಐಕ್ಯೂ Z7 ಪ್ರೊ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ಪವರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಡ್ಯುಯಲ್ ಕ್ಯಾಮೆರಾ ಸೌಲಭ್ಯ
ಐಕ್ಯೂ Z7 ಪ್ರೊ 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸರ್ ಹೊಂದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಪಡೆದಿದೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಫ್ಲಾಶ್, ಪನೋರಮಾ, HDR ಅನ್ನು ಒಳಗೊಂಡಿದೆ.
ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಆಯ್ಕೆಗಳು
ಐಕ್ಯೂ Z7 ಪ್ರೊ 5G ಮೊಬೈಲ್ 4,600mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ವೈಫೈ, ಬ್ಲೂಟೂತ್ 5.3, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, USB ಟೈಪ್-C 2.0, OTG ಆಯ್ಕೆಗಳನ್ನು ಪಡೆದಿದೆ. ಇದಲ್ಲದೆ ಮೊಬೈಲ್ ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ ಅಕ್ಸೆಲೆರೊಮೀಟರ್, ಗೈರೊ, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಕಂಪಾಸ್ ಅನ್ನು ಹೊಂದಿದೆ.


Click it and Unblock the Notifications







