IQOO: ಈ ಹೊಸ ಐಕ್ಯೂ 5G ಫೋನ್‌ಗೆ ದೊಡ್ಡ ಡಿಸ್ಕೌಂಟ್! 3D ಕರ್ವ್ಡ್ ಡಿಸ್‌ಪ್ಲೇ... 64 MP ಕ್ಯಾಮೆರಾ
ಐಕ್ಯೂ ಸ್ಮಾರ್ಟ್‌ಫೋನ್‌ಗಳು (IQOO smartphone) ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಈ ನಡುವೆ ಕೆಲವು ವಾರಗಳ ಹಿಂದಷ್ಟೇ ಲಾಂಚ್ ಆದ ಸ್ಮಾರ್ಟ್‌ಫೋನ್‌ಗೆ ಅಮೆಜಾನ್‌ನಲ್ಲಿ ರಿಯಾಯಿತಿ ನೀಡಲಾಗಿದೆ. ಈ ಫೋನ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹಾಗೂ 300Hz ಟಚ್ ಸ್ಯಾಂಪಲಿಂಗ್ ರೇಟ್ ಆಯ್ಕೆ ಪಡೆದಿದೆ.
ಹೌದು, ಐಕ್ಯೂ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಇತ್ತೀಚಿಗೆ ಹೆಚ್ಚು ಸದ್ದು ಮಾಡಿದ್ದ ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್‌ಗೆ (IQOO Z7 Pro 5G) ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ಬಲ ಹೊಂದಿದ್ದು, 256GB ವರೆಗಿನ ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ವಿವರ ಏನಿದೆ ಎಂಬುದನ್ನು ನೋಡೋಣ ಬನ್ನಿ.

ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಫೋನ್ ಬೆಲೆ ಅಮೆಜಾನ್‌ನಲ್ಲಿ 27,999ರೂ.ಗಳಾಗಿದೆ. ಆದರೆ ನೀವು ಈ ಫೋನ್ ಅನ್ನು 24,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಂದರೆ ಇದಕ್ಕೆ 11% ಡಿಸ್ಕೌಂಟ್ ಸಿಗಲಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಹಾಗೂ ವಿನಿಮಯ ಆಫರ್ ಸಹ ಈ ಫೋನ್‌ಗೆ ಇದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದು.
ಬ್ಯಾಂಕ್ ಆಫರ್ ವಿಭಾಗದಲ್ಲಿ ಆಯ್ದ ಕ್ರೆಡಿಟ್ ಕಾರ್ಡ್‌ಗಳಲ್ಲಿ 1,126ರೂ.ಗಳ ಇಎಮ್‌ಐ ಆಯ್ಕೆ ಇದೆ. ಹಾಗೆಯೇ ಅಮೆಜಾನ್ ಪೇ ನಲ್ಲಿ ಯಾವುದೇ ವೆಚ್ಚದ ಇಎಮ್‌ಐ ಲಭ್ಯವಿದೆ. ಇದರೊಂದಿಗೆ ಬಜಾಜ್ ಫಿನ್‌ಸರ್ವ್ ಇಎಮ್‌ಐ ನಲ್ಲೂ ಸಹ ನೋ ಕಾಸ್ಟ್ ಇಎಮ್‌ಐ ಆಯ್ಕೆ ನೀಡಲಾಗಿದೆ. ಇದರಿಂದ ಕಡಿಮೆ ಹಣವನ್ನು ನೀಡಿ ನಿಮ್ಮ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕ್ಯಾಶ್‌ಬ್ಯಾಕ್ ಹಾಗೂ ಪಾರ್ಟನರ್ ಆಫರ್ ಸಹ ಇದೆ. ವಿನಿಮಯ ವ್ಯವಹಾರದಲ್ಲಿ 21,100ರೂ. ವರೆಗೆ ಹಣ ಉಳಿತಾಯ ಮಾಡಬಹುದು.

ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 20:9 ಆಕಾರ ಅನುಪಾತ ಹೊಂದಿರುವ ಈ ಫೋನ್ 120Hz ರಿಫ್ರೆಶ್ ರೇಟ್ ಮತ್ತು 300Hz ಟಚ್ ಸ್ಯಾಂಪಲಿಂಗ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದೆಲ್ಲಕ್ಕಿಂತ ಮಿಗಿಲಾಗಿ 1300 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಈ ಫೋನ್‌ನಲ್ಲಿದೆ.
ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಇದನ್ನು 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಈ ಆಕ್ಟಾ-ಕೋರ್ ಸಿಪಿಯು ವೇಗದ ಕಾರ್ಯಕ್ಷಮತೆ ಮತ್ತು ತಡೆರಹಿತ ಬಹುಕಾರ್ಯಕವನ್ನು ನೀಡಲಿದೆ. ಇದರೊಂದಿಗೆ 8GB RAM ಅನ್ನು ಹೊಂದಿದ್ದು, 256GB ವರೆಗಿನ ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದು.

ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 64 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್ ಹೊಂದಿದ್ದು, ಇದು ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಸ್ಪಷ್ಟ ಮತ್ತು ಗರಿಗರಿಯಾದ ಫೋಟೋಗಳನ್ನು ತೆಗೆಯಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದೆ. ಉಳಿದಂತೆ ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ಚಿತ್ರೀಕರಿಸಲು ಮತ್ತು ವಿಡಿಯೋ ಕರೆಗಳನ್ನು ಮಾಡಲು 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ 4,600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದೆ.


Click it and Unblock the Notifications








