ಬಜೆಟ್ ಬೆಲೆಯ ಈ ಸ್ಮಾರ್ಟ್‌ಫೋನಿಗೂ ಹಬ್ಬದ ಆಫರ್ ಲಭ್ಯ!..ಬಿಗ್ ಬ್ಯಾಟರಿ ಇದೆ!
ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಸದ್ಯ ಲೈವ್ ಇರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಗ್ರಾಹಕರ ಗಮನ ಸೆಳೆದಿದೆ. ಈ ಸ್ಪೆಷಲ್ ಮಾರಾಟದಲ್ಲಿ ಜನಪ್ರಿಯ ಮೊಬೈಲ್‌ಗಳ ಇತ್ತೀಚಿನ ಉತ್ಪನ್ನಗಳಿಗೆ ಹಾಗೂ ಬಹುತೇಕ ಎಲ್ಲ ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಒದಗಿಸಲಾಗಿದೆ. ಅದರಲ್ಲಿಯೂ ಬಜೆಟ್ ಬೆಲೆಗೆ ಲಭ್ಯ ಇರುವ ಮೊಬೈಲ್ ಅಧಿಕ ಆಕರ್ಷಣೆ ಪಡೆದಿವೆ.
ಅಮೆಜಾನ್ ತಾಣದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಐಕ್ಯೂ Z7s 5G ಫೋನ್ ಶೇ. 29% ರಷ್ಟು ಡಿಸ್ಕೌಂಟ್ ಪಡೆದಿದ್ದು, 16,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 6GB RAM + 128GB ವೇರಿಯಂಟ್ ಮಾಡೆಲ್ ಅನ್ನು ಖರೀದಿದಾರರು ಹೆಚ್ಚುವರಿಯಾಗಿ ಲಭ್ಯ ಇರುವ ಬ್ಯಾಂಕ್ ಕೊಡುಗೆ, ಎಕ್ಸ್‌ಚೇಂಜ್ ಆಫರ್ ಹಾಗೂ ಇತರೆ ರಿಯಾಯಿತಿ ಸೇರಿ ಈ ಫೋನ್ ಅನ್ನು 14,999ರೂ. ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇನ್ನು ಐಕ್ಯೂ Z7s 5G ಮೊಬೈಲ್ 6GB RAM ಮತ್ತು 128GB ಸ್ಟೊರೇಜ್ ಮತ್ತು 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಜೊತೆಗೆ ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಹಾಗಾದರೇ ಐಕ್ಯೂ Z7s 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೇಗಿದೆ
ಐಕ್ಯೂ Z7s 5G ಮೊಬೈಲ್ 6.38 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದಿದೆ.
ಪವರ್‌ಫುಲ್ ಪ್ರೊಸೆಸರ್ ಕಾರ್ಯವೈಖರಿ
ಐಕ್ಯೂ Z7s 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13-ಆಧಾರಿತ Funtouch OS 13ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಆಂತರೀಕ ಸ್ಟೊರೇಜ್ ಮತ್ತು 8GB RAM ಮತ್ತು 128GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಐಕ್ಯೂ Z7s 5G ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆನ್ಸಾರ್
ಐಕ್ಯೂ Z7s 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ
ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದು 44W ವೈರ್ಡ್ ಫ್ಲ್ಯಾಶ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB ಟೈಪ್-C, ಬ್ಲೂಟೂತ್ v5.1, GPS ಮತ್ತು Wi-Fi 6 ಸಂಪರ್ಕವನ್ನು ಬೆಂಬಲಿಸಲಿದೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ಕಲರ್ ಆಯ್ಕೆ ಹಾಗೂ ಮೆಮೊರಿ ಆಯ್ಕೆ
ಐಕ್ಯೂ Z7s 5G ಮೊಬೈಲ್ 6GB RAM ಮತ್ತು 128GB ಆಂತರೀಕ ಸ್ಟೊರೇಜ್ ಮತ್ತು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ. ಇನ್ನು ಸ್ಮಾರ್ಟ್‌ಫೋನ್ ನಾರ್ವೆ ಬ್ಲೂ ಮತ್ತು ಪೆಸಿಫಿಕ್ ನೈಟ್ ಕಲರ್ ಆಯ್ಕೆಗಳಲ್ಲಿ ಬರಲಿದೆ.


Click it and Unblock the Notifications








