Home
ಸುದ್ದಿಜಾಲ

ಇಂದು ಐಕ್ಯೂ Z9 5G ಫಸ್ಟ್‌ ಸೇಲ್‌!..ವಾವ್‌ ಎನಿಸುವ ಕ್ಯಾಮೆರಾ ಫೀಚರ್ಸ್‌!

ಐಕ್ಯೂ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಕ್ಯೂ Z9 5G ಫೋನಿನ ಫಸ್ಟ್‌ ಸೇಲ್‌ ಇಂದು (ಮಾರ್ಚ್‌ 14 ರಂದು) ಅಮೆಜಾನ್‌ ಇ ಕಾಮರ್ಸ್‌ ತಾಣದ ಮೂಲಕ ಮಧ್ಯಾಹ್ನ 12 ರಿಂದ ಪ್ರಾರಂಭ ಆಗಲಿದೆ. ಈ ಫೋನ್‌ ಬಜೆಟ್‌ ಪ್ರೈಸ್‌ ಟ್ಯಾಗ್‌ ಪಡೆದಿದ್ದು, ಕೆಲವು ಆಕರ್ಷಕ ಫೀಚರ್ಸ್‌ ಗಳೊಂದಿಗೆ ಗಮನ ಸೆಳದಿದೆ.

ಹೌದು, ಐಕ್ಯೂ Z9 5G ಮೊಬೈಲ್‌ ಅಮೆಜಾನ್‌ ತಾಣದ ಮೂಲಕ ಇಂದು ಫಸ್ಟ್‌ ಸೇಲ್‌ ಪ್ರಾರಂಭ ಆಗಲಿದೆ. ಈ ಫೋನ್‌ 8GB + 128GB ವೇರಿಯಂಟ್‌ ಹಾಗೂ 8GB + 256GB ವೇರಿಯಂಟ್‌ ಆಯ್ಕೆಗಳಲ್ಲಿ ದೊರೆಯಲಿವೆ. ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ ಪಡೆದಿದ್ದು, ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿದೆ.

ಇಂದು ಐಕ್ಯೂ Z9 5G ಫಸ್ಟ್‌ ಸೇಲ್‌!..ವಾವ್‌ ಎನಿಸುವ ಕ್ಯಾಮೆರಾ ಫೀಚರ್ಸ್‌!

ಐಕ್ಯೂ Z9 5G ಮೊಬೈಲ್‌ನ ಆರಂಭಿಕ ವೇರಿಯಂಟ್‌ ಬೆಲೆಯು 17,999 ರೂ. ಆಗಿದ್ದು, ಖರೀದಿದಾರರು ಈ ಮೊಬೈಲ್‌ ಅನ್ನು ಬ್ಲೂ ಹಾಗೂ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಐಕ್ಯೂ Z9 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದು ಐಕ್ಯೂ Z9 5G ಫಸ್ಟ್‌ ಸೇಲ್‌!..ವಾವ್‌ ಎನಿಸುವ ಕ್ಯಾಮೆರಾ ಫೀಚರ್ಸ್‌!

ಐಕ್ಯೂ Z9 5G ಸ್ಮಾರ್ಟ್‌ಫೋನ್‌ ಫೀಚರ್ಸ್‌

ಐಕ್ಯೂ Z9 5G ಮೊಬೈಲ್‌ 6.67 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದು 1,800 ನಿಟ್ಸ್‌ ಬ್ರೈಟ್‌ನೆಸ್ ಆಯ್ಕೆ ಹಾಗೂ 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಜೊತೆಗೆ 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದುಕೊಂಡಿದೆ. ಇದು ಮೊಬೈಲ್‌ನಲ್ಲಿ ಪ್ರೀಮಿಯಂ ಅನುಭವ ನೀಡಬಲ್ಲದು.

ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ARM ಮಾಲಿ-G610 ಜಿಪಿಯು ಪವರ್‌ ಪಡೆದುಕೊಂಡಿದೆ. ಇದರ ಜೊತೆಗೆ 8GB RAM ಮತ್ತು 128GB/256GB UFS 2.2 ಆಂತರೀಕ ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಅಲ್ಲದೆ ಬಾಹ್ಯ ಸ್ಟೋರೇಜ್‌ ವಿಸ್ತರಣೆ ಮಾಡಿಕೊಳ್ಳಲು ಮೈಕ್ರೊ ಎಸ್‌ಡಿ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ. ಉಳಿದಂತೆ ಈ ಫೋನ್‌ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್‌ 14 ಓಎಸ್‌ ಅನ್ನು ರನ್‌ ಮಾಡಲಿದೆ.

ಐಕ್ಯೂ Z9 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, 50 ಮೆಗಾ ಪಿಕ್ಸೆಲ್‌ ಸೋನಿ IMX882 ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ದ್ವಿತೀಯ ಕ್ಯಾಮೆರಾವು 2 ಎಂಪಿ ಆಗಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ಗೆ 16 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಒದಗಿಸಲಾಗಿದೆ.

ಐಕ್ಯೂ Z9 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್ ಪಡೆದಿದ್ದು, ಇದಕ್ಕೆ ಪೂರಕವಾಗಿ 44W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ. ಉಳಿದಂತೆ ಈ ಮೊಬೈಲ್‌ ಫಿಂಗರ್‌ಪ್ರಿಂಟ್ ಸೆನ್ಸರ್‌, IP54 ರೇಟಿಂಗ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣ ಸೌಲಭ್ಯ ಒಳಗೊಂಡಿದೆ.

ಗ್ರಾಹಕರು ಐಕ್ಯೂ Z9 5G ಫೋನ್‌ ಅನ್ನು 8GB + 128GB ವೇರಿಯಂಟ್‌ ಹಾಗೂ 8GB + 256GB ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಅಲ್ಲದೇ ಆರಂಭಿಕ ಕೊಡುಗೆಯಾಗಿ ಈ ಫೋನ್‌ ಅನ್ನು ಕ್ರಮವಾಗಿ 17,999 ರೂ. ಗಳ ಮತ್ತು 19,999 ರೂ. ಗಳ ದರದಲ್ಲಿ ಖರೀದಿ ಮಾಡಲು ಚಾನ್ಸ್‌ ಸಹ ಇದೆ.

Best Mobiles in India

English summary
IQOO Z9 5G first sale in india today. check Offer, Price and More details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+