ನಾಳೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಐಕ್ಯೂ Z9 5G ಫೋನ್!..ಬೆಲೆ ಎಷ್ಟು?
ಐಕ್ಯೂ (iQOO) ಮೊಬೈಲ್ ಕಂಪನಿಯ ಬಹುನಿರೀಕ್ಷಿತ ಐಕ್ಯೂ Z9 5G (iQOO Z9 5G) ನಾಳೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಆದರೆ ಬಿಡುಗಡೆಗೂ ಮೊದಲೆ ಈ ಫೋನಿನ ಕೆಲವು ಲೀಕ್ ಫೀಚರ್ಸ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.
ಹೌದು, ಐಕ್ಯೂ ಕಂಪನಿಯು Z ಸರಣಿಯ ಮುಂಬರುವ ಐಕ್ಯೂ Z9 5G ಮೊಬೈಲ್ (ನಾಳೆ) ಇದೇ ಮಾರ್ಚ್ 12 ರಂದು ದೇಶಿಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ಸಾಮರ್ಥ್ಯ ಅನ್ನು ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಹೊಸ ಮೊಬೈಲ್ ಅನ್ನು ಅಮೆಜಾನ್ ಮೂಲಕ ದೇಶದಲ್ಲಿ ಸೇಲ್ ಮಾಡಲಾಗುತ್ತದೆ.

ಐಕ್ಯೂ Z9 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೋನಿ IMX882 ಸೆನ್ಸಾರ್ ಅನ್ನು ಪಡೆದಿರುವ ಸಾಧ್ಯತೆಗಳು ಇವೆ. ಈ ಕ್ಯಾಮೆರಾವು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಸೆನ್ಸಾರ್ ಬೆಂಬಲ ಪಡೆದಿರಲಿದೆ. ಇನ್ನು ಈ ನೂತನ ಫೋನ್ ಐಕ್ಯೂ Z7 ಫೋನಿನ ಉತ್ತರಾಧಿಕಾರಿಯಾಗಿ ಎಂಟ್ರಿ ಇಡಲಿದೆ.
ಐಕ್ಯೂ Z9 5G ಮೊಬೈಲ್ ಪೂರ್ಣ HD+ ರೆಸಲ್ಯೂಶನ್ ಸೌಲಭ್ಯದೊಂದಿಗೆ 90Hz ರಿಫ್ರೆಶ್ ರೇಟ್ ಒಳಗೊಂಡಿದ್ದು, AMOLED ಡಿಸ್‌ಪ್ಲೇ ಮಾದರಿಯನ್ನು ಪಡೆದಿರಲಿದೆ. ಅಲ್ಲದೇ ಈ ಫೋನ್ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದರ ಜತೆ 5000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರುವುದು ಗ್ಯಾರಂಟಿ ಎನ್ನಲಾಗಿದೆ.
ಐಕ್ಯೂ Z9 5G ಮೊಬೈಲ್ ದೇಶಿಯ ವೇರಿಯಂಟ್ ಮಾದರಿ ಸಂಖ್ಯೆ I2302 ಅನ್ನು ಆಗಿದ್ದು, ಇತ್ತೀಚೆಗೆ Geekbench ಬೆಂಚ್‌ಮಾರ್ಕ್ ಡೇಟಾಬೇಸ್ ಮಾಹಿತಿಯಲ್ಲಿ ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಈ ಮೊಬೈಲ್ 8 GB RAM ಅನ್ನು ಪಡೆದಿರಲಿದ್ದು, ಜೊತೆಗೆ ಆಂಡ್ರಾಯ್ಡ್‌ನ ಇತ್ತೀಚಿನ (ಆಂಡ್ರಾಯ್ಡ್ 14) ಆವೃತ್ತಿಯೊಂದಿಗೆ ಎಂಟ್ರಿ ಕೊಡಲಿದೆ. ಹಾಗಾದರೆ ಐಕ್ಯೂ Z9 5G ಮೊಬೈಲ್ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಕ್ಯೂ Z7 ಫೋನಿನ ಫೀಚರ್ಸ್
ಐಕ್ಯೂ Z7 ಫೋನ್ 6.28 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 90hz ಸ್ಕ್ರೀನ್ ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಿಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ 13 ನಲ್ಲಿ ಸೌಲಭ್ಯ ಸಹ ಪಡೆದಿದೆ.
ಹಾಗೆಯೇ ಈ ಫೋನ್ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ OIS ಬೆಂಬಲದ 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಸೆನ್ಸರ್ ಸೌಲಭ್ಯ ಸಹ ಪಡೆದಿದೆ.
ಹಾಗೆಯೇ ಈ ಫೋನ್ ಸೆಲ್ಫಿ ಫೋಟೊ ಹಾಗೂ ವಿಡಿಯೋ ಉದ್ದೇಶಕ್ಕೆ 16 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಪಡೆದಿದೆ. ಅದೇ ರೀತಿ ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 44W ವೇಗದ ಚಾರ್ಜಿಂಗ್ ಬೆಂಬಲ ಸೌಲಭ್ಯ ಅನ್ನು ಪಡೆದುಕೊಂಡಿದೆ.


Click it and Unblock the Notifications







