iQOO: ಭಾರತದಲ್ಲಿ ಐಕ್ಯೂ Z9 5G ಸ್ಮಾರ್ಟ್‌ಫೋನ್ ಲಾಂಚ್! 50MP ಕ್ಯಾಮೆರಾ.. ಬೆಲೆ ಎಷ್ಟು?
ಐಕ್ಯೂ ಸ್ಮಾರ್ಟ್‌ಫೋನ್‌ಗಳು (iQOO Smartphone) ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಭಾರತೀಯರ ಮನಸ್ಸನ್ನು ಗೆದ್ದಿವೆ. ಅದರಂತೆ ಈಗ ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z9 5G ಸ್ಮಾರ್ಟ್‌ಫೋನ್ (iQOO Z9 5G smartphone) ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸೆರ್ ಹಾಗೂ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ.
ಹೌದು, ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಆಗಿರುವ ಐಕ್ಯೂ Z9 5G ಅನ್ನು ಕೊನೆಗೂ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಮಿಡ್ ರೇಂಜ್ ವಿಭಾಗದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡಲಿದ್ದು, ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹಾಗೂ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಇತರೆ ಆಕರ್ಷಕ ಫೀಚರ್ಸ್ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ಐಕ್ಯೂ Z9 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.67ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್, 1,800 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹಾಗೂ 2400 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಜೊತೆಗೆ 300Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದುಕೊಂಡಿದೆ. ಈ ಮೂಲಕ ನೀವು ಈ ಫೋನ್‌ನಲ್ಲಿ ಪ್ರೀಮಿಯಂ ಅನುಭವ ಪಡೆಯಬಹುದಾಗಿದೆ.
ಐಕ್ಯೂ Z9 5G ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ARM ಮಾಲಿ-G610 ಜಿಪಿಯು ಬಲ ಪಡೆದುಕೊಂಡಿದೆ. ಇದರ ಜೊತೆಗೆ 8GB LPDDR4x RAM ಮತ್ತು 128GB/256GB UFS 2.2 ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ ಇಂಟರ್ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಲು ಮೈಕ್ರೊ ಎಸ್‌ಡಿ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ. ಉಳಿದಂತೆ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ 14 ಓಎಸ್ ಅನ್ನು ರನ್ ಮಾಡಲಿದೆ.

ಐಕ್ಯೂ Z9 5G ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX882 ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಮೂಲಕ ಉತ್ತಮ ಫೋಟೋಗ್ರಫಿ ಅನುಭವ ಪಡೆಯಬಹುದಾಗಿದೆ.
ಐಕ್ಯೂ Z9 5G ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 44W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ ಫಿಂಗರ್‌ಪ್ರಿಂಟ್ ಸೆನ್ಸರ್, IP54 ರೇಟಿಂಗ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಮತ್ತು ಹೈ-ರೆಸ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿದೆ.
ಐಕ್ಯೂ Z9 5G ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 8GB/128GB ವೇರಿಯಂಟ್‌ಗೆ 19,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8GB/256B ಆವೃತ್ತಿಗೆ 21,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ವೇಳೆ ಖರೀದಿದಾರರು ಐಸಿಐಸಿಐ ಬ್ಯಾಂಕ್ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆ ಮಾಡಿದ್ರೆ 2,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಮೂಲಕ ಈ ಫೋನ್ ಕ್ರಮವಾಗಿ 17,999ರೂ.ಗಳು ಮತ್ತು 19,999ರೂ.ಗಳ ಬೆಲೆಯಲ್ಲಿ ಲಭ್ಯ ಇರಲಿದೆ.

ಇನ್ನು ಐಕ್ಯೂ Z9 5G ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಪ್ರೈಮ್ ಸದಸ್ಯರು ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಮತ್ತು ಇತರೆ ಗ್ರಾಹಕರು ಮಾರ್ಚ್ 14 ರಿಂದ ಮಧ್ಯಾಹ್ನ 12 ಗಂಟೆಗೆ ಖರೀದಿ ಮಾಡಬಹುದಾಗಿದೆ. ಈ ಆಕರ್ಷಕ ಸ್ಮಾರ್ಟ್‌ಫೋನ್ ಬ್ರಷ್ಡ್ ಗ್ರೀನ್ ಮತ್ತು ಗ್ರ್ಯಾಫೀನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇರಲಿದೆ.


Click it and Unblock the Notifications








