IQOO: ಐಕ್ಯೂ Z9, ಐಕ್ಯೂ Z9x ಐಕ್ಯೂ Z9 ಟರ್ಬೊ ಫೀಚರ್ಸ್ ಲೀಕ್!
ಐಕ್ಯೂ ಸ್ಮಾರ್ಟ್‌ಫೋನ್‌ಗಳು (IQOO Smartphone) ವಿಶೇಷ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡುತ್ತವೆ. ಈ ನಡುವೆ ಲಾಂಚ್ ಆಗುವ ಮುನ್ನವೇ ಐಕ್ಯೂ Z9, ಐಕ್ಯೂ Z9x ಐಕ್ಯೂ Z9 ಟರ್ಬೊ ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್ ಆಗಿವೆ.
ಹೌದು, ಐಕ್ಯೂ Z9 ಸರಣಿಯ ಫೀಚರ್ಸ್‌ಗಳು ಲಾಂಚ್ ಆಗುವ ಮುನ್ನವೇ ಲೀಕ್ ಆಗಿವೆ. ಈ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗಲಿದ್ದು, 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಜೊತೆಗೆ ಈ ಫೋನ್ ಒರ್ಜಿನ್‌ಓಎಸ್ 4 ನೊಂದಿಗೆ ರನ್ ಆಗಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಇತರೆ ಲೀಕ್ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಕ್ಯೂ Z9 ಸರಣಿ ಫೀಚರ್ಸ್ ಲೀಕ್: ಐಕ್ಯೂ Z9 ಸರಣಿಯನ್ನು ಏಪ್ರಿಲ್ 24 ರಂದು ಚೀನಾದಲ್ಲಿ ಲಾಂಚ್ ಮಾಡಲು ನಿರ್ಧಾರ ಮಾಡಲಾಗಿದ್ದು, ಇದರಲ್ಲಿ ಐಕ್ಯೂ Z9, ಐಕ್ಯೂ Z9 ಟರ್ಬೋ ಮತ್ತು ಐಕ್ಯೂ Z9x (IQOO Z9, IQOO Z9 Turbo and IQOO Z9x) ಎಂಬ ಮೂರು ಫೋನ್‌ಗಳನ್ನು ಕಾಣಬಹುದಾಗಿದೆ. ಈ ಸಂಬಂಧ 91ಮೊಬೈಲ್ಸ್ ವರದಿ ಮಾಡಿದೆ. ಈ ಫೋನ್ ಬಗ್ಗೆ ಟಿಪ್‌ಸ್ಟರ್ ಇಶಾನ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದು, ಈ ಲೀಕ್ ಮಾಹಿತಿ ಗಮನಿಸಿದ್ರೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈ ಫೋನ್‌ಗಳು ಕಮಾಲ್ ಮಾಡಲಿವೆ ಎಂದು ತಿಳಿದುಬಂದಿದೆ.
ಐಕ್ಯೂ Z9 ಸರಣಿಯ ಫೀಚರ್ಸ್: ಈ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ವಿಚಾರಕ್ಕೆ ಬಂದರೆ ಐಕ್ಯೂ Z9x ಸ್ಮಾರ್ಟ್‌ಫೋನ್ 6.72 ಇಂಚಿನ 120Hz ರಿಫ್ರೆಶ್ ರೇಟ್ ಆಯ್ಕೆಯ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಇತರೆ ಎರಡು ಫೋನ್‌ಗಳು 6.78 ಇಂಚಿನ 144Hz ರಿಫ್ರೆಶ್ ರೇಟ್ ಆಯ್ಕೆಯ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿವೆ ಎಂದು ಹೇಳಲಾಗಿದೆ.
ಹಾಗೆಯೇ ಈ ಫೋನ್‌ಗಳ ಕ್ಯಾಮೆರಾ ವಿಚಾರಕ್ಕೆ ಬಂದರೆ ಐಕ್ಯೂ Z9 ಮತ್ತು ಐಕ್ಯೂ Z9x ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 2 ಐಕ್ಯೂ ಪೋರ್ಟ್ರೇಟ್ ಲೆನ್ಸ್‌ಗಳನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಟರ್ಬೊ ಮಾದರಿಯು ಪೋರ್ಟ್ರೇಟ್ ಲೆನ್ಸ್‌ಗೆ ಬದಲಾಗಿ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಅನ್ನು ಹೊಂದಿರಲಿದೆ ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ. ಹಾಗೆಯೇ ಐಕ್ಯೂ Z9x 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದ್ದರೆ, ಸಾಮಾನ್ಯ ಐಕ್ಯೂ Z9 ಮತ್ತು ಟರ್ಬೊ ವೇರಿಯಂಟ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

ಈ ಫೋನ್‌ಗಳ ಪ್ರೊಸೆಸರ್ ವಿಭಾಗದಲ್ಲಿ ಐಕ್ಯೂ Z9x ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸದರೆ ಐಕ್ಯೂ Z9 ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್ ಹಾಗೂ ಐಕ್ಯೂ Z9 ಟರ್ಬೊ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಲೀಕ್ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರ ಜೊತೆಗೆ ಐಕ್ಯೂ Z9x ಮತ್ತು ವೆನಿಲ್ಲಾ Z9 LPDDR4X RAM ಮತ್ತು UFS 2.2 ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದ್ದರೆ ಟರ್ಬೊ LPDDR5X RAM ಜೊತೆಗೆ UFS 4.0 ROM ಸಂಯೋಜನೆಯನ್ನು ಹೊಂದಿರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ ಎಲ್ಲಾ ಮೂರು ಫೋನ್‌ಗಳು ಬೃಹತ್ 6,000mAh ಸಾಮರ್ಥ್ಯದ ಸೆಲ್ ಅನ್ನು ಅವಲಂಬಿಸಬಹುದಾದರೂ, 80 ವ್ಯಾಟ್‌ಗಳಲ್ಲಿ ಐಕ್ಯೂ Z9 ಮತ್ತು ಐಕ್ಯೂ Z9 ಟರ್ಬೋ ನಲ್ಲಿ ಚಾರ್ಜಿಂಗ್ ವೇಗವು ವೇಗವಾಗಿರುತ್ತದೆ ಎನ್ನಲಾಗಿದೆ. ಐಕ್ಯೂ Z9x ಕೇವಲ 40W ಸಾಮರ್ಥ್ಯದ ಚಾರ್ಜಿಂಗ್ ವೇಗವನ್ನು ಹೊಂದಿರಬಹುದು ಎನ್ನಲಾಗಿದೆ. ಇನ್ನು ಎಲ್ಲಾ ಮೂರು ಐಕ್ಯೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ ಒರ್ಜಿನ್‌ಓಎಸ್ 4 ಅನ್ನು ರನ್ ಮಾಡಲಿವೆ.


Click it and Unblock the Notifications








