Home
ಸುದ್ದಿಜಾಲ

ನಾಳೆ 5,500mAh ಬ್ಯಾಟರಿ ಇರುವ ಈ ಫೋನ್‌ ಖರೀದಿಗೆ ಲಭ್ಯ!..ಆಕರ್ಷಕ ಬೆಲೆ?

ಜನಪ್ರಿಯ ಐಕ್ಯೂ ಮೊಬೈಲ್ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗೆ ನೂತನವಾಗಿ ಬಿಡುಗಡೆ ಮಾಡಿರುವ ಐಕ್ಯೂ Z9s (iQOO Z9) ಸ್ಮಾರ್ಟ್‌ಫೋನ್‌ ಸ್ಟೈಲಿಶ್‌ ಡಿಸೈನ್‌ ಹಾಗೂ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಫೋನ್‌ ನಾಳೆ (ಆಗಷ್ಟ್‌ 29 ರಂದು) ಭಾರತದಲ್ಲಿ ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದ ಮೂಲಕ ಭಾರತದಲ್ಲಿ ನಾಳೆ ಐಕ್ಯೂ Z9s (iQOO Z9) ಸೇಲ್‌ ಶುರು ಮಾಡಲಿದೆ. ಈ ಫೋನ್‌ 8GB RAM +128GB, 8GB + 256GB ಹಾಗೂ 12GB + 256GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಇದರ ಜೊತೆಗೆ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಸಹ ಹೊಂದಿದೆ.

ನಾಳೆ 5,500mAh ಬ್ಯಾಟರಿ ಇರುವ ಈ ಫೋನ್‌ ಖರೀದಿಗೆ ಲಭ್ಯ!..ಆಕರ್ಷಕ ಬೆಲೆ?

ಇನ್ನು ಈ ಫೋನ್‌ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಇನ್ನುಳಿದಂತೆ ಐಕ್ಯೂ Z9s (iQOO Z9) ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಐಕ್ಯೂ Z9s ಫೋನ್‌ ಫೀಚರ್ಸ್‌

ಐಕ್ಯೂ Z9s (iQOO Z9) ಮೊಬೈಲ್‌ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಪಡೆದಿದ್ದು, ಇದರೊಂದಿಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಹೊಂದಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಸೌಲಭ್ಯ ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ.

ಹಾಗೆಯೇ ಈ ಮೊಬೈಲ್‌ 8GB RAM + 128GB, 8GB + 256GB ಹಾಗೂ 12GB + 256GB ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೇ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 44W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.

ಐಕ್ಯೂ Z9s ಫೋನ್‌ ಬೆಲೆ ಮಾಹಿತಿ

8GB + 128GB ವೇರಿಯಂಟ್‌ ಬೆಲೆಯು - 19,999ರೂ.
8GB + 256GB ವೇರಿಯಂಟ್‌ ಬೆಲೆಯು - 21,999ರೂ.
12GB + 256GB ವೇರಿಯಂಟ್‌ ಬೆಲೆಯು - 23,999ರೂ.

ನೂತನ ಐಕ್ಯೂ Z9s ಫೋನ್‌ ನಾಳೆ ( ಆಗಷ್ಟ್‌ 29 ರಿಂದ ) ಅಮೆಜಾನ್‌ ಹಾಗೂ ಐಕ್ಯೂ ಆನ್‌ಲೈನ್‌ ಸ್ಟೋರ್ ಮೂಲಕ ಪ್ರಥಮ ಮಾರಾಟ ಪ್ರಾರಮಭ ಮಾಡಲಿದೆ. ಇನ್ನು ಈ ಫೋನ್‌ ಟೈಟಾನಿಯಂ ಮ್ಯಾಟ್ ಮತ್ತು ಓನಿಕ್ಸ್ ಗ್ರೀನ್ ಕಲರ್‌ನಲ್ಲಿ ಲಭ್ಯವಾಗಲಿದೆ.

ಹಾಗೆಯೇ ಐಕ್ಯೂ Z9s ಪ್ರೊ ಫೋನ್‌ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಪಡೆದಿದ್ದು, 2392×1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಪಡೆದಿದೆ. ಇನ್ನ ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7 ಜೆನ್‌ 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಜೊತೆಗೆ ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, 5,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
iQOO Z9s First Sale Starts From Tomorrow in India, Know offer Price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+