Home
ಸುದ್ದಿಜಾಲ

ನಾಳೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರ್ತಿದೆ iQOO Z9s ಸರಣಿ ಫೋನ್‌ಗಳು!

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಐಕ್ಯೂ ಕಂಪನಿಯು ಭಾರತದಲ್ಲಿ ಮತ್ತೊಂದು ಹೊಸ ಫೋನ್‌ ಲಾಂಚ್‌ ಮಾಡಲು ಸಂಪೂರ್ಣ ತಯಾರಾಗಿದ್ದು, ಅದುವೇ ಐಕ್ಯೂ Z9s ಸರಣಿ (iQOO Z9s series). ಇನ್ನು ಈ ಸರಣಿಯು ಎರಡು ಆವೃತ್ತಿಗಳಲ್ಲಿ ಲಗ್ಗೆ ಇಡಲಿದ್ದು, ಅವುಗಳು ಕ್ರಮವಾಗಿ ಐಕ್ಯೂ Z9s ಹಾಗೂ ಐಕ್ಯೂ Z9s ಪ್ರೊ ಆಗಿವೆ. ಅಂದಹಾಗೆ ಈ ಎರಡು ಫೋನ್‌ಗಳು squircle ಕ್ಯಾಮೆರಾ ಮಾಡೆಲ್‌ ಪಡೆದಿರಲಿದ್ದು, ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಒಳಗೊಂಡಿರಲಿವೆ.

ಹೌದು, ಐಕ್ಯೂ ಸಂಸ್ಥೆಯು ನಾಳೆ (ಆಗಷ್ಟ್‌ 21 ರಂದು) ತನ್ನ ಹೊಸ ಐಕ್ಯೂ Z9s ಹಾಗೂ ಐಕ್ಯೂ Z9s ಪ್ರೊ ಫೋನ್‌ಗಳ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್‌ ಲಾಂಚ್‌ ಕುರಿತಾಗಿ ಅಮೆಜಾನ್‌ ಇ ಕಾಮರ್ಸ್‌ ಮೈಕ್ರೋ ಸೈಟ್‌ ಕೂಡಾ ತೆರೆದಿದೆ. ಇನ್ನು ಈ ಎರಡು ಫೋನ್‌ ಭಿನ್ನ ಮಾದರಿಯ ಫೀಚರ್ಸ್‌ ಪಡೆದಿರಲಿದ್ದು, ಆಕರ್ಷಕ ಡಿಸೈನ್‌ ಪಡೆದಿರುವ ಬಗ್ಗೆ ಲೀಕ್ ಫೋಟೋಗಳಿಂದ ತಿಳಿದಿದೆ.

ನಾಳೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರ್ತಿದೆ iQOO Z9s ಸರಣಿ ಫೋನ್‌ಗಳು!

ಅಂದಹಾಗೆ ಈ ಐಕ್ಯೂ Z9s ಫೋನ್‌ ಓನಿಕ್ಸ್ ಗ್ರೀನ್ ಮತ್ತು ಟೈಟಾನಿಯಂ ಮ್ಯಾಟ್ ಹಾಗೂ ಐಕ್ಯೂ Z9s ಪ್ರೊ ಮೊಬೈಲ್‌ ಲಕ್ಸ್ ಮಾರ್ಬಲ್ ಮತ್ತು ಫ್ಲಾಂಬೋಯಂಟ್ ಆರೆಂಜ್ ಕಲರ್‌ ಆಯ್ಕೆಗಳಲ್ಲಿ ಎಂಟ್ರಿ ಕೊಡಲಿದೆ. ಹಾಗಾದರೇ ಐಕ್ಯೂ Z9s ಹಾಗೂ ಐಕ್ಯೂ Z9s ಪ್ರೊ ಫೋನ್‌ಗಳ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ Z9s ಫೋನ್‌ ನಿರೀಕ್ಷಿತ ಫೀಚರ್ಸ್‌

ಐಕ್ಯೂ Z9s ಮೊಬೈಲ್‌ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಜೊತೆಗೆ 3D ಕರ್ವ್ಡ್‌ AMOLED ಡಿಸ್‌ಪ್ಲೇ ಪಡೆದಿದೆ. ಅಲ್ಲದೇ ಇದು IP64 ಧೂಳು ಮತ್ತು ನೀರಿನ ಪ್ರತಿರೋಧ ಸೌಲಭ್ಯ ಪಡೆದಿರಲಿದೆ. ಹಾಗೆಯೇ ಈ ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಐಕ್ಯೂ Z9s ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಸೌಲಭ್ಯವನ್ನು ಪಡೆದಿರಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿರುವುದು ಬಹುತೇಕ ಖಚಿತವಾಗಿದೆ. ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದೆ. ಇದರ ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ.

ಐಕ್ಯೂ Z9s ಪ್ರೊ ಫೋನ್‌ ನಿರೀಕ್ಷಿತ ಫೀಚರ್ಸ್‌

ಐಕ್ಯೂ Z9s ಪ್ರೊ ಮೊಬೈಲ್‌ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಜೊತೆಗೆ 3D ಕರ್ವ್ಡ್‌ AMOLED ಡಿಸ್‌ಪ್ಲೇ ಪಡೆದಿದೆ. ಅಲ್ಲದೇ ಇದು IP64 ಧೂಳು ಮತ್ತು ನೀರಿನ ಪ್ರತಿರೋಧ ಸೌಲಭ್ಯ ಪಡೆದಿರಲಿದೆ. ಹಾಗೆಯೇ ಈ ಫೋನ್‌ 4,500 nits ಪೀಕ್ ಬ್ರೈಟ್‌ನೆಸ್‌ ಸೌಲಭ್ಯ ಸಹ ಪಡೆದಿದ್ದು, ಇನ್ನು ಇದು 5,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಐಕ್ಯೂ Z9s ಸ್ಮಾರ್ಟ್‌ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಸೌಲಭ್ಯವನ್ನು ಪಡೆದಿರಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿರುವುದು ನಿಕ್ಕಿ ಎನ್ನಲಾಗಿದೆ. ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದೆ. ಇದರ ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ.

Best Mobiles in India

English summary
iQOO Z9s series is set to launch in india on tomorrow. check out other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+