Home
ಸುದ್ದಿಜಾಲ

ಅಂತೂ ಇಂತೂ ಲಾಂಚ್‌ ಆಯ್ತು iQOO Z9s ಸರಣಿ; ಸ್ಟೈಲಿಶ್‌ ಲುಕ್‌, ಆಕರ್ಷಕ ಬೆಲೆ!

ಐಕ್ಯೂ ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ಐಕ್ಯೂ Z9s ಸರಣಿ (iQOO Z9s series) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸರಣಿಯು ಐಕ್ಯೂ Z9s (iQOO Z9) ಹಾಗೂ ಐಕ್ಯೂ Z9s ಪ್ರೊ (iQOO Z9 pro) ಮಾಡೆಲ್‌ಗಳನ್ನು ಒಳಗೊಂಡಿದೆ. ಹಾಗೆಯೇ ಈ ಎರಡು ಹೊಸ ಮೊಬೈಲ್‌ಗಳು squircle ಕ್ಯಾಮೆರಾ ಮಾಡೆಲ್‌ ರಚನೆ ಹೊಂದಿದ್ದು, ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿವೆ.

ಹೌದು, ಐಕ್ಯೂ ಸಂಸ್ಥೆಯ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಐಕ್ಯೂ Z9s (iQOO Z9) ಹಾಗೂ ಐಕ್ಯೂ Z9s ಪ್ರೊ (iQOO Z9 pro) ಫೋನ್‌ಗಳ ಅನ್ನು ಲಾಂಚ್ ಮಾಡಿದೆ. ಈ ಎರಡು ಪೋನ್‌ಗಳು 50 ಮೆಗಾ ಪಿಕ್ಸಲ್‌ನ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಹಾಗೆಯೇ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿವೆ.

ಅಂತೂ ಇಂತೂ ಲಾಂಚ್‌ ಆಯ್ತು iQOO Z9s ಸರಣಿ; ಸ್ಟೈಲಿಶ್‌ ಲುಕ್‌, ಆಕರ್ಷಕ ಬೆಲೆ!

ಅಂದಹಾಗೆ ಈ ಐಕ್ಯೂ Z9s ಸರಣಿಯ ಫೋನ್‌ಗಳು 6.67 ಇಂಚಿನ ಡಿಸ್‌ಪ್ಲೇ ರಚನೆ ಹೊಂದಿದ್ದು, ಇದರ ಜೊತೆಗೆ 5500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಕೂಡಾ ಪಡೆದಿವೆ. ಇನ್ನುಳಿದಂತೆ ಐಕ್ಯೂ Z9s ಹಾಗೂ ಐಕ್ಯೂ Z9s ಪ್ರೊ ಫೋನ್‌ಗಳ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ Z9s ಫೋನ್‌ ಫೀಚರ್ಸ್‌

ಐಕ್ಯೂ Z9s ಮೊಬೈಲ್‌ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಪಡೆದಿದ್ದು, ಇದರೊಂದಿಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಪಡೆದಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಸೌಲಭ್ಯ ಇದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ. ಅಲ್ಲದೇ ಇದು 8GB RAM +128GB, 8GB + 256GB ಹಾಗೂ 12GB + 256GB ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಹಾಗೆಯೇ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 44W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.

ಐಕ್ಯೂ Z9s ಪ್ರೊ ಫೋನ್‌ ಫೀಚರ್ಸ್‌

ಐಕ್ಯೂ Z9s ಪ್ರೊ ಫೋನ್‌ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಪಡೆದಿದ್ದು, 2392×1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್‌ ರೇಟ್‌ ಸಪೋರ್ಟ್‌ ಪಡೆದಿದೆ. ಇನ್ನ ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7 ಜೆನ್‌ 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿದೆ. ಜೊತೆಗೆ 8GB RAM +128GB, 8GB + 256GB ಹಾಗೂ 12GB + 256GB ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಅದೇ ರೀತಿ ಈ ಫೋನ್‌ ಸಹ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸಲ್‌ ಆಗಿದೆ. ಅಲ್ಲದೇ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ


ಐಕ್ಯೂ Z9s ಫೋನ್‌ ಬೆಲೆ ಮಾಹಿತಿ

8GB +128GB - 19,999ರೂ.
8GB + 256GB - 21,999ರೂ.
12GB + 256GB - 23,999ರೂ.

ಐಕ್ಯೂ Z9s ಮೊಬೈಲ್‌ ಇದೇ ಆಗಷ್ಟ್‌ 29 ರಿಂದ ಅಮೆಜಾನ್‌ ಹಾಗೂ ಐಕ್ಯೂ ಆನ್‌ಲೈನ್‌ ಸ್ಟೋರ್ ಮೂಲಕ ಖರೀದಿಗೆ ಲಭ್ಯ ಆಗಲಿದೆ. ಇನ್ನು ಇದು ಟೈಟಾನಿಯಂ ಮ್ಯಾಟ್ ಮತ್ತು ಓನಿಕ್ಸ್ ಗ್ರೀನ್ ಕಲರ್‌ನಲ್ಲಿ ಲಭ್ಯವಾಗಲಿದೆ.

ಐಕ್ಯೂ Z9s ಪ್ರೊ ಬೆಲೆ ಮಾಹಿತಿ

8GB +128GB - 24,999ರೂ.
8GB + 256GB - 26,999ರೂ.
12GB + 256GB - 28,999ರೂ.

ಐಕ್ಯೂ Z9s ಪ್ರೊ ಮೊಬೈಲ್‌ ಇದೇ ಆಗಷ್ಟ್‌ 23 ರಿಂದ ಅಮೆಜಾನ್‌ ಹಾಗೂ ಐಕ್ಯೂ ಆನ್‌ಲೈನ್‌ ಸ್ಟೋರ್ ಮೂಲಕ ಖರೀದಿಗೆ ಲಭ್ಯ ಆಗಲಿದೆ. ಇನ್ನು ಇದು ಲಕ್ಸ್ ಮಾರ್ಬಲ್ ಮತ್ತು ಫ್ಲಾಂಬಾಯಿಂಟ್ ಆರೆಂಜ್ ಕಲರ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
iQOO Z9s and iQOO Z9s Pro Launched in India. Check out offers, Price, Specifications and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+