IQOO: ಇಂದು ಐಕ್ಯೂ Z9x 5G ಮೊದಲ ಸೇಲ್! ಈ ಹೊಸ ಫೋನ್‌ಗೆ ಆಫರ್ ಇದೆ
ಭಾರತದಲ್ಲಿ ಬಹಳ ಸದ್ದು ಮಾಡಿದ್ದ ಫೋನ್ ಐಕ್ಯೂ Z9x 5G(IQOO Z9x 5G). ಈ ಫೋನ್ ಅನ್ನು ಇಂದಿನಿಂದ ನೀವು ಖರೀದಿ ಮಾಡಬಹುದಾಗಿದೆ. ಇದನ್ನು ಕಳೆದ ವಾರ ಲಾಂಚ್ ಮಾಡಲಾಗಿತ್ತು. ಈ ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್, 120Hz ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ.
ಹೌದು, ಐಕ್ಯೂ Z9x 5G ಸ್ಮಾರ್ಟ್‌ಫೋನ್ ಅನ್ನು ನೀವು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಈ ಫೋನ್ ಮೇಲೆ ಬ್ಯಾಂಕ್ ಆಫರ್ ಸಹ ಇದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಏನು?, ಈ ಹೊಸ ಫೋನ್‌ಗೆ ಇರುವ ಕೊಡುಗೆ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಐಕ್ಯೂ Z9x 5G ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಅನ್ನು ನೀವು ಇಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಫೋನ್‌ನ ಬೆಲೆ ಬೇಸ್ 4GB/128GB ವೇರಿಯಂಟ್‌ಗೆ 12,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 6GB/128GB ಸ್ಟೋರೇಜ್ ಫೋನ್‌ಗೆ 14,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರ ಜೊತೆಗೆ 8GB/128GB ಸ್ಟೋರೇಜ್ ವೇರಿಯಂಟ್ ಆಯ್ಕೆಯ ಫೋನ್‌ಗೆ 15,999 ರೂ.ಗಳ ಬೆಲೆ ಇದೆ.
ಇನ್ನು ಈ ಫೋನ್ ಅನ್ನು ಖರೀದಿ ಮಾಡುವಾಗ ಕೆಲವು ಬ್ಯಾಂಕ್ ಕಾರ್ಡ್ ಬಳಕೆ ಮಾಡಿದರೆ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಅಂದರೆ ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಮೇಲೆ 1,000 ರೂಪಾಯಿಗಳ ತ್ವರಿತ ರಿಯಾಯಿತಿ ಇದೆ. ಇದು ಆರಂಭಿಕ ಬೆಲೆಯನ್ನು 11,999 ಕ್ಕೆ ತರುತ್ತದೆ. ಇದಲ್ಲದೆ, 6GB ಮತ್ತು 8GB ವೇರಿಯಂಟ್ ಮೇಲೆ 500 ರೂ. ಗಳ ಹೆಚ್ಚುವರಿ ಕೂಪನ್ ಸಹ ಇರಲಿದೆ. ಈ ಸ್ಮಾರ್ಟ್‌ಫೋನ್ ಸ್ಟಾರ್ಮ್ ಗ್ರೇ ಮತ್ತು ಟೊರ್ನಾಡೋ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದೆ.
ಐಕ್ಯೂ Z9x 5G ಸ್ಮಾರ್ಟ್‌ಫೋನ್ ಫೀಚರ್ಸ್: ಈ ಸ್ಮಾರ್ಟ್‌ಫೋನ್ ಈ ವಿಭಾಗದಲ್ಲಿ ಅತ್ಯಂತ ವೇಗದ ಫೋನ್ ಎಂದು ಹೇಳಲಾಗಿದೆ. ಅಂದರೆ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB ವರೆಗಿನ LPDDR4x RAM ಮತ್ತು 128GB UFS 2.2 ಇಂಟರ್ ಸ್ಟೋರೇಜ್ ಬಲ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 6.72-ಇಂಚಿನ ಫುಲ್‌ಹೆಚ್‌ಡಿ+ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್ ಮತ್ತು 1,000 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಈ ಫೋನ್‌ನಲ್ಲಿದೆ.
ಹಾಗೆಯೇ ಈ ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಅದಾಗ್ಯೂ ಇದು ಭಾರತದ ತೆಳ್ಳಗಿನ ಫೋನ್ ಆಗಿದೆ. ಇದು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದ್ದು, 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಫೋನ್ ಆಂಡ್ರಾಯ್ಡ್ 14-ಆಧಾರಿತ ಫನ್‌ಟಚ್ ಓಎಸ್ 14 ಅನ್ನು ಹಾಗೂ ಎರಡು ವರ್ಷಗಳ ಆಂಡ್ರಾಯ್ಡ್ ಓಎಸ್ ನವೀಕರಣಗಳನ್ನು ಮತ್ತು ಹೊಸ ಮೂರು ವರ್ಷಗಳ ನಿಯಮಿತ ಭದ್ರತಾ ಪ್ಯಾಚ್‌ಗಳನ್ನು ನೀಡುತ್ತದೆ.

ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾವನ್ನು ಹೊಂದಿದ್ದು, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನ್‌ನ ಇತರ ಫೀಚರ್ಸ್ ಏನೆಂದರೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್. ಹಾಗಿದ್ರೆ, ತಡ ಯಾಕೆ ಈ ಫೀಚರ್ಸ್ ನಿಮಗೆ ಇಷ್ಟ ಆದ್ರೆ ಈ ಫೋನ್ ಅನ್ನು ಇಂದು ಖರೀದಿ ಮಾಡಿಯೇ ಬಿಡಿ.


Click it and Unblock the Notifications








