Home
ಸುದ್ದಿಜಾಲ

ನಾಳೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಐಕ್ಯೂ Z9x 5G.. ಅಚ್ಚರಿಯ ಫೀಚರ್ಸ್‌!

ಜನಪ್ರಿಯ ಐಕ್ಯೂ ಸಂಸ್ಥೆಯ ಬಹುನಿರೀಕ್ಷಿತ ಐಕ್ಯೂ Z9x 5G ಫೋನ್‌ ನಾಳೆ (ಮೇ 16 ರಂದು) ದೇಶಿಯ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಇನ್ನು ಈ ಮೊಬೈಲ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 6 ಜೆನ್‌ 1 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದ್ದು, 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದೆ.

ಹೌದು, ಐಕ್ಯೂ ಸಂಸ್ಥೆಯು ನಾಳೆ ತನ್ನ ಐಕ್ಯೂ Z9x 5G ಫೋನ್‌ ಅನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಅಮೆಜಾನ್‌ ವೆಬ್‌ಸೈಟ್‌ ಈ ಮೊಬೈಲ್‌ ಬಿಡುಗಡೆ ಕುರಿತಾಗಿ ಈಗಾಗಲೇ ಮೈಕ್ರೋ ಸೈಟ್‌ ತೆರೆದಿದೆ. ಇನ್ನು ಈ ಫೋನ್‌ 12GB RAM ಮತ್ತು 256GB ಹಾಗೂ 8GB RAM ಮತ್ತು 128GB ವೇರಿಯಂಟ್‌ ಪಡೆದಿರುವ ನಿರೀಕ್ಷೆಗಳಿವೆ.

ನಾಳೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಐಕ್ಯೂ Z9x 5G.. ಅಚ್ಚರಿಯ ಫೀಚರ್ಸ್‌!

ಐಕ್ಯೂ Z9x 5G ಫೋನ್ ಬ್ಲ್ಯಾಕ್‌ ಹಾಗೂ ಲೈಟ್‌ ಗ್ರೀನ್‌ ಕಲರ್‌ ಆಯ್ಕೆಗಳಲ್ಲಿ ಬಿಡುಗಡೆ ಆಗಲಿದೆ. ಇದರಲ್ಲದೇ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದೆ. ಹಾಗಾದರೇ ಐಕ್ಯೂ Z9x 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ Z9x 5G ಫೋನ್‌ ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಐಕ್ಯೂ Z9x 5G ಮೊಬೈಲ್‌ 6.72 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇಯು ಫುಲ್‌ ಹೆಚ್‌ಡಿ+ ರೆಸಲ್ಯೂಶನ್ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಮತ್ತು 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಒಳಗೊಂಡಿರಲಿದೆ.

ಐಕ್ಯೂ Z9x 5G ಮೊಬೈಲ್‌ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ ಪವರ್‌ ಸೌಲಭ್ಯವನ್ನು ಪಡೆದಿರಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದಿರುವುದು ಬಹುತೇಕ ಖಚಿತವಾಗಿದೆ. ಈ ಫೋನ್‌ 12GB RAM ಮತ್ತು 256 GB ಹಾಗೂ 8GB RAM ಮತ್ತು 128 GB ವೇರಿಯಂಟ್‌ ಆಯ್ಕೆಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ.

ಐಕ್ಯೂ Z9x 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದೆ. ಇದರ ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಇನ್ನು ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಐಕ್ಯೂ Z9x 5G ಮೊಬೈಲ್‌ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಸಹ ಇರಲಿದೆ ಎನ್ನಲಾಗಿದೆ. ಈ ಫೋನಿನ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಬ್ಯಾಕ್‌ಅಪ್‌ ಒದಗಿಸಲಿದೆ ಎಂದು ಹೇಳಲಾಗಿದೆ.

ಹಾಗೆಯೇ ಬರೀ 30 ನಿಮಿಷಗಳ ಚಾರ್ಜ್ ನಲ್ಲಿ ಸುಮಾರು 10 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಮ್‌ ಅನ್ನು ಇದು ಒದಗಿಸಲಿದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಈ ಫೋನ್ 3.5mm ಆಡಿಯೊ ಜ್ಯಾಕ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌, ವೈ ಫೈ 5 ಮತ್ತು ಬ್ಲೂಟೂತ್ ಆವೃತ್ತಿ 5.1 ಪಡೆದಿರಲಿದೆ. ಅಲ್ಲದೆ ಈ ಫೋನ್ 199 ಗ್ರಾಂ ತೂಕ ಹೊಂದಿರಲಿದ್ದು, ಇನ್ನು ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಇದರ ಬೆಲೆ 1,499 (ಭಾರತದಲ್ಲಿ ಅಂದಾಜು ಬೆಲೆ 10,900 ರೂ.ಗಳು) ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
iQoo Z9x 5G India launch tomorrow: Expected Specifications and More. check out other benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+