Home
ಸುದ್ದಿಜಾಲ

IQOO: ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಸ್‌ ಮಾಹಿತಿ

ಐಕ್ಯೂ ಸ್ಮಾರ್ಟ್‌ಫೋನ್‌ಗಳು (IQOO Smartphones) ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದು, ಈ ನಡುವೆ ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ ಆರಂಭ ಆಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಕಳೆದ ತಿಂಗಳು ಚೀನಾದಲ್ಲಿ ಲಾಂಚ್‌ ಮಾಡಲಾಗಿದೆ.

ಹೌದು, ಐಕ್ಯೂ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಐಕ್ಯೂ Z9x 5G (IQOO Z9x 5G) ಹೆಸರಿನ ಹೊಸ Z ಸರಣಿ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ ಚೀನಾದ ವೇರಿಯಂಟ್‌ನಂತೆಯೇ ಇರಲಿದೆ ಎನ್ನಲಾಗಿದ್ದು, 8GB RAM ಆಯ್ಕೆ ಹಾಗೂ IP64 ರೇಟಿಂಗ್‌ನೊಂದಿಗೆ ಬರುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಏನಿರಬಹುದು?, ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ! ..

ಐಕ್ಯೂ Z9x 5G ಸ್ಮಾರ್ಟ್‌ಫೋನ್‌: ಐಕ್ಯೂ Z9x 5G ಚೀನಾದ ಪ್ರತಿರೂಪದಂತೆಯೇ ಇದೇ ರೀತಿಯ ಫೀಚರ್ಸ್‌ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಇದರರ್ಥ ಫೋನ್ 6.72 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ ಫುಲ್‌ಹೆಚ್‌ಡಿ+ ರೆಸಲ್ಯೂಶನ್ 120Hz ರಿಫ್ರೆಶ್ ರೇಟ್ ಮತ್ತು 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಫೋನ್ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಹೊಂದಿರುತ್ತದೆ. ಇದರ ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್‌ ಆಯ್ಕೆ ಪಡೆದಿಕೊಂಡಿದೆ.

ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ಫೋನ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಂಡಿರಲಿದೆ ಎನ್ನಲಾಗಿದ್ದು, ಆದಾಗ್ಯೂ, ವೇರಿಯಂಟ್‌ 12GB RAM ಮತ್ತು 256GB ಸ್ಟೋರೇಜ್‌ ವಿರುದ್ಧವಾಗಿ ಭಾರತೀಯ ವೇರಿಯಂಟ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ ಎನ್ನಲಾಗಿದೆ.

ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಪಡೆದಿರಲಿದೆ ಎನ್ನಲಾಗಿದ್ದು, 44W ವೇಗದ ಚಾರ್ಜಿಂಗ್‌ನೊಂದಿಗೆ ಬೃಹತ್ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ. 3.5mm ಆಡಿಯೊ ಜ್ಯಾಕ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌, ವೈ ಫೈ 5 ಮತ್ತು ಬ್ಲೂಟೂತ್ ಆವೃತ್ತಿ 5.1 ಸೇರಿವೆ. ಅಲ್ಲದೆ ಈ ಫೋನ್ 7.99 ಮಿಮೀ ದಪ್ಪ ಮತ್ತು 199 ಗ್ರಾಂ ತೂಕ ಹೊಂದಿದೆ.

ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ! ..

ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ನಿರೀಕ್ಷಿತ ಬೆಲೆ ಮತ್ತು ಲಭ್ಯತೆ: ಚೀನಾದಲ್ಲಿ ಈ ಫೋನ್‌ನ ಬೆಲೆ 1,499 (ಸುಮಾರು 10,900 ರೂ.ಗಳು) ನಿಂದ ಪ್ರಾರಂಭವಾಗುತ್ತದೆ. ಇದನ್ನು ಗಮನಿಸಿದರೆ, ಭಾರತದಲ್ಲಿ ಫೋನ್‌ನ ಬೆಲೆ 12,000 ರೂ.ಗಿಂತ ಕಡಿಮೆ ಇರಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ. ಹಾಗೆಯೇ ಈ ತಿಂಗಳೇ ಈ ಫೋನ್‌ ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ.

ಐಕ್ಯೂ Z9x 5G ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಗಣನೆ! ..

ಐಕ್ಯೂ ಫೋನ್‌ಗಳಿಗೆ ಆಫರ್: ಈ ನಡುವೆ ಅಮೆಜಾನ್‌ ಸಮ್ಮರ್ ಸೇಲ್‌ನಲ್ಲಿ ವಿಶೇಷ ಸೇಲ್‌ ಅನ್ನು ಆಯೋಜನೆ ಮಾಡಿದ್ದು, ಸಾಕಷ್ಟು ಐಕ್ಯೂ ಫೋನ್‌ಗಳಿಗೆ ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದರೆ ಐಕ್ಯೂ 12 ಸ್ಮಾರ್ಟ್‌ಫೋನ್ 52,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 49,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಐಕ್ಯೂ 11 ಸ್ಮಾರ್ಟ್‌ಫೋನ್‌ 64,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 41,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ ಮತ್ತು ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್‌ 35,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 31,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
IQOO is expected to unveil a new Z series smartphone named IQOO Z9x 5G in the Indian market soon. It is said that this smartphone will be similar to the Chinese variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+