IRCTC ತಾತ್ಕಾಲಿಕ ಸ್ಥಗಿತ!..ರೈಲು ಟಿಕೆಟ್ ಬುಕ್ ಮಾಡಲು ಹೀಗೆ ಮಾಡಿ!
ಅನೇಕರು ರೈಲು ಟಿಕೆಟ್ ಬುಕ್ ಮಾಡಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ವೆಬ್‌ಸೈಟ್ ಅಥವಾ ಆಪ್ ಅನ್ನು ಬಳಕೆ ಮಾಡುತ್ತಾರೆ. ಈ ಜನಪ್ರಿಯ ಐಆರ್‌ಸಿಟಿಸಿ ವೆಬ್‌ಸೈಟ್ ಹಾಗೂ ಆಪ್ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಗಂಟೆಗಳಿಂದ ತಾತ್ಕಾಲಿಕ ಸ್ಥಗಿತ ಆಗಿದೆ ಎಂದು ವರದಿಗಳಾಗಿವೆ.
ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಲು ಶುರು ಮಾಡಿದ ಬಳಿಕ, ಐಆರ್‌ಸಿಟಿಸಿ ಸಂಸ್ಥೆಯು ತಾಂತ್ರಿಕ ಕಾರಣಗಳಿಂದಾಗಿ, IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್ ಸೇವೆ ಲಭ್ಯವಿಲ್ಲ. CRIS ನ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ ಎಂದು ಐಆರ್‌ಸಿಟಿಸಿ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಟ್ವಟಿರ್) ತಿಳಿಸಿದೆ.

ಈ ಸ್ಥಗಿತವು IRCTC ಬಳಕೆದಾರರಿಗೆ ಟಿಕೆಟ್ ಬುಕಿಂಗ್ ಮೇಲೆ ಪರಿಣಾಮ ಬೀರಿದ್ದು, ಈ ತಾಂತ್ರಿಕ ದೋಷದಿಂದಾಗಿ ವೆಬ್‌ಸೈಟ್ ಸುಮಾರು ಮುಂಜಾನೆ 3:30 ಕ್ಕೆ ಸ್ಥಗಿತಗೊಂಡಿರುವುದಾಗಿ ವರದಿಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಜುಲೈ 25 ರ ಮುಂಜಾನೆ ಕೆಲವು ಬಳಕೆದಾರರು IRCTC ಡೌನ್ ಆಗಿದೆ ಅಥವಾ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಇನ್ನು ಮುಂಜಾನೆ ಸುಮಾರು 8 ಗಂಟೆಯ ನಂತರ, ಬುಕಿಂಗ್‌ನಲ್ಲಿ ಹಣ ಕಡಿತವಾಗುತ್ತಿದೆ ಆದರೆ ಟಿಕೆಟ್ ಕನ್ಫರ್ಮ್ ಮಾಡಲು ಆಗುತ್ತಿಲ್ಲ ಎಂದು ಕೆಲವರು ಸಮಸ್ಯೆಯನ್ನು ವರದಿ ಮಾಡಿದ್ದಾರೆ.
ಪರ್ಯಾಯ ರೈಲು ಟಿಕೆಟ್ ಬುಕಿಂಗ್ ಮಾರ್ಗ:
IRCTC ವೆಬ್‌ಸೈಟ್ ಡೌನ್ ಆಗಿರುವುದರಿಂದ, ಸಂಸ್ಥೆಯು ಪ್ರಯಾಣಿಕರು ಟ್ರೈನ್ ಟಿಕೆಟ್ ಬುಕ್ ಮಾಡಲು ಬಯಸುವ ಜನರು PRS ಕೌಂಟರ್‌ಗೆ ಭೇಟಿ ನೀಡಬಹುದು ಅಥವಾ ಮೇಕ್ ಮೈ ಟ್ರಿಪ್ ಆಪ್ ಮೂಲಕ ಬುಕ್ ಮಾಡಬಹುದು, ಇಲ್ಲವೇ ಅಮೆಜಾನ್ ಮುಂತಾದ ವೆಬ್ ಸೇವಾ ಏಜೆಂಟ್‌ಗಳನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಹೇಳಿದೆ.
Ixigo ಟ್ರೈನ್ಸ್ ಆಪ್ : ಪ್ರಮುಖ ರೈಲು ಟಿಕೆಟ್ ಬುಕಿಂಗ್ ಆಪ್ಸ್‌ಗಳ ಪೈಕಿ Ixigo ಸಹ ಒಂದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸ ಬಹುದಾಗಿದೆ. ಟ್ರೈನ್ ಲೈವ್ ಸ್ಟೇಟಸ್ ಟ್ರಾಕಿಂಗ್ ಮಾಡಬಹುದಾಗಿದ್ದು, ಹಾಗೆಯೇ PNR ಸ್ಟೇಟಸ್ ಸಹ ಚೆಕ್ ಮಾಡಬಹುದಾಗಿದೆ. ಇನ್ನು ಈ ಆಪ್ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯ. ಈ ಆಪ್‌ನಲ್ಲಿ ವಿಮಾನಗಳು, ಬಸ್ಸುಗಳು, ಹೋಟೆಲ್‌ಗಳು ಮತ್ತು ಕ್ಯಾಬ್‌ಗಳನ್ನು ಸಹ ಕಾಯ್ದಿರಿಸಬಹುದು.
ರೈಲು ಯಾತ್ರಾ (RailYatra) ಆಪ್ : ರೈಲು ಯಾತ್ರಾ ಆಪ್ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಆಪ್ ಆಗಿದೆ. ಈ ರೈಲು ಯಾತ್ರಾ ಆಪ್ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಆಪ್‌ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.
ಮೇಕ್ ಮೈ ಟ್ರಿಪ್ (MakeMy Trip) ಆಪ್ : ಪ್ರಯಾಣಿಕರು ಈ ಒಂದೇ ಅಪ್ಲಿಕೇಶನ್ ಮೂಲಕ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಈ ಆಪ್ ಒಂದು ಉತ್ತಮ ನಿಲುಗಡೆ. ಪ್ರಯಾಣಿಕರು ಈ ಆಪ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಪರಿಶೀಲಿಸಬಹುದು. ಹಾಗೆಯೇ ಟ್ರೈನ್ ಲೈವ್ ರನ್ನಿಂಗ್ ಸ್ಟೇಟಸ್ ಅನ್ನು ತಿಳಿಯಬಹುದಾಗಿದೆ. PNR ಸ್ಟೇಟಸ್ ಸಹ ಚೆಕ್ ಮಾಡಬಹುದಾಗಿದೆ.


Click it and Unblock the Notifications