IRCTCಯಿಂದ ಬಳಕೆದಾರರಿಗೆ ಎಚ್ಚರಿಕೆ!..ನೀವು ಈ ತಪ್ಪು ಮಾಡಬೇಡಿ!
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC - ಐಆರ್‌ಸಿಟಿಸಿ) ಇದೀಗ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಹತ್ವದ ಸಲಹೆಯನ್ನು ತಿಳಿಸಿದೆ. irctcconnect.apk ಹೆಸರಿನ ಫೈಲ್ ಅನ್ನು ಯಾವುದೇ ಕಾರಣಕ್ಕೂ ಇನ್‌ಸ್ಟಾಲ್ ಮಾಡಬಾರದು ಎಂದು ಐಆರ್‌ಸಿಟಿಸಿ ಬಳಕೆದಾರರಿಗೆ ಸೂಚಿಸಿದೆ.
ಹೌದು, ಐಆರ್‌ಸಿಟಿಸಿ irctcconnect.apk ಹೆಸರಿನ ಫೈಲ್ ಅನ್ನು ಡೌನ್‌ಲೋಡ್ ಮಾಡದಂತೆ ತಿಳಿಸಿದೆ. irctcconnect.apk ಫೈಲ್ ಅನ್ನು ಇನ್‌ಸ್ಟಾಲ್ ಮಾಡುವುದರಿಂದ ಬಳಕೆದಾರರ ಮಾಹಿತಿ, ಪ್ರಮುಖ ಡೇಟಾವನ್ನು ಕದಿಯಬಹುದಾದ ಮಾಲ್‌ವೇರ್ ಫೋನ್ ನಲ್ಲಿ ಸೇರ್ಪಡೆಗೆ ಕಾರಣವಾಗುತ್ತದೆ ಎಂದು ಐಆರ್‌ಸಿಟಿಸಿ ಸಂಸ್ಥೆ ಹೇಳಿಕೊಂಡಿದೆ.

ದುರುದ್ದೇಶಪೂರಿತ ಫೈಲ್ ಅನ್ನು ಟೆಲಿಗ್ರಾಮ್, ವಾಟ್ಸಾಪ್ ಮತ್ತು ಇತರ ಸೋಶೀಯಲ್ ಮೀಡಿಯಾ ಚಾನಲ್‌ಗಳ ಮೂಲಕ ಶೇರ್ ಮಾಡಲಾಗುತ್ತಿದೆ. irctcconnect.apk ಫೈಲ್ ಅನ್ನು ಇನ್‌ಸ್ಟಾಲ್ ಮಾಡುವುದರಿಂದ ಬಳಕೆದಾರರ ಯುಪಿಐ ವಿವರಗಳು, ಬ್ಯಾಂಕಿಂಗ್ ಮಾಹಿತಿ, ಪಾಸ್‌ವರ್ಡ್ ಸೇರಿಸಂತೆ ಇತ್ಯಾದಿ ವೈಯಕ್ತಿಕ ಮಾಹಿತಿ, ಪ್ರಮುಖ ಡೇಟಾವನ್ನು ಕದಿಯಬಹುದು. ಹೀಗಾಗಿ ಈ ರೀತಿಯ ಯಾವುದೇ ಅನಧಿಕೃತ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡದಂತೆ ಸಂಸ್ಥೆಯು ತನ್ನ ಬಳಕೆದಾರರನ್ನು ತಿಳಿಸಿದೆ.
ದುರುದ್ದೇಶಪೂರಿತ ಆಪ್ URL ನೊಂದಿಗೆ ಫಿಶಿಂಗ್ ವೆಬ್‌ಸೈಟ್ ಅನ್ನು ಹೋಸ್ಟ್ ಮಾಡುತ್ತಿದೆ. ಹೀಗಾಗಿ https://irctc.creditmobile.site ಸೈಟ್‌ನಲ್ಲಿ ಬಹುತೇಕ ಎಲ್ಲವೂ ಐಆರ್‌ಸಿಟಿಸಿ ಸೈಟ್ ನಂತೆಯೇ ಕಾಣಿಸುತ್ತದೆ. ಆದರೆ ಬಳಕೆದಾರರು ಯಾವುದೇ ವಿವರಗಳನ್ನು ನಮೂದಿಸಿದರೆ, ಸ್ಕ್ಯಾಮರ್‌ಗಳು ಅವರ ಪಾಸ್‌ವರ್ಡ್/ ಯೂಸರ್ ಐಡಿ ತಿಳಿದುಕೊಳ್ಳುತ್ತಾರೆ ಹಾಗೂ ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ.

ಅಧಿಕೃತ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ಮಾತ್ರವೇ ರೈಲು ಟಿಕೆಟ್ ಬುಕಿಂಗ್‌ಗಾಗಿ ಬಳಕೆದಾರರು ಅಧಿಕೃತ ಐಆರ್‌ಸಿಟಿಸಿ (IRCTC) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಐಆರ್‌ಸಿಟಿಸಿ ತಿಳಿಸಿದೆ. ಇನ್ನು ಹೊಸದಾಗಿ IRCTC ಖಾತೆ ರಚಿಸಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

IRCTC ನಲ್ಲಿ ಹೊಸ ಖಾತೆ ರಚಿಸಲು ಈ ಕ್ರಮ ಅನುಸರಿಸಿ:
ಹಂತ 1 : ಅಧಿಕೃತ IRCTC ವೆಬ್‌ಸೈಟ್‌ಗೆ ಹೋಗಿ: irctc.co.in/nget/train-search.
ಹಂತ 2 : ಬಳಿಕ, ಪೇಜನ್ ಮೇಲ್ಭಾಗದಲ್ಲಿ ಲಭ್ಯವಿರುವ ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3 : ನಿಮ್ಮ ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಸೇರಿದಂತೆ ಇತರ ವಿಷಯಗಳ ಜೊತೆಗೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 4 : ಖಾತೆಗೆ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ 5 : ನಂತರ, ಎಂದಾದರೂ ಪಾಸ್‌ವರ್ಡ್ ಅನ್ನು ರಿಸೇಟ್ ಪ್ರಯತ್ನಿಸುವಾಗ ಬಳಸಲಾಗುವ ಭದ್ರತಾ ಪ್ರಶ್ನೆಯನ್ನು ಆಯ್ಕೆ ಮಾಡಿ.

ಹಂತ 6 : ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ನಿಮ್ಮ ವಿವರಗಳನ್ನು ಪರಿಶೀಲಿಸಿ.
ಹಂತ 7 : ಸಲ್ಲಿಸು ಬಟನ್ ಒತ್ತಿರಿ.
ಹಂತ 8 : ಅದರ ನಂತರ, ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ ಗಳಾಗಿ ಇ ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 9 : ನಂತರ, ಒದಗಿಸಿದ ಜಾಗದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.
ಹಂತ 10 : ಕೊನೆಯದಾಗಿ, ಮತ್ತೊಮ್ಮೆ ಸಲ್ಲಿಸು (submit) ಆಯ್ಕೆ ಒತ್ತಿರಿ.


Click it and Unblock the Notifications








