IRCTCಯಿಂದ ಹೊಸ ಸೇವೆ: ಹಣವಿಲ್ಲದಿದ್ದರೂ ರೈಲ್ವೆ ಟಿಕೆಟ್ ಬುಕ್ ಮಾಡಬಹುದು!

|

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ-(Indian Railway Catering and Tourism Corporation -IRCTC) ರೈಲ್ವೆ ವಲಯದಲ್ಲಿ ಹಲವು ಅನಕೂಲಕರ ಸೇವೆಗಳನ್ನು ನೀಡುತ್ತಾ ಸಾಗಿದೆ. ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಹಾಗೂ ರೈಲಿನಲ್ಲಿ ಫುಡ್‌ ಆರ್ಡರ್ ಪ್ರಯೋಜನಗಳನ್ನು ಒದಗಿಸಿರೊ ಐಆರ್‌ಸಿಟಿಸಿ ಇದೀಗ ಬಳಕೆದಾರರಿಗೆ ಭಾರಿ ಕೊಡುಗೆಯನ್ನು ಘೋಷಿಸಿದೆ.

ಐಆರ್‌ಸಿಟಿಸಿ ಸಂಸ್ಥೆ

ಹೌದು, ಐಆರ್‌ಸಿಟಿಸಿ ಸಂಸ್ಥೆಯು ಹೊಸದೊಂದು ಸೇವೆಯನ್ನು ಪರಿಚಯಿಸಿದ್ದು, ಈ ಸೇವೆಯಲ್ಲಿ ಪ್ರಯಾಣಿಕರು ಮೊದಲು ಟಿಕೆಟ್ ಬುಕ್ಕ್ ಮಾಡಿ ನಂತರ ಹಣ ಪಾವತಿಸುವ ಅವಕಾಶ ಲಭ್ಯವಾಗಿಸಿದೆ.ಇನ್ನು ಸಂಸ್ಥೆಯು ಈ ಹೊಸ ಸೇವೆಯನ್ನು ‘ಬುಕ್ ನೌ, ಪೇ ಲೇಟರ್'- Book Now, Pay Later ಎಂದು ಕರೆದಿದೆ. ಪ್ರಯಾಣಿಕರು e-Pay Later-ಇ-ಪೇ ಲೇಟರ್ ಆಯ್ಕೆಯಲ್ಲಿ ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ.

ಇ-ಪೇ ಲೇಟರ್

ಪ್ರಯಾಣಿಕರು ಐಆರ್‌ಸಿಟಿಸಿಯಲ್ಲಿನ "ಇ-ಪೇ ಲೇಟರ್" ಆಯ್ಕೆಯ ಮೂಲಕ ಯಾವುದೇ ತೊಂದರೆಯಿಲ್ಲದ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಈಗ ಸಾಧ್ಯವಾಗುತ್ತದೆ. ಇನ್ನು ಐಆರ್‌ಸಿಟಿಸಿಯ ಈ ಹೊಸ ಸೇವೆಯು ಕಾಯ್ದಿರಿಸಿದ ಟಿಕೆಟ್ ಮತ್ತು ತತ್ಕಾಲ್ ಟಿಕೆಟ್ ಪಡೆಯುವ ಇಬ್ಬರೂ ಪ್ರಯಾಣಿಕರಿಗೆ ಲಭ್ಯವಾಗಲಿದೆ. ರೈಲ್ವೆ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಅಗತ್ಯವಾದ ಹಣವಿಲ್ಲದ ಪ್ರಯಾಣಿಕರು ಇ-ಪೇ ಲೇಟರ್ ಸೇವೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಪೇ ಲೇಟರ್ ಸೇವೆ

ಬುಕ್ ನೌ, ಪೇ ಲೇಟರ್ ಸೇವೆಯನ್ನು ಪಡೆಯಲು ಪ್ರಯಾಣಿಕರು ಮೊದಲು ಐಆರ್‌ಸಿಟಿಸಿ ಖಾತೆಗೆ ಲಾಗ್ ಇನ್ ಆಗಬೇಕು. ತದನಂತರ ಟಿಕೆಟ್ ಕಾಯ್ದಿರಿಸಲು ಪ್ರಯಾಣದ ವಿವರಗಳನ್ನು ಭರ್ತಿ ಮಾಡುವುದು. ಆಗ ಟಿಕೆಟ್ ಹಣ ಪಾವತಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪೇ ಲೇಟರ್-ನಂತರ ಪಾವತಿಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳುವುದು. ಆಗ ಪ್ರಯಾಣಿಕರು ಐಆರ್‌ಸಿಟಿಸಿ ಆಪ್‌ನಲ್ಲಿ ನೋಂದಾಯಿತ ಮೊಬೈಲ್ ನಂಬರ್ ಮೂಲಕ ಇ-ಪೇ ಲೇಟರ್ ವೆಬ್‌ಸೈಟ್‌ಗೆ ಲಾಗ್‌ ಇನ್ ಆಗಬೇಕು. ನಂತರ ಮೊಬೈಲ್ ನಂಬರ್‌ಗೆ ಬರುವ ಓಟಿಪಿ ಯನ್ನು ಸರಿಯಾಗಿ ನಮೂದಿಸುವುದು. ಬುಕ್ಕಿಂಗ್ ಮೊತ್ತವನ್ನು ದೃಢಿಕರಿಸಿ ರೈಲ್ವೆ ಟಿಕೆಟ್ ಬುಕ್ ಮಾಡುವುದು.

ಬಾಕಿ ಮೊತ್ತ

ಪೇ ಲೇಟರ್ ಸೇವೆ ಬಳಸಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಬಾಕಿ ಮೊತ್ತವನ್ನು ಮರು ಪಾವತಿಸಲು ಸಂಸ್ಥೆಯು 14 ದಿನಗಳ ಅವಧಿಯನ್ನು ನೀಡಿದೆ. ಒಂದು ವೇಳೆ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು 14 ದಿನಗಳಲ್ಲಿ ಬಾಕಿ ಮೊತ್ತ ಪಾವತಿಸಲು ವಿಫಲರಾದರೆ ಶೇಕಡಾ 3.50 ರಷ್ಟು ಬಡ್ಡಿ ಶುಲ್ಕವನ್ನು ಸೇರಿಸಿ ಪಾವತಿಸಬೇಕಾಗುತ್ತದೆ.

Best Mobiles in India

English summary
IRCTC has introduced a new policy, which is called 'Book Now, Pay Later' service. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X