Home
ಸುದ್ದಿಜಾಲ

IRCTC ಯಿಂದ ಹೊಸ ಸೌಲಭ್ಯ; ಶೀಘ್ರದಲ್ಲೇ ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಸೌಲಭ್ಯ !

ಭಾರತೀಯ ರೈಲ್ವೇ ಇಲಾಖೆಯು ತನ್ನ ರೈಲುಗಳ ಚಲನೆಯ ವೇಗದಷ್ಟೇ ಎಲ್ಲಾ ವ್ಯವಸ್ಥೆಯಲ್ಲೂ ಡಿಜಿಟಲೀಕರಣಕ್ಕೆ ಮುಂದಾಗುತ್ತಿದೆ. ಇದರ ಭಾಗವಾಗಿಯೇ ಇನ್ಮುಂದೆ ಪ್ರಯಾಣಿಕರು ಧ್ವನಿ ಆಧಾರಿತ ಇ-ಟೆಕೆಟ್‌ ಬುಕಿಂಗ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಹೌದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಹೊಸ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಯಾಣಿಕರಿಗೆ ಪರಿಚಯಿಸಲು ಮುಂದಾಗಿದೆ. ಈಗಾಗಲೇ ರೈಲು ಇಲಾಖೆಯು ಆಪ್‌ ಮೂಲಕ ಹಾಗೂ ಇನ್ನಿತರೆ ಡಿಜಿಟಲ್ ಮಾರ್ಗಗಳ ಮೂಲಕ ಟಿಕೆಟ್‌ ಬುಕ್‌ ಮಾಡಲು ಅವಕಾಶ ನೀಡಿತ್ತು. ಅದಾಗ್ಯೂ ಈಗ ಪರಿಚಯಿಸಲಾಗುತ್ತಿರುವ ಹೊಸ ಫೀಚರ್ಸ್‌ ಪ್ರಯಾಣಿಕರ ಪ್ರಯಾಣಕ್ಕೆ ಇನ್ನಷ್ಟು ಸಹಕಾರಿ.

IRCTC ಯಿಂದ ಹೊಸ ಸೌಲಭ್ಯ; ಶೀಘ್ರದಲ್ಲೇ ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಸೌಲಭ್ಯ

ಏನಿದು ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್?

IRCTC ಯ ಈ ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಸೌಲಭ್ಯದ ಮೂಲಕ ಪ್ರಯಾಣಿಕರು ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸುಲಭ ಮತ್ತು ತ್ವರಿತವಾಗಿ ಮಾಡಬಹುದಾಗಿದೆ. ಇದಕ್ಕಾಗಿ ಈಗಾಗಲೇ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರದಲ್ಲಿ'ಆಸ್ಕ್ ದಿಶಾ' ಎಂಬ ಫೀಚರ್ಸ್‌ ಅನ್ನು ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದ್ದು, ಇದರಿಂದ ಯಾವುದೇ ಸಮಯದಲ್ಲೂ ಪ್ರಯಾಣಿಕರು ರೈಲ್ವೇ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಇನ್ಮುಂದೆ ಟಿಕೆಟ್‌ ಬುಕಿಂಗ್‌ನಲ್ಲೂ ಇದು ಸೇವೆ ನೀಡಲಿದೆ.

ಆಸ್ಕ್ ದಿಶಾ ಗ್ರಾಹಕರಿಗೆ ಹೇಗೆ ಸಹಾಯ ಮಾಡಲಿದೆ?

ಇನ್ನು ಆಸ್ಕ್ ದಿಶಾ 2.0 ನೊಂದಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು, ಗ್ರಾಹಕರು ಚಾಟ್‌ಬಾಟ್‌ಗಾಗಿ ಟೆಕ್ಸ್ಟ್‌ ಅಥವಾ ಧ್ವನಿ ಆಜ್ಞೆಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಜೊತೆಗೆ ಪ್ರಯಾಣಿಕರು ಟಿಕೆಟ್‌ಗಳನ್ನು ರದ್ದುಗೊಳಿಸಲು ಹಾಗೂ ರದ್ದುಪಡಿಸಿದ ಟಿಕೆಟ್‌ಗಳ ಮರುಪಾವತಿ ಸ್ಟೇಟಸ್‌ ಅನ್ನು ಪರಿಶೀಲಿಸಲು ಇದು ಸಹಾಯಕಾರಿಯಾಗಲಿದೆ. ಹಾಗೆಯೇ ಪ್ಲಾಟ್‌ಫಾರ್ಮ್‌ ನಿಂದ ಹಿಡಿದು ಪಿಎನ್‌ಆರ್‌ ಸ್ಟೇಟಸ್‌ ವರೆಗೂ ಎಲ್ಲಾ ಮಾಹಿತಿಯನ್ನು ಪ್ರಯಾಣಿಕರು ಕೇಳಬಹುದಾಗಿದೆ.

ಇದಲ್ಲದೆ ಪ್ರಯಾಣಿಕರಿಗೆ ತಮ್ಮ ರೈಲು ಪ್ರಯಾಣದ ಬೋರ್ಡಿಂಗ್ ಮತ್ತು ಗಮ್ಯಸ್ಥಾನವನ್ನು ಬದಲಾಯಿಸಲು ಅವಕಾಶ ಕಲ್ಪಿಸಿಕೊಡಲಿದ್ದು, ಇದರೊಂದಿಗೆ ರೈಲು ಟಿಕೆಟ್‌ಗಳನ್ನು ಪೂರ್ವವೀಕ್ಷಿಸಲು ಇದರಲ್ಲಿ ಅವಕಾಶ ನೀಡಲಾಗುತ್ತದೆ. ಜೊತೆಗೆ ಅದನ್ನು ಪ್ರಿಂಟ್‌ ಸಹ ತೆಗೆದುಕೊಳ್ಳಬಹುದಾಗಿದ್ದು, ಬೇಕಾದವರ ಜೊತೆಗೆ ಶೇರ್‌ ಕೂಡ ಮಾಡಿಕೊಳ್ಳಬಹುದು. ಇನ್ನು ಈ ಆಸ್ಕ್ ದಿಶಾ 2.0 ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಸೇವೆ ನೀಡಲಿದೆ.

IRCTC ಯಿಂದ ಹೊಸ ಸೌಲಭ್ಯ; ಶೀಘ್ರದಲ್ಲೇ ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಸೌಲಭ್ಯ

ಇದರಲ್ಲಿ ಪ್ರಮುಖ ವಿಶೇ‍ಷ ಎಂದರೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಟಿಕೆಟ್‌ ಬುಕ್‌ ಮಾಡಲು ಸಾಮಾನ್ಯವಾಗಿ ಯೂಸರ್‌ ಐಡಿ ನಮೂದು ಮಾಡಬೇಕು. ಆದರೆ ಈ ಹೊಸ ಫೀಚರ್ಸ್‌ನಲ್ಲಿ ಪ್ರಯಾಣಿಕರು IRCTC ಯೂಸರ್‌ ಐಡಿ ನಮೂದು ಮಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ ಸರಳ ರೀತಿಯಲ್ಲಿ ಟಿಕೆಟ್‌ ಅನ್ನು ಬುಕ್‌ ಮಾಡಿಕೊಳ್ಳಬಹುದು.

ಈ ಸೇವೆ ಎಂದಿನಿಂದ ಲಭ್ಯ?

ರೈಲ್ವೇ ಟಿಕೆಟ್‌ ಬುಕ್‌ ಮಾಡಲು ಹಲವು ಪ್ಲಾಟ್‌ಫಾರ್ಮ್‌ಗಳಿದ್ದರೂ ಹೆಚ್ಚಿನ ಬಳಕೆಯಿಂದಾಗಿ ಹಲವು ಬಾರಿ ಟಿಕೆಟ್‌ ಬುಕ್‌ ಮಾಡಲು ಸಾಧ್ಯವಾಗುವುದಿಲ್ಲ. ಇದರ ನಡುವೆ ಈಗ ಆಸ್ಕ್ ದಿಶಾ ಮೂಲಕವೇ ಟಿಕೆಟ್‌ ಬುಕ್‌ ಮಾಡುವ ಸೌಲಭ್ಯ ಕಲ್ಪಿಸುತ್ತಿರುವುದು ಪ್ರಯಾಣಿಕರಿಗೆ ತೊಂದರೆ ಮುಕ್ತ ಬುಕಿಂಗ್‌ ವ್ಯವಸ್ಥೆಯಾಗಿರಲಿದೆ. ಜೊತೆಗೆ ಈ ಫೀಚರ್ಸ್ ಅನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

IRCTC ಯಿಂದ ಹೊಸ ಸೌಲಭ್ಯ; ಶೀಘ್ರದಲ್ಲೇ ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಸೌಲಭ್ಯ

ಕೋ ರೋವರ್ ಪ್ರೈ. ಲಿ ಎಂಬ ಹೆಸರಿನ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ನ ಸಹಾಯದಿಂದ IRCTC ಆಸ್ಕ್ ದಿಶಾ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಅಕ್ಟೋಬರ್ 2018 ರಿಂದ ಇದು ಕಾರ್ಯನಿರ್ವಹಿಸುತ್ತಿದೆ. ಅದರಂತೆ ಈ ಎಐ ಚಾಲಿತ ಇ-ಟಿಕೆಟಿಂಗ್ ಫೀಚರ್ಸ್‌ IRCTC ಯ ಬ್ಯಾಕೆಂಡ್ ಮೂಲ ಸೌಕರ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎನ್ನಲಾಗಿದ್ದು, ಪ್ರತಿ ದಿನದ ಆನ್‌ಲೈನ್ ಟಿಕೆಟ್ ಬುಕಿಂಗ್ ಸಾಮರ್ಥ್ಯವನ್ನು ಇದು ಮತ್ತಷ್ಟು ಸುಧಾರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Best Mobiles in India

English summary
IRCTC upcoming voice-based e-ticket booking feature will make the online reserved ticket booking process very easier.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+