ರೈಲು ಪ್ರಯಾಣಿಕರೇ, ಈ ನಂಬರ್ ಸೇವೆ ಮಾಡಿಕೊಳ್ಳಿ!.ಇನ್ಮುಂದೆ ಫುಡ್ ಆರ್ಡರ್ ಸುಲಭ!
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸಂಸ್ಥೆಯು ಕಳೆದ ವರ್ಷ ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವ ಸೇವೆ ಪ್ರಾರಂಭಿಸಿ ಗಮನ ಸೆಳೆದಿತ್ತು. ಇದೀಗ ಸದ್ಯದಲ್ಲೇ ವಾಟ್ಸಾಪ್ ಮೂಲಕ ಆಹಾರ ಆರ್ಡರ್ ಸೇವೆಯನ್ನು ಹೆಚ್ಚಿನ ರೈಲು ಮಾರ್ಗಗಳಲ್ಲಿ ಆರಂಭಿಸಲು ಯೋಜಿಸುತ್ತಿದೆ. ಅಂದಹಾಗೆ ಐಆರ್‌ಸಿಟಿಸಿ ಸಂಸ್ಥೆಯ ವಾಟ್ಸಾಪ್ ಫುಡ್ ಆರ್ಡರ್ ಚಾಟ್‌ಬಾಟ್ ಕೃತಕ ಬುದ್ಧಿಮತ್ತೆ ಸಪೋರ್ಟ್ ಪಡೆದಿರಲಿದೆ.

IRCTC ಸಂಸ್ಥೆಯು ಈಗಾಗಲೇ ಆನ್‌ಲೈನ್ ಫುಡ್ ವಿತರಣಾ ಸೇವೆಗಾಗಿ ವಾಟ್ಸಾಪ್ ಸಂಖ್ಯೆ +91 8750001323 ಪರಿಚಯಿಸಿದ್ದು, ಕೆಲವು ಪ್ರಮುಖ ರೈಲುಗಳಲ್ಲಿ ಸೇವೆ ಶುರು ಮಾಡಿದೆ. ಆದ್ರೆ, ಈಗ ಈ ಸೇವೆಯನ್ನು ಮತ್ತಷ್ಟು ರೈಲ್‌ಗಳಗೂ ವಿಸ್ತರಿಸಲು ಯೋಜಿಸುತ್ತಿದೆ.
'ಇ-ಕ್ಯಾಟರಿಂಗ್ ಸೇವೆಗಳಿಗಾಗಿ ವಾಟ್ಸಾಪ್ ಕಮ್ಯೂನಿಕೇಶನ್ ಅನ್ನು ಆಯ್ದ ರೈಲುಗಳು ಮತ್ತು ಪ್ರಯಾಣಿಕರ ಮೇಲೆ ಅಳವಡಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಸಲಹೆಗಳ ಆಧಾರದ ಮೇಲೆ, ಸಂಸ್ಥೆಯು ಇತರೆ ರೈಲುಗಳಲ್ಲಿ ಇದನ್ನು ಸಕ್ರಿಯಗೊಳಿಸುತ್ತದೆ ಎಂದು ಪಿಟಿಐ ರೈಲ್ವೆಯ ಹೇಳಿಕೆಯನ್ನು ಉಲ್ಲೇಖಿಸಿದೆ.

IRCTC ತನ್ನ ಇ-ಕ್ಯಾಟರಿಂಗ್ ಸೇವೆಯನ್ನು ತನ್ನ ವೆಬ್‌ಸೈಟ್, ecatering.irctc.co.in ಮತ್ತು Food on Track ಆಪ್ ಮೂಲಕ ಶುರು ಮಾಡಿದೆ. ವಾಟ್ಸಾಪ್ ಮೂಲಕ ಇ-ಕೇಟರಿಂಗ್ ಸೇವೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದ್ದು, ಮೊದಲ ಹಂತವು ಈಗಾಗಲೇ ಪೂರ್ಣಗೊಂಡಿದೆ.
ಮೊದಲ ಹಂತದ ಫುಡ್ ಆರ್ಡರ್
ಮೊದಲ ಹಂತದಲ್ಲಿ, ಇ-ಟಿಕೆಟ್‌ಗಳನ್ನು ಬುಕ್ ಮಾಡಿದ IRCTC ಪ್ರಯಾಣಿಕರು ಬಿಸಿನೆಸ್ ವಾಟ್ಸಾಪ್ ನಂಬರ್‌ನಿಂದ ಮೆಸೆಜ್ ಸ್ವೀಕರಿಸಿದರು. ಮೆಸೆಜ್‌ಗಳು ಇ-ಕೇಟರಿಂಗ್ ಸೇವೆಗೆ ಆಯ್ಕೆ ಮಾಡುವ ಆಯ್ಕೆಯನ್ನು ಅವರಿಗೆ ಒದಗಿಸಿವೆ. ಮೆಸೆಜ್ ಅನ್ನು ಸ್ವೀಕರಿಸಿದ ನಂತರ, ಪ್ರಯಾಣಿಕರು IRCTC ಇ-ಕೇಟರಿಂಗ್ ವೆಬ್‌ಸೈಟ್ ಮೂಲಕ ತಮ್ಮ ನಿಲ್ದಾಣಗಳಲ್ಲಿ ಲಭ್ಯವಿರುವ ಆಯ್ದ ರೆಸ್ಟೋರೆಂಟ್‌ಗಳಿಂದ ಇಷ್ಟ ಆಹಾರವನ್ನು ಕಾಯ್ದಿರಿಸಲು ಅವಕಾಶ ಲಭ್ಯ.

ಎರಡನೇ ಹಂತದ ಫುಡ್ ಆರ್ಡರ್
ಸದ್ಯ ಎರಡನೇ ಹಂತದ ಫುಡ್ ಆರ್ಡರ್ ಸೇವೆಗಾಗಿ, ಹೆಜ್ಜೆ ಇರಿಸಿದೆ. ಬೇರೆ ಬೇರೆ ರೈಲ್ವೆ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಸಂವಹನಾತ್ಮಕ ವಾಟ್ಸಾಪ್ ಫುಡ್ ಬುಕಿಂಗ್ ಮತ್ತು ವಿತರಣಾ ವ್ಯವಸ್ಥೆಯನ್ನು ರೈಲ್ವೆ ಸಂಸ್ಥೆಯು ನೀಡುತ್ತದೆ. ಅಧಿಕೃತ ವಾಟ್ಸಾಪ್ ಸಂಖ್ಯೆಯ ಮೂಲಕ ಇ-ಕೇಟರಿಂಗ್ ಸೇವೆಗಳು ಮತ್ತು ಫುಡ್ ಆರ್ಡರ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಬಳಕೆದಾರರು ಕೇಳಬಹುದಾಗಿದೆ.
50,000 ಫುಡ್ ಆರ್ಡರ್ ಒದಗಿಸುತ್ತಿದೆ
ಸದ್ಯ, IRCTC ಯ ಇ-ಕೇಟರಿಂಗ್ ಸೇವೆಯು ವೆಬ್‌ಸೈಟ್ ಮತ್ತು ಆಪ್ ಎರಡರ ಮೂಲಕ ಪ್ರಯಾಣಿಕರಿಗೆ ಪ್ರತಿದಿನ ಸುಮಾರು 50,000 ಫುಡ್ ಆರ್ಡರ್ ಒದಗಿಸುತ್ತಿದೆ. ಇ-ಕ್ಯಾಟರಿಂಗ್ ಸೇವೆಯು ರೈಲು ಪ್ರಯಾಣಿಕರಿಗೆ ಹತ್ತುವ ಮೊದಲು ಅಥವಾ ರೈಲಿನಲ್ಲಿರುವಾಗ ತಮ್ಮ ಮನೆಗಳಿಂದ ಊಟವನ್ನು ಕಾಯ್ದಿರಿಸಲು ಅನುಮತಿಸುತ್ತದೆ. ಈ ಸೇವೆಯು ಮತ್ತಷ್ಟು ಮಾರ್ಗಗಳಲ್ಲಿ ವಿಸ್ತರಣೆ ಆದ ನಂತರ, ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

IRCTC ಇ-ಕೇಟರಿಂಗ್ ವೆಬ್‌ಸೈಟ್ ಮೂಲಕ ಫುಡ್ ಆರ್ಡರ್ ಮಾಡಲು ಹೀಗೆ ಮಾಡಿರಿ:
ಹಂತ 1: ಮೊಲದು ecatering.irctc.co.in ವೆಬ್‌ಸೈಟ್ ತೆರೆಯಿರಿ
ಹಂತ 2: ಬಳಿಕ ನಿಮ್ಮ PNR ಸಂಖ್ಯೆಯನ್ನು ನಮೂದಿಸಿ.
ಹಂತ 3: ಆ ನಂತರ ಈಗ ನೀವು ಆಯ್ಕೆ ಮಾಡಿದ ರೈಲು ನಿಲ್ದಾಣದ ಬಳಿ ಫುಡ್ ಆರ್ಡರ್ ಮಾಡಲು ಲಭ್ಯವಿರುವ ರೆಸ್ಟೋರೆಂಟ್‌ಗಳಿಗಾಗಿ ಸರ್ಚ್ ಮಾಡಿ.
ಹಂತ 4: ನಿಮ್ಮ ಆರ್ಡರ್ ಅನ್ನು ಕನ್ಫರ್ಮ್ ಮಾಡಿ. ಆನ್‌ಲೈನ್ ಮೂಲಕ ಅಥವಾ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಬಹುದು.
ಹಂತ 5: ಆಯ್ಕೆ ಮಾಡಿದ ನಿಲ್ದಾಣವನ್ನು ತಲುಪಿದ ನಂತರ, ನಿಮ್ಮ ಸೀಟ್‌ನಲ್ಲಿಯೇ ಊಟವನ್ನು ನಿಮಗೆ ತಲುಪಿಸಲಾಗುತ್ತದೆ.


Click it and Unblock the Notifications








