Home
ಸುದ್ದಿಜಾಲ

ನಕಲಿ IRCTC ವೆಬ್‌ಸೈಟ್‌ ಹಾವಳಿ!..ಯಾಮಾರಿದ್ರೆ ದುಡ್ಡು ಹರೋಹರ!

ಪ್ರಯಾಣಿಕರು ಈ ಮೊದಲು ರೈಲು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬೇಕಿದ್ದರೇ, ರೈಲ್ವೆ ಸ್ಟೇಷನ್‌ಗೆ ಭೇಟಿ ನೀಡಬೇಕಿತ್ತು. ಆದ್ರೆ, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಶುರುವಾದಾಗಿನಿಂದ ಪ್ರಯಾಣಿಕರಿಗೆ ಮನೆಯಲ್ಲಿ ಕುಳಿತೇ ರೈಲ್ವೆ ಟಿಕೆಟ್ ಬುಕ್ ಮಾಡುವಂತಾಗಿದೆ. ಅದಕ್ಕೆ IRCTC ವೆಬ್‌ಸೈಟ್ ಸೂಕ್ತ ಪ್ಲಾಟ್‌ಫಾರ್ಮ್ ಒದಗಿಸಿದೆ. ಆದರೆ ಆನ್‌ಲೈನ್ ವಂಚಕರು ಇಲ್ಲಿಯೂ ತಮ್ಮ ಕೈಚಳಕ ತೋರಿಸಿದ್ದು, ಗ್ರಾಹಕರು ಯಾಮಾರಿದರೇ ದುಡ್ಡು ಹರೋಹರಾ.

IRCTC ವೆಬ್‌ಸೈಟ್‌

ಹೌದು, IRCTC ವೆಬ್‌ಸೈಟ್‌ ಹೋಲುವ ನಕಲಿ ವೆಬ್‌ಸೈಟ್‌ಗಳನ್ನು ವಂಚಕರು ರಚಿಸಿದ್ದು, ಟೂರ್ ಪ್ಯಾಕೇಜ್ ಬುಕ್ಕಿಂಗ್ ಆಫರ್ ಘೋಷಿಸಿರುವ ಘಟನೆಗಳು ನಡೆದಿವೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಪೋರ್ಟಲ್ ಐಆರ್‌ಸಿಟಿಸಿ-IRCTC ಸಂಸ್ಥೆಯು ‌ಪ್ರಯಾಣಿಕರು ಟೂರ್ ಪ್ಯಾಕೇಜ್ ಬುಕ್ಕಿಂಗ್ ಮಾಡುವಾಗ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಜಾಗೃತವಾಗಿರಬೇಕು ಎಂದು ಹೇಳಿದೆ.

ಇ-ಮೇಲ್ ಮೂಲಕ

ನಕಲಿ ವೆಬ್‌ಸೈಟ್‌ಗಳ ಮೂಲಕ ವಂಚಕರು ನೀಡುವ ವಿಶೇಷ ಟೂರ್/ಪ್ರವಾಸದ ಪ್ಯಾಕೇಜ್ ಆಫರ್‌ಗಳ ಆಸೆಗೊಳಗಾಗಬಾರದು ಎಂದು IRCTC ಸಂಸ್ಥೆಯು ಈಗಾಗಲೇ ತನ್ನ ಬಳಕೆದಾರರಿಗೆ ಇ-ಮೇಲ್ ಮೂಲಕ ಎಚ್ಚರಿಕೆಯ ಸಂದೇಶ ಕಳುಹಿಸಿದೆ. ವಂಚಕರು ರಚಿಸಿರುವ ನಕಲಿ ವೆಬ್‌ಸೈಟ್‌ ಬಹುತೇಕ ಪೋರ್ಟಲ್ ಹೋಲುವಂತೆ ಇದೆ. ಹೀಗಾಗಿ ಟೂರ್ ಪ್ಯಾಕೇಜ್ ಬುಕ್ ಮಾಡುವಾಗ ಎಚ್ಚರವಹಿಸಬೇಕಿದೆ.

ನಕಲಿ ವೆಬ್‌ಸೈಟ್

ನಕಲಿ ವೆಬ್‌ಸೈಟ್

ಆನ್‌ಲೈನ್ ವಂಚಕರು ‘www.irctctour.com' ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ರಚಿಸಿದ್ದು, ಇದು ಬಹುತೇಕ ಅಧಿಕೃತ IRCTC ವೆಬ್‌ಸೈಟ್ (www.irctctourism.com) ಹೋಲಿಕೆಯನ್ನು ಪಡೆದಿದೆ. ಸದ್ಯ ಈ ನಕಲಿ ವೆಬ್‌ಸೈಟ್ ಚಾಲ್ತಿಯಲ್ಲಿ ಇಲ್ಲ(This Account has been suspended). ಹೀಗಾಗಿ IRCTC ಹೆಸರನ್ನು ಬಳಸಿ ಇಂತಹ ಯಾವುದೇ ನಕಲಿ ವೆಬ್‌ಸೈಟ್‌ಗಳು ನೀಡುವ ಟೂರ್ ಪ್ಯಾಕೇಜ್‌ಗಳಿಗೆ ಪ್ರಯಾಣಿಕರು ಮಾರು ಹೋಗಬಾರದು.

ಆಫರ್‌ಗಳ ಆಸೆ ತೋರಿಸ್ತಾರೆ

ಆಫರ್‌ಗಳ ಆಸೆ ತೋರಿಸ್ತಾರೆ

ಅಧಿಕೃತ IRCTC ವೆಬ್‌ಸೈಟ್ ಹೊಸ ಆಫರ್, ಕೊಡುಗೆಗಳ ಬಗ್ಗೆ ತನ್ನ ಗ್ರಾಹಕರಿಗೆ ಮೇಲಿಂದ ಮೇಲೆ ಇ-ಮೇಲ್ ಮೂಲಕ ಮಾಹಿತಿ ತಲುಪಿಸುತ್ತದೆ. ಇದೇ ರೀತಿಯಲ್ಲಿ ವಂಚಕರು ಸಹ ತಮ್ಮ ನಕಲಿ ವೆಬ್‌ಸೈಟ್‌ ಮೂಲಕ ಗ್ರಾಹಕರಿಗೆ ಆಫರ್‌ಗಳ ಮೆಸೆಜ್ ಕಳುಹಿಸುವ ತಂತ್ರ ಕಂಡು‌ಕೊಂಡಿದ್ದಾರೆ. ಹೀಗಾಗಿ ಬುಕ್ ಮಾಡುವಾಗ ಜಾಗೃತರಾಗಿರಿ.

IRCTC ಸೇವೆಗಳು

IRCTC ಸೇವೆಗಳು

ಪ್ರಸ್ತುತ IRCTC, ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಆಹಾರ ಮತ್ತು ಪ್ಯಾಕ್ ಮಾಡಿದ ಕುಡಿಯುವ ನೀರಿನ ಸೇವೆ ಒದಗಿಸುತ್ತಿದೆ. ಹಾಗೆಯೇ ಆನ್‌ಲೈನ್ ರೈಲ್ವೆ ಟಿಕೆಟ್‌ಗಳು ಬುಕ್ಕಿಂಗ್ ಮಾಡಲು ಅನುಕೂಲ ಮಾಡಿರುವ ಒಂದು ಘಟಕವಾಗಿದೆ. IRCTC, ವಿವಿಧ ಪ್ರವಾಸೋದ್ಯಮ ವಿಭಾಗಗಳಲ್ಲಿ ಐಷಾರಾಮಿ ರೈಲು ಪ್ರವಾಸಗಳು, ಭಾರತ್ ದರ್ಶನ ವಿಶೇಷ ಪ್ರವಾಸಿ ರೈಲುಗಳು, ರೈಲು ಪ್ರವಾಸ ಪ್ಯಾಕೇಜುಗಳು, ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ಪ್ಯಾಕೇಜುಗಳು, ಲ್ಯಾಂಡ್ ಟೂರ್ ಪ್ಯಾಕೇಜುಗಳು, ಹೋಟೆಲ್ ಬುಕಿಂಗ್ ಇತ್ಯಾದಿಗಳು ಸೇರಿವೆ. ಇದರ ಅಧಿಕೃತ ಪೋರ್ಟಲ್ irctctourism.com ಆಗಿದೆ.

Best Mobiles in India

English summary
IRCTC has issued a warning email and message to users of a fake tourism website doing the rounds. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+