Home
ಸುದ್ದಿಜಾಲ

'ಗೇಮಿಂಗ್ ಡಿಸೈನರ್' ಉದ್ಯೋಗಕ್ಕೆ ಸಿಗುತ್ತಿದೆ ಆರಂಕಿ ಸಂಬಳ!

ಆನ್‌ಲೈನ್ ಗೇಮಿಂಗ್ ಮಾರುಕಟ್ಟೆ ಹೆಚ್ಚಾದಂತೆ ಗೇಮಿಂಗ್ ಡಿಸೈನರ್ಸ್ಗಳಿಗೆ ಸಿಗುತ್ತಿರುವ ಸಂಬಳ ತಿಂಗಳಿಗೆ ಆರಂಕಿ ದಾಟುತ್ತಿದೆ ಎಂದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಈಗ ಗೇಮಿಂಗ್ ಮಾರುಕಟ್ಟೆ ವೇಗವಾಗಿ ಓಡುತ್ತಿದೆ. ಪಬ್‌ಜಿ, ಸ್ನೈಪರ್ ಫ್ಯೂರಿ ಮತ್ತು ಲುಡೋ ಸೇರಿದಂತೆ ಸಾವಿರಾರು ಆನ್‌ಲೈನ್ ಗೇಮ್‌ಗಳು ಯುವಕರನ್ನು ಮನಸೂರೆಗೊಳಿಸಿವೆ. ಈಗೀಗ ಕ್ರೀಡೆ, ಮನೋರಂಜನೆಗೆಂದೇ ಸೀಮಿತವಾಗಿರುವ ಸಾಕಷ್ಟು ಕಂಪ್ಯೂಟರ್‌ ಸಿಸ್ಟಮ್‌ಗಳು ಇಂದು ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿವೆ.

ಒಂದು ವೇಳೆ ನೀವೀಗ ಡಿಸೈನರ್ಸ್ ಲೋಕಕ್ಕೆ ಕಾಲಿಟ್ಟರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಗೇಮ್‌ ಡಿಸೈನರ್ಸ್ ಆಗಬೇಕಾದರೆ ಪುಟಗಟ್ಟಲೆ ಪ್ರೋಗ್ರಾಮ್‌ ಕೋಡ್‌ ಬರೆಯಬೇಕಿಲ್ಲ, ಆರ್ಟ್‌ವರ್ಕ್‌ ಕೂಡ ಮಾಡಬೇಕಿಲ್ಲ. ಗೇಮ್ಸ್‌ನ ಪೂರ್ತಿ ರೂಪುರೇಷೆ ಯಾವ ರೀತಿ ಇರಬೇಕು ಎಂಬುದನ್ನು ಅಧ್ಯಯನ ನಡೆಸಿ ಅದನ್ನು ಸಿದ್ಧಪಡಿಸಬೇಕಿರುವುದರಿಂದ ಇದೊಂತರ ಕಲಾತ್ಮಕ ಉದ್ಯೋಗವೆಂದು ಹೇಳಬಹುದು. ಸಿಂಪಲ್ ಆಗಿ ಹೇಳಬೇಕು ಎಂದರೆ ಓರ್ವ ಸಿನಿಮಾ ನಿರ್ದೇಶಕನ ರೀತಿ.!

'ಗೇಮಿಂಗ್ ಡಿಸೈನರ್' ಉದ್ಯೋಗಕ್ಕೆ ಸಿಗುತ್ತಿದೆ ಆರಂಕಿ ಸಂಬಳ!

ಸಿನೆಮಾ ನಿರ್ದೇಶಕನಂತೆ ಗೇಮ್‌ ಡಿಸೈನರ್ ಕೆಲಸ ಮಾಡಬೇಕಾಗುತ್ತದೆ.ಗೇಮ್ಸ್‌ನ ಪೂರ್ತಿ ರೂಪುರೇಷೆ ಯಾವ ರೀತಿ ಇರಬೇಕು ಎಂಬುದನ್ನು ಅಧ್ಯಯನ ನಡೆಸಿ, ಅದನ್ನು ಸಿದ್ಧಪಡಿಸಬೇಕು. ಅದಕ್ಕಾಗಿ ಕಥೆ, ಪಾತ್ರಗಳು, ಅಂತ್ಯ, ಸಂಗೀತ, ಗೇಮ್‌ ನೀಡುವ ಅನುಭವದ ಕುರಿತು ವರ್ಕೌಟ್ ಮಾಡಬೇಕಾಗುತ್ತದೆ. ಗೇಮ್‌ ಡಿಸೈನರ್‌ಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಆತ ಕತೆಗಾರನಾಗಿರಬೇಕು. ರೋಚಕತೆ ತುಂಬಿ ಒಂದೊಳ್ಳೆ ಕಥೆಯನ್ನು ಗೇಮಿಂಗ್ ಮೂಲಕ ಎಣೆಯಬೇಕಾಗುತ್ತದೆ.

ಸಿನೆಮಾ ನಿರ್ದೇಶಕನಂತೆ ಚಿಂತಿಸುವ ಜೊತೆಗೆ ಓರ್ವ ಉತ್ತಮ ಗೇಮ್ ಡಿಸೈನರ್ ಆಬೇಕೆಂದರೆವಿಧ ಹಂತಗಳಲ್ಲಿ ಬಳಸುವ ಸಾಫ್ಟ್ವೇರ್, ಹಾರ್ಡ್‌ವೇರ್‌ ತಂತ್ರಜ್ಞಾನ ಅರಿವು ಬೇಕಾಗುತ್ತದೆ. ಜತೆಗೆ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಲೇಟೆಸ್ಟ್ ತಂತ್ರಜ್ಞಾನಗಳ ಕುರಿತು ತಿಳಿದುಕೊಂಡಿರಬೇಕಾಗುತ್ತದೆ. ಒಟ್ಟಿನಲ್ಲಿ ಓರ್ವ ಗೇಮ್‌ ಡಿಸೈನರ್ ಒಂದು ಗೇಮ್‌ನ ಸಂಪೂರ್ಣ ಚಿತ್ರಣವೇ ಆಗಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾಗಿ, ಇಲ್ಲಿ ಅದರ ಸೋಲು ಗೆಲುವಿಗೆ ಆತನೇ ಸಂಪೂರ್ಣ ಬದ್ಧನಾಗಿರಬೇಕಾಗುತ್ತದೆ.

ಇಷ್ಟೆಲ್ಲಾ ಅವಕಾಶಗಳಿರುವ ಗೇಮ್ ಡಿಸೈನರ್ ಕ್ಷೇತ್ರಕ್ಕೆ ಕಾಲಿಡಲು ಇಂಥದ್ದೇ ಪದವಿಯನ್ನು ಹೊಂದಿರಬೇಕೆಂಬ ನಿಯಮಾವಳಿಗಳಿಲ್ಲ. ಗೇಮಿಂಗ್‌ ಬಗ್ಗೆ ಒಲವಿದ್ದರೆ ಕಂಪ್ಯೂಟರ್‌ ಸೈನ್ಸ್‌, ಫೈನ್‌ ಆರ್ಟ್ಸ್ ಇನ್‌ ಡಿಸೈನ್‌ ಆಂಡ್‌ ಟೆಕ್ನಾಲಜಿ, ಬಿ.ಎಸ್‌. ಇನ್‌ ಗೇಮ್‌ ಡಿಸೈನ್‌ ಆಂಡ್‌ ಡೆವಲೆಪ್‌ಮೆಂಟ್ಪದವಿ ಪಡೆಯಬಹುದು. ಈ ಕ್ಷೇತ್ರದಲ್ಲಿ ಪಾರ್ಟ್ ಟೈಮ್‌, ಫುಲ್‌ ಟೈಮ್‌ ಆಗಿ ದುಡಿಯಲು ಸಾಕಷ್ಟು ಅವಕಾಶಗಳೂ ಇರುವುದರಿಂದ, ಇತರೆ ಕ್ಷೇತ್ರಗಳಲ್ಲಿ ಫೇಲಾದರೂ ಗೇಮ್ ಡಿಸೈನರ್ ಕ್ಷೇತ್ರಕ್ಕೆ ಕಾಲಿಡಿ.

ಓದಿರಿ: ಶಾಕಿಂಗ್ ನ್ಯೂಸ್!..ಯಾವುದೇ ಕಾರಣಕ್ಕೂ 'ಹುವಾವೇ' ಫೋನ್ ಖರೀದಿಸಲೇಬೇಡಿ!!

Best Mobiles in India

English summary
Is Game Design a good career?, What qualifications do you need to be a game designer?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+