ಶಾಕಿಂಗ್ ನ್ಯೂಸ್!..ಯಾವುದೇ ಕಾರಣಕ್ಕೂ 'ಹುವಾವೇ' ಫೋನ್ ಖರೀದಿಸಲೇಬೇಡಿ!!

|

ನೀವು ಹುವಾವೇ ಅಥವಾ ಹಾನರ್ ಕಂಪೆನಿಯ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಬಿಟ್ಟುಬಿಡಿ. ಏಕೆಂದರೆ, ಅಮೆರಿಕಾ ಮತ್ತು ಚೀನಾದ ನಡುವೆ ನಡೆಯುತ್ತಿರುವ ವಾಣಿಜ್ಯ ಯುಧ್ದದಿಂದಾಗಿ ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭಾರೀ ಸಮಸ್ಯೆಯೊಂದು ಎದುರಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸರ್ಕಾರ ಹುವಾವೇ ಮೊಬೈಲ್​ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದ ನಂತರ ಗೂಗಲ್ ಸಂಸ್ಥೆ ಹುವಾವೇ ಸಂಸ್ಥೆ ಜೊತೆ ಸಂಬಂಧ ಕಡಿದುಕೊಂಡಿದೆ.

ಹೌದು, ಚೀನೀ ಕಂಪನಿ ಹುವಾವೇಗೆ ಪ್ರಮುಖ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆಯನ್ನು ಅಮಾನತುಗೊಳಿಸುವುದರ ಮೂಲಕ ಗೂಗಲ್ ಕಂಪೆನಿ ಶಾಕಿಂಗ್ ನ್ಯೂಸ್ ನೀಡಿದೆ. ಇನ್ಮುಂದೆ ಹುವಾವೇ ಕಂಪೆನಿಯ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಗೂಗಲ್​ ಪ್ಲೇ, ಗೂಗಲ್​ ಪ್ಲೇ ಸ್ಟೋರ್​, ಜಿ-ಮೇಲ್, ಗೂಗಲ್​ ಮ್ಯಾಪ್​​ ಹಾಗೂ ಯೂಟ್ಯೂಬ್​ ಆಪ್​ಗಳು ಲಭ್ಯವಿರುವುದಿಲ್ಲ ಎಂದು ಗೂಗಲ್ ಕಂಪೆನಿ ತಿಳಿಸಿದ್ದು, ಪ್ರಸ್ತುತ ಹುವಾವೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಸ್ವಲ್ಪ ರಿಲೀಫ್ ನೀಡಿದೆ.

ಶಾಕಿಂಗ್ ನ್ಯೂಸ್!..ಯಾವುದೇ ಕಾರಣಕ್ಕೂ 'ಹುವಾವೇ' ಫೋನ್ ಖರೀದಿಸಲೇಬೇಡಿ!!

ಆದರೆ, ನೀವು ಈಗಾಗಲೇ ಹುವಾವೇ ಸಂಸ್ಥೆಯ ಮೊಬೈಲ್ ಬಳಕೆ ಮಾಡುತ್ತಿದ್ದರೂ ಸಹ ನೀವು ಮೊಬೈಲ್​ ಬದಲಾವಣೆ ಮಾಡಲು ಸಿದ್ಧರಾಗಿ. ಏಕೆಂದರೆ ಇನ್ನು ಕೆಲ ದಿನಗಳು ಮಾತ್ರ ನಿಮಗೆ ಈ ಸೇವೆ ದೊರೆಯುವ ಸಾಧ್ಯತೆಗಳು ದಟ್ಟವಾಗಿದೆ. ಹಾಗಾದರೆ, ಏನಿದು ಶಾಕಿಂಗ್ ವರದಿ?, ಹುವಾವೆಗೆ ಅಮಾನತುಗೊಳಿಸಲಾಗಿರುವ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆ ಯಾವುದು?, ಇದರಿಂದ ಹುವಾವೆ ಹಾಗೂ ಇತರೆ ಸ್ಮಾರ್ಟ್‌ಫೋನ್‌ ಬಳಕೆದಾರರು ಎದುರಿಸಬೇಕಾದ ಸಮಸ್ಯೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಶಾಕಿಂಗ್ ವರದಿ?

ಏನಿದು ಶಾಕಿಂಗ್ ವರದಿ?

ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ "ಮಹತ್ವದ ಅಪಾಯ" ಉಂಟುಮಾಡುವ ಕಾರಣ ಯುಎಸ್ ರಫ್ತು ನಿಯಂತ್ರಣಗಳಿಗೆ ಒಳಪಟ್ಟಿರುವ 44 ಚೀನೀ ಘಟಕಗಳ ಪಟ್ಟಿಯಲ್ಲಿ ಹುವಾವೇ ಸೇರಿದೆ. ಹಾಗಾಗಿ, ಮೊದಲೇ ಹೇಳಿದಂತೆ ಗೂಗಲ್ ಸಂಸ್ಥೆ ಚೀನೀ ಕಂಪನಿ ಹುವಾವೆಗೆ ಪ್ರಮುಖ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆಯನ್ನು ಅಮಾನತುಗೊಳಿಸಿದೆ. ಇದರಿಂದ ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದರೆ, ಹುವಾವೇ ಕಂಪೆನಿಗೆ ದೊಡ್ಡ ಹೊಡೆತ ಇದಾಗಿದೆ.

ಹುವಾವೆಗೆ ಅಮಾನತು ಶಿಕ್ಷೆ!

ಹುವಾವೆಗೆ ಅಮಾನತು ಶಿಕ್ಷೆ!

ಯು.ಎಸ್. ಸರಕಾರದ ಆದೇಶವನ್ನು ಅನುಸರಿಸಲು ಗೂಗಲ್ ತನ್ನ ಎಂಟಿಟಿ ಲಿಸ್ಟ್‌ನಲ್ಲಿ ಹುವಾವೇಯನ್ನು ಇರಿಸಲು ಯೋಜಿಸಿದೆ. ಪ್ರಸ್ತುತ ಆಂಡ್ರಾಯ್ಡ್​​ ಓಪನ್​ ಸೋರ್ಸ್​​​ ಪ್ರಾಜೆಕ್ಟ್​ ಹೆಸರಿನ ಆಂಡ್ರಾಯ್ಡ್​​​ ಲೈಸೆನ್ಸ್​ ಅನ್ನು ಹುವಾವೇ ಬಳಕೆ ಮಾಡುತ್ತಿದ್ದು, ಅದನ್ನು ಗೂಗಲ್ ಅಮಾನತುಗೊಳಿಸಿದೆ. ಇದರಿಂದ ಇನ್ಮುಂದೆ ಹುವಾವೇ ಕಂಪೆನಿಯ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಗೂಗಲ್​ ಪ್ಲೇ, ಗೂಗಲ್​ ಪ್ಲೇ ಸ್ಟೋರ್​, ಜಿ-ಮೇಲ್, ಗೂಗಲ್​ ಮ್ಯಾಪ್​​ ಹಾಗೂ ಯೂಟ್ಯೂಬ್​ ಆಪ್​ಗಳು ಲಭ್ಯವಿರುವುದಿಲ್ಲ ಎಂದು ಗೂಗಲ್ ತಿಳಿಸಿದೆ.

ಬಳಕೆದಾರರಿಗೆ ಮಾತ್ರ ಸ್ವಲ್ಪ ರಿಲೀಫ್

ಬಳಕೆದಾರರಿಗೆ ಮಾತ್ರ ಸ್ವಲ್ಪ ರಿಲೀಫ್

ಪ್ರಸ್ತುತ ಹುವಾವೇ ಮತ್ತು ಬಹುಶಃ ಹಾನರ್ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಪ್ಲೇ ನಂತಹ ಸೇವೆಗಳಿಗೆ ಮತ್ತು ಗೂಗಲ್ ಪ್ಲೇ ಪ್ರೊಟೆಕ್ಟ್ ಭದ್ರತೆಗೆ ಪ್ರವೇಶವನ್ನು ಮುಂದುವರಿಸುವುದಾಗಿ ಗೂಗಲ್ ಕಂಪನಿ ಹೇಳಿದೆ. ಇದರಿಂದ ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಸ್ವಲ್ಪ ರಿಲೀಫ್ ಸಿಕ್ಕಿದೆ ಎಂದು ಹೇಳಬಹುದು. ಆದರೆ, ನೀವು ಈಗಾಗಲೇ ಹುವಾವೇ ಸಂಸ್ಥೆಯ ಮೊಬೈಲ್ ಬಳಕೆ ಮಾಡುತ್ತಿದ್ದರೂ ಸಹ ನೀವು ಮೊಬೈಲ್​ ಬದಲಾವಣೆ ಮಾಡಲು ಸಿದ್ಧರಾಗಿ. ಏಕೆಂದರೆ ಅದಕ್ಕೊಂದು ಕಾರಣವಿದೆ.

ಬಳಕೆದಾರರಿಗೂ ಎದುರಾಯ್ತು ಸಂಕಷ್ಟ!

ಬಳಕೆದಾರರಿಗೂ ಎದುರಾಯ್ತು ಸಂಕಷ್ಟ!

ಗೂಗಲ್ ಪ್ಲೇ ಮತ್ತು ಸುರಕ್ಷತೆಯಂತಹ ಸೇವೆಗಳನ್ನು ನಿಮ್ಮ ಅಸ್ತಿತ್ವದಲ್ಲಿರುವ ಹುವಾವೇ ಸ್ಮಾರ್ಟ್‌ಪೋನಿನಲ್ಲಿ ಕಾರ್ಯನಿರ್ವಹಿಸುವುದನ್ನು ನಾವು ನಿಭಾಯಿಸುತ್ತೇವೆ ಎಂದು ಗೂಗಲ್ ಕಂಪೆನಿ ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಭಯ ನೀಡಿದೆ. ಆದರೆ, ಹುವಾವೇ ಭವಿಷ್ಯದ ತೀರ್ಮಾನವು ಹುವಾವೇ ಬಳಕೆದಾರರಿಗೆ ಯಾವ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಚೀನಾ ಗೂಗಲ್‌ ಅನ್ನು ದೂರವಿಟ್ಟರೆ ಇದರಿಂದ ಸಮಸ್ಯೆ ಎದುರಿಸುವುದು ಹುವಾವೇ ಸ್ಮಾರ್ಟ್‌ಫೋನ್ ಬಳಕೆದಾರರು ಮಾತ್ರ.

ನಿಮ್ಮ ಪೋನ್ ಬದಲಾಯಿಸಬೇಕಾಗಬಹುದು!

ನಿಮ್ಮ ಪೋನ್ ಬದಲಾಯಿಸಬೇಕಾಗಬಹುದು!

ಗೂಗಲ್ ಕಂಪೆನಿ ಹುವಾವೇ ವಿಧಿಸಿರುವ ನಿಷೇಧವು ಎಷ್ಟು ಶಾಶ್ವತವಾಗಿದೆಯೆಂದು ಅಸ್ಪಷ್ಟವಾಗಿದೆ. ಹಾಗೆಯೇ, ಹುವಾವೇ ಬಳಕೆದಾರರಿಗೂ ಗೂಗಲ್ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನೀಡುವುದನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಹಾಗಾಗಿ, ಹುವಾವೇ ಬಳಕೆದಾರರಿಗೆ ಈ ನಿಷೇಧ ಒಂದು ದೊಡ್ಡ ಸಮಸ್ಯೆಯಾಗಿಯೇ ಉಳಿಯಬಹುದಾಗಿದೆ. ಚಿಪ್ ತಜ್ಞರು ಯು.ಎಸ್. ಸಹಾಯವಿಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲು ಹುವಾವೇ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ.

ಭಾರತೀಯರಿಗೆ ಹೆಚ್ಚು ಕಷ್ಟ!

ಭಾರತೀಯರಿಗೆ ಹೆಚ್ಚು ಕಷ್ಟ!

ಚೀನಾದಲ್ಲಿ ಗೂಗಲ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುವುದಿಲ್ಲ. ಆದರೆ ಆಂಡ್ರಾಯ್ಡ್ ಬಳಕೆದಾರರು ಹೆಚ್ಚಿರುವ ಭಾರತದಂತಹ ಹಲವು ರಾಷ್ಟ್ರಗಳಲ್ಲಿ ಹುವಾವೇ ಕಂಪೆನಿಗಳ ಸ್ಮಾರ್ಟ್‌ಫೋನ್ ಹೆಚ್ಚು ಬಳಕೆಯಲ್ಲಿವೆ. ಚೀನಾಗಿಂತ ಭಾರತದಂತಹ ರಾಷ್ಟ್ರಗಳಲ್ಲಿ ಗೂಗಲ್ ಸೇವೆಗಳುಹೆಚ್ಚು ಅಗತ್ಯವಾಗಿದೆ.. ಪ್ಲೇ ಸ್ಟೋರ್ ಇಲ್ಲದೆ ತನ್ನ ತಾಯ್ನಾಡಿನಲ್ಲಿ ಹುವಾವೇ ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಆದರೆ, ಭಾರತದಂತಹ ರಾಷ್ಟ್ರಗಳಲ್ಲಿ ಹುವಾವೇ ಹೆಚ್ಚು ಸಮಸ್ಯೆಯನ್ನು ಎದುರಿಸಲಿದೆ.

ಹುವಾವೇ ತರಲಿದೆ ತನ್ನದೇ ಒಎಸ್!

ಹುವಾವೇ ತರಲಿದೆ ತನ್ನದೇ ಒಎಸ್!

ಗೂಗಲ್ ಸಂಸ್ತೆಗೆ ಎದುರಾಗಿ ಹುವಾವೇ ತನ್ನದೇ ಆಪರೇಟಿಂಗ್ ಸಿಸ್ಟಮ್ ಅನ್ನು ಅಂತರಾಷ್ಟ್ರೀಯವಾಗಿ ಪರಿಚಯಿಸಲು ಮುಂದಾಗಿದೆ ಎನ್ನಲಾಗಿದೆ. ಆಂಡ್ರಾಯ್ಡ್ ಅನ್ನು ಬಳಸದಂತೆ ತಡೆಗಟ್ಟುವಲ್ಲಿ ತನ್ನದೇ ಆದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರ ಯೋಜನೆಯನ್ನು ತಯಾರಿಸುವುದಕ್ಕಿಳಿದು ಕಳೆದ ಕೆಲವು ವರ್ಷಗಳಿಂದ ಕಳೆದಿದೆ ಎಂದು ಹುವಾವೇ ಹೇಳಿದೆ. ಈ ತಂತ್ರಜ್ಞಾನವನ್ನು ಈಗಾಗಲೇ ಚೀನಾ ಮಾರಾಟ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ ಎಂದು ಕಂಪನಿ ಹೇಳಿರುವುದು ಮತ್ತೊಂದು ಫೈಟ್‌ಗೆ ಕಾರಣವಾಗಬಹುದು.!

ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ!

ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ!

ಚೀನಾದ ಸ್ಮಾರ್ಟ್‌ಪೋನ್ ತಯಾರಕರು ಭಾರತ ಮತ್ತು ಯುರೋಪ್‌ಪ್ರದೇಶಗಳಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಗೂಗಲ್ ಅಪ್ಲಿಕೇಶನ್ಗಳನ್ನು ಹೊಂದುವುದು ಮುಖ್ಯವಾಗಿದೆ. ಗೂಗಲ್​ ಪ್ಲೇ, ಗೂಗಲ್​ ಪ್ಲೇ ಸ್ಟೋರ್​, ಜಿ-ಮೇಲ್, ಗೂಗಲ್​ ಮ್ಯಾಪ್​​ ಹಾಗೂ ಯೂಟ್ಯೂಬ್​ ಆಪ್​ಗಳನ್ನು ಬಳಸದೇ ಇರುವ ಸಾಧ್ಯತೆಗಳು ಕಡಿಮೆ ಇರಲಿವೆ. ಹಾಗಾಗಿ, ಪ್ರಸ್ತುತ ಯಾವುದೇ ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲೇಬೇಡಿ. ಏಕೆಂದರೆ, ಅಮೆರಿಕಾ ಮತ್ತು ಚೀನಾದ ಸಂಘರ್ಷದಿಂದಾಗಿ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

Best Mobiles in India

English summary
On Friday the U.S. Commerce Department said it was considering scaling back restrictions on Huawei to "prevent the interruption of existing network operations and equipment."to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X