ಸ್ಯಾಮ್‌ಸಂಗ್: ತನ್ನ ಸೋಲಿಗೆ ತಾನೇ ಕಾರಣವಾಯಿತೇ?

By Shwetha
|

ಸ್ಯಾಮ್‌ಸಂಗ್‌ನ ಅತ್ಯಾಧುನಿಕ ಗ್ಯಾಲಕ್ಸಿ ಎಸ್ ಸಿರೀಸ್ ಸ್ಮಾರ್ಟ್‌ಫೋನ್ ಇಲ್ಲಿದೆ ಮತ್ತು ಈ ಪ್ರೀಮಿಯಮ್ ಆಂಡ್ರಾಯ್ಡ್ ಪವರ್ ಉಳ್ಳ ಡಿವೈಸ್ ಕುರಿತು ಇಂದಿನ ಲೇಖನದಲ್ಲಿ ಮತ್ತಷ್ಟು ನೀವು ತಿಳಿದುಕೊಳ್ಳಲೇಬೇಕು.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ಹೆಚ್ಚು ಸುಧಾರಿತ ವೈಶಿಷ್ಟ್ಯತೆಗಳನ್ನು ಒಳಗೊಂಡು ಬಂದಿದ್ದು ಗ್ಯಾಲಕ್ಸಿ ಸಿರೀಸ್‌ನಲ್ಲಿ ಕಂಪೆನಿ ಮಾಡಿರುವ ಉಪಯುಕ್ತ ಸುಧಾರಣೆಗಳನ್ನು ನಿಮಗಿಲ್ಲಿ ಕಾಣಬಹುದಾಗಿದೆ. ಇಂದು ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ವಿಶೇಷತೆಗಳನ್ನು ಅರಿಯೋಣ.

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ಹೊಸ ವಿನ್ಯಾಸ ಮತ್ತು ವಿಶೇಷತೆಗಳು

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6 ಎಡ್ಜ್ ಹೊಸ ವಿನ್ಯಾಸ ಮತ್ತು ವಿಶೇಷತೆಗಳು

ಈ ಬಾರಿಯ ಗ್ಯಾಲಕ್ಸಿ ಶ್ರೇಣಿಯು ಎರಡು ಭಿನ್ನ ಮಾಡೆಲ್‌ಗಳಾದ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್‌ನೊಂದಿಗೆ ಬಂದಿದ್ದು, ವಿಶೇಷತೆಗಳು ಮತ್ತು ನಿರ್ಮಾಣ ಹಂತದಿಂದ ಹೆಚ್ಚಿನ ಬದಲಾವಣೆಗಳನ್ನು ಕಂಡುಕೊಂಡಿವೆ. ಎರಡೂ ಒಂದೇ ಸ್ಪೆಸಿಫಿಕೇಶನ್‌ಗಳನ್ನು ಹೊಂದಿದ್ದರೂ ಸ್ಕ್ರೀನ್ ಮತ್ತು ಮಾರ್ಪಡಿತ ಸಾಫ್ಟ್‌ವೇರ್‌ನಿಂದ ಬದಲಾವಣೆಗಳನ್ನು ಕಂಡುಕೊಂಡಿವೆ.

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಸ್ಕ್ರೀನ್ ನಿಜಕ್ಕೂ ಅದ್ಭುತ

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಸ್ಕ್ರೀನ್ ನಿಜಕ್ಕೂ ಅದ್ಭುತ

5.1 ಇಂಚಿನ, ಕ್ವಾಡ್ ಎಚ್‌ಡಿ ಸ್ಕ್ರೀನ್ ಅದ್ಭುತವಾಗಿದೆ. ಗ್ಯಾಲಕ್ಸಿ ಎಸ್6 ನ ಡಿಸ್‌ಪ್ಲೇ ನಿಜಕ್ಕೂ ಕಣ್ಸೆಳೆಯುವ ವಿನ್ಯಾಸದಲ್ಲಿದೆ.

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಹೆಚ್ಚು ಗುಣಮಟ್ಟದ ಕ್ಯಾಮೆರಾ

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಹೆಚ್ಚು ಗುಣಮಟ್ಟದ ಕ್ಯಾಮೆರಾ

ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಉತ್ತಮ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದರ 16 ಮೆಗಾಪಿಕ್ಸೆಲ್ ಕ್ಯಾಮೆರಾಕ್ಕೆ ನಾವು ಋಣಿಯಾಗಿರಬೇಕು. ಇನ್ನು ಡಿವೈಸ್‌ಗಳು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಅನ್ನು ಪಡೆದುಕೊಂಡಿದ್ದು ನಿಜಕ್ಕೂ ಅದ್ಭುತ ಎಂದೆನಿಸುವ ಚಿತ್ರಗಳನ್ನು ಬಳಕೆದಾರರಿಗೆ ಇವುಗಳು ನೀಡುತ್ತವೆ.

 ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ವೇಗದ ಚಾರ್ಜಿಂಗ್

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ವೇಗದ ಚಾರ್ಜಿಂಗ್

ಐಫೋನ್ 6 ವೇಗದ ಚಾರ್ಜಿಂಗ್ ಅನ್ನು ಹೊಂದಿದೆ. ಆದರೆ ಆಂಡ್ರಾಯ್ಡ್ ಫೋನ್‌ಗಳು ಈಗ ಇದೇ ವಿಶೇಷತೆಗಳನ್ನು ಪಡೆದುಕೊಂಡು ಬಂದಿವೆ.

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಟಿವಿ ರಿಮೋಟ್

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಟಿವಿ ರಿಮೋಟ್

ನಿಮಗೆ ಬೇಕಾದ ಡಿವೈಸ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯ ಸ್ಯಾಮ್‌ಸಂಗ್‌ನ ಈ ಶ್ರೇಣಿಗಳಿಗಿವೆ. ಇದನ್ನು ಬಳಸಿ ಟಿವಿಯನ್ನು ಕೂಡ ನಿಯಂತ್ರಿಸಬಹುದಾಗಿದೆ.

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6:  ನಾನ್ ರಿಮೂವೇಬಲ್ ಬ್ಯಾಟರಿ

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ನಾನ್ ರಿಮೂವೇಬಲ್ ಬ್ಯಾಟರಿ

ಗ್ಯಾಲಕ್ಸಿ ಎಸ್5 ನಂತೆಯೇ, ಇವುಗಳೂ ಕೂಡ ನಾನ್ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿವೆ. ಸ್ಯಾಮ್‌ಸಂಗ್‌ನಿಂದ ಬಳಕೆದಾರರಿಗುಂಟಾಗುವ ಅತಿದೊಡ್ಡ ನಿರಾಸೆ ಇದಾಗಿದೆ.

 ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಎಸ್‌ಡಿ ಕಾರ್ಡ್ ಬೆಂಬಲ ಇಲ್ಲ

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಎಸ್‌ಡಿ ಕಾರ್ಡ್ ಬೆಂಬಲ ಇಲ್ಲ

ಗ್ಯಾಲಕ್ಸಿ ಎಸ್6 ಅನ್ನು ಇಷ್ಟಪಡದೇ ಇರಲು ಇದೂ ಒಂದು ಕಾರಣವಾಗಿದೆ. ಹೆಚ್ಚುವರಿ ಸಂಗ್ರಹಕ್ಕಾಗಿ ಇದು ಯಾವುದೇ ವ್ಯವಸ್ಥೆಯನ್ನು ಪಡೆದುಕೊಂಡು ಬಂದಿಲ್ಲ. ಎಸ್‌5 ನಂತೆ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕೂಡ ಜಲಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿಲ್ಲ.

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಕಾರ್ಯಕ್ಷಮತೆ ಕೊರತೆ

ಗ್ಯಾಲಕ್ಸಿ ಎಸ್6 ಮತ್ತು ಗ್ಯಾಲಕ್ಸಿ ಎಸ್6: ಕಾರ್ಯಕ್ಷಮತೆ ಕೊರತೆ

ಎರಡೂ ಡಿವೈಸ್‌ಗಳು ಆಂಡ್ರಾಯ್ಡ್ ಲಾಲಿಪಪ್ 5.0 ಚಾಲನೆಯನ್ನು ಪಡೆದುಕೊಂಡಿದೆ ಮತ್ತು ಓಕ್ಟಾ ಕೋರ್ ಎಕ್ಸೋನಸ್ ಪ್ರೊಸೆಸರ್ ಜೊತೆಗೆ 3 ಗಿಗಾಬೈಟ್ಸ್ RAM ಶಕ್ತಿ ಇವುಗಳಲ್ಲಿದೆ. ಇನ್ನು 32 ರಿಂದ 128 ಗಿಗಾಬೈಟ್ಸ್ ಸಂಗ್ರಹಣೆ ಈ ಡಿವೈಸ್‌ಗಳಲ್ಲಿದೆ. ಇನ್ನು ಭಾರೀ ಗೇಮ್‌ಗಳನ್ನು ಆಡುವಾಗ ಡಿವೈಸ್ ಆಮೆಗತಿಯನ್ನು ಪಡೆದುಕೊಳ್ಳುತ್ತದೆ.

ಗ್ಯಾಲಕ್ಸಿ ಎಸ್6/ಎಸ್6 ಎಡ್ಜ್ = ಬ್ಲೋಟ್‌ವೇರ್

ಗ್ಯಾಲಕ್ಸಿ ಎಸ್6/ಎಸ್6 ಎಡ್ಜ್ = ಬ್ಲೋಟ್‌ವೇರ್

ಬ್ಲೋಟ್‌ವೇರ್‌ನೊಂದಿಗೆ ಹ್ಯಾಂಡ್‌ಸೆಟ್ ಬಂದಿದೆ. ಸ್ಯಾಮ್‌ಸಂಗ್‌, ಗೂಗಲ್ ಮತ್ತಿ ಮೈಕ್ರೋಸಾಫ್ಟ್‌ನ ಪೂರ್ವ ಲೋಡ್ ಅಪ್ಲಿಕೇಶನ್‌ಗಳು ಇದರಲ್ಲಿವೆ. ಅದಾಗ್ಯೂ ಕೆಲವೊಂದು ಕುಂದು ಕೊರತೆಗಳು ಡಿವೈಸ್‌ನಲ್ಲಿದೆ.

Best Mobiles in India

English summary
Samsung's latest-generation Galaxy S series smartphones are here and there's a lot to like about these premium Android-powered devices. Both the Galaxy S6 and Galaxy S6 Edge represent significant improvements to the company's Galaxy S series lineup that was in desperate need of change.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X