ಯಾವಾಗ್ಲೂ ಮೊಬೈಲ್‌ನಲ್ಲೇ ಮುಳುಗಿರುವವರಿಗೆ ಮತ್ತೊಂದು ಎಚ್ಚರಿಕೆ ಗಂಟೆ!!

  |

  ಈಗ ಎಲ್ಲರ ಕೈಲೂ ಸ್ಮಾರ್ಟ್‌ಫೋನ್‌ ಆಟವಾಡುತ್ತಿರುತ್ತಿದೆ. ಫೋನ್‌ ಕೈಲಿದ್ರೆ, ಜಗತ್ತಲ್ಲಿ ಏನಾಗುತ್ತೆ ಅಂತಾನೇ ಗೊತ್ತಾಗಲ್ಲ ಅನ್ನೋ ಪರಿಸ್ಥಿತಿ ಇದೆ. ಮೊಬೈಲ್, ಸ್ಮಾರ್ಟ್‌ಪೋನ್‌ಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಪರಿಸ್ಥಿತಿ ಬದಲಾಗಿಬಿಟ್ಟಿದೆ. ಇದು ನಿಮಗೆಲ್ಲಾ ತಿಳಿದಿರುವ ವಿಷಯವಾದರೂ ಸಹ, ನೀವು ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಷಯವಿದೆ.!

  ಹೌದು, ಊಟ, ತಿಂಡಿಗೂ ಟೈಮಿಲ್ಲದಂತೆ. ಕೈಲಿ ಫೋನ್‌ ನೋಡ್ತಾನೇ ಇರುವವರಿಗೆ ನೂತನ ಸಮೀಕ್ಷೆಯೊಂದು ಎಚ್ಚರಿಕೆ ಗಂಟೆಯಾಗಿದ್ದು, ಮೊಬೈಲ್‌ ಅತಿಯಾದ ಬಳಕೆಯಿಂದಾಗಿ ಸಂಬಂಧಗಳಿಗೆ ಸಂಚಕಾರ ಗ್ಯಾರೆಂಟಿ ಅಂತ ಸಮೀಕ್ಷೆಯೊಂದು ಹೇಳಿದೆ. ಸ್ಮಾರ್ಟ್‌ಪೋನ್‌ಗಳಿಂದಾಗಿ ಪ್ರೀತಿಯ ಸಂಬಂಧಗಳು ಕಳೆದುಹೋಗುತ್ತಿವೆ ಎಂದು ಸಮೀಕ್ಷೆಯೊಂದು ಪ್ರಕಟಿಸಿದೆ.

  ಯಾವಾಗ್ಲೂ ಮೊಬೈಲ್‌ನಲ್ಲೇ ಮುಳುಗಿರುವವರಿಗೆ ಮತ್ತೊಂದು ಎಚ್ಚರಿಕೆ ಗಂಟೆ!!

  ಮೊಬೈಲ್ ಹೆಚ್ಚು ಬಳಕೆಯಿಂದ ಸಂಬಂಧಗಳು ಬಹುಬೇಗ ಹಾಳಾಗುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ದಂಪತಿಗಳ ಮಧ್ಯೆ ವಿರಸ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ. ಶೇ.57ರಷ್ಟು ಜನರು ಪ್ರೇಮಿ ಅಥವಾ ಸಂಗಾತಿ ಇರುವಾಗಲೂ ತಮ್ಮ ಗಮನ ಸ್ಮಾರ್ಟ್‌ಫೋನ್‌ ಮೇಲೆ ಹೆಚ್ಚಿರುತ್ತದೆ ಎಂದು ಹೇಳಿರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.

  ಇನ್ನು ಶೇ.60ರಷ್ಟು ಮಂದಿ ತಮ್ಮ ಮೊದಲ ಡೇಟಿಂಗ್ ವೇಳೆ ಸಂಗಾತಿ ಗಮನ ಫೋನ್‌ನಲ್ಲೇ ಇತ್ತು ಎಂದು ದೂರಿದ್ದಾರೆ. ಸದಾ ಮೊಬೈಲ್‌ನಲ್ಲೇ ಬ್ಯುಸಿಯಾಗಿರುವುದರಿಂದ ಸಂಗಾತಿಗೆ ತನ್ನ ಬಗ್ಗೆ ಗಮನ ಇಲ್ಲ ಎಂಬ ಭಾವನೆ ಮೂಡುತ್ತದೆ. ಇದು ನಮ್ಮಿಂದಲೂ ಆಗಬಹುದಾದ ತೊಂದರೆಯೇ ಆಗಿದೆ ಎಂದು ಶೇ. 70 ರಷ್ಟು ಜನರು ಒಪ್ಪಿರುವುದಾಗಿ ಅಧ್ಯಯನವು ಪ್ರಕಟಿಸಿದೆ.

  ಯಾವಾಗ್ಲೂ ಮೊಬೈಲ್‌ನಲ್ಲೇ ಮುಳುಗಿರುವವರಿಗೆ ಮತ್ತೊಂದು ಎಚ್ಚರಿಕೆ ಗಂಟೆ!!

  ಸಮೀಕ್ಷೆಯಲ್ಲಿ ಲೆಕ್ಕಕ್ಕಿಂತ ಹೆಚ್ಚು ಮೊಬೈಲ್‌ ಬಳಸುವದರಿಂದ ಈ ರೀತಿಯ ಸಮಸ್ಯೆ ಎದುರಾಗುವ ಬಗ್ಗೆ ಕೂಡ ಮೊಬೈಲ್ ಬಳಕೆದಾರರು ಮಾತನಾಡಿದ್ದಾರೆ. ಮೊಬೈಲ್ ಹೆಚ್ಚು ಬಳಕೆ ಕ್ರಮೇಣ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗುತ್ತದೆ. ಆದ್ದರಿಂದ ಮೊಬೈಲ್‌ನಿಂದ ದೂರವಿರಿ, ಸಾಮಾಜಿಕ ಜಾಲತಾಣ ಬೇಕಾದಷ್ಟೇ ಬಳಕೆ ಮಾಡಿ ಎಂದು ಸಮೀಕ್ಷಕರು ಕಿವಿಮಾತು ಹೇಳಿದ್ದಾರೆ.

  ಓದಿರಿ: ಮೊಬೈಲ್ ಬಗ್ಗೆ ಸಾರ್ವಜನಿಕ ಅರ್ಜಿ!..ಜನರ ತಲೆಕೆಡಿಸಿದ ಕೋರ್ಟ್ ನಿರ್ದೇಶನ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮೊಬೈಲ್ ವ್ಯಸನದ ಬಗ್ಗೆ ನಿಮ್ಹಾನ್ಸ್ ಅಧ್ಯಯನ ಹೇಳಿರುವುದೇನು ಗೊತ್ತಾ?!

  2017 ರ ನವೆಂಬರ್ ತಿಂಗಳಿನಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ಸಮ್ಮೇಳನದಲ್ಲಿ ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದ ಕುರಿತು ಗಂಭೀರವಾದ ಚರ್ಚೆಯಾಗಿತ್ತು. ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಮೊಬೈಲ್ ಹಾಗೂ ಅಂತರ್ಜಾಲ ಹೊಂದಿದೆ ಎಂದು ಈ ಚರ್ಚೆಯಲ್ಲಿ ಪ್ರಮುಖ ವಿಷಯವಾಗಿತ್ತು.!!
  ಹೌದು, ತಂತ್ರಜ್ಞಾನ ನಮ್ಮ ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಅದೇ ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತದೆ, ಮತ್ತೆ ಆ ಸಮಸ್ಯೆಗೆ ಪರಿಹಾರವನ್ನು ಮತ್ತೊಂದು ತಂತ್ರಜ್ಞಾನ ನೀಡುತ್ತದೆ ಎನ್ನುವ ಮಾತು ಮೊಬೈಲ್ ಹಾಗೂ ಅಂತರ್ಜಾಲ ಬಳಕೆಯಲ್ಲಿ ಅಕ್ಷರಶಃ ನಿಜವಾಗಿದೆ.!!
  ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು ವಿಶ್ವ ಆರೋಗ್ಯ ಸಂಸ್ಥೆಯು 'ಆಡುವ ಅಸ್ವಸ್ಥತೆ' ಎಂದು ಗುರುತಿಸಿದೆ. ಇತ್ತೀಚೆಗಿನ ನಿಮ್ಹಾನ್ಸ್ ಅಧ್ಯಯನದ ಪ್ರಕಾರ 15 ನಿಮಿಷಕ್ಕೆ 150 ಸೆಲ್ಫೀ ತೆಗೆಯುವ ಗೀಳಿರುವ ಯುವಜನ ಇದ್ದಾರಂತೆ!! ಹಾಗಾದರೆ, ಈ ಮೊಬೈಲ್ ವ್ಯಸನದಿಂದ ಮುಕ್ತಿ ಹೊಂದುವುದು ಹೇಗೆ? ವ್ಯಸನ ಮುಕ್ತಿಗೆ ಅಡ್ಡಿ ಬರುತ್ತಿರುವುದು ಏನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  ಖಿನ್ನತೆ, ಭಯ, ಆತಂಕ!!

  ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು 'ಆಡುವ ಅಸ್ವಸ್ಥತೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರಿತಿಸುವ ಮುನ್ನವೇ ಮೊಬೈಲ್ ಗೇಮ್ ಮತ್ತು ಅಂತರ್ಜಾಲದ ವ್ಯಸನವಿರುವವರಲ್ಲಿ ಶೇಕಡಾ 7 ರಷ್ಟು ಮಂದಿ ಖಿನ್ನತೆ, ಭಯ, ಆತಂಕ ಹಾಗು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೋರ್ಪಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.!!

  ಅಂತರ್ಜಾಲ ಆಧುನಿಕ ರೋಗ.!!

  ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತದೆ, ಮತ್ತೆ ಆ ಸಮಸ್ಯೆಗೆ ಪರಿಹಾರವನ್ನು ಮತ್ತೊಂದು ತಂತ್ರಜ್ಞಾನ ನೀಡುತ್ತದೆ ಎನ್ನುವ ಮಾತಿನಂತೆ ಮೊಬೈಲ್ ಹಾಗೂ ಅಂತರ್ಜಾಲ ಆಧುನಿಕ ರೋಗಗಳಾಗಿವೆ. ಇವು ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಹೊಂದಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.!!

  ಸಮಸ್ಯೆಗಳು ಹಲವು!!

  ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದಿಂದ ವಯಸ್ಕರು ಮಾನಸಿಕ ಆರೋಗ್ಯ ಕೆಡಿಸಿಕೊಂಡರೆ, ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆಯದೆ ಏಕಾಂಗಿಯಾಗಿರುವುದು, ಕಲಿಕೆಯಲ್ಲಿ ಹಿಂದುಳಿಯುವುದು, ಸ್ಥೂಲಕಾಯ, ಏಕಾಗ್ರಹೀನತೆ ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಾರೆ.! ಈ ದುಷ್ಪರಿಣಾಮಗಳು ಗೋಚರಿಸುವಾಗ ಸಮಯ ಬಹಳ ಮೀರಿರುತ್ತದೆ.!!

  ಸೆಲ್ಫೀಯೂ ಗೀಳೆ!!

  ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲೇ ವಿಹರಿಸುತ್ತಿರುವತಂಹ ಮುಂತಾದ ಅನೇಕ ಸಮಸ್ಯೆಗಳು ಇತ್ತೀಚೆಗೆ ಯುವ ಜನತೆಯಲ್ಲಿ ಕಾಣಿಸುತಿದೆ. ಮೊಬೈಲ್ ಅನ್ನು ಆಗಾಗ ಸುಮ್ಮನೇ ಆನ್ ಮಾಡಿ ನೋಡುವುದೂ ಮತ್ತು ಸೆಲ್ಫೀ ತೆಗೆದುಕೊಳ್ಳುವುದು ಗೀಳಾಗಿ ಬದಲಾಗಿದೆ.! ಇದು ಎಲ್ಲರ ಸಮಸ್ಯೆಯಾಗಿ ಬದಲಾಗಿದೆ.!!

  ವ್ಯಸನ ಎಂಬುದನ್ನು ಒಪ್ಪಿಕೊಳ್ಳಿ!!

  ಮೊಬೈಲ್ ಹಾಗೂ ಅಂತರ್ಜಾಲದ ಬಳಕೆ ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ ವ್ಯಸನ ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಮಿತಗೊಳಿಸಿ ನಾವೇ ಲಗಾಮು ಹಾಕಿಕೊಂಡರಹಷ್ಟೆ ಇವುಗಳ ವ್ಯಸನದಿಂದ ನಾವು ಪಾರಾಗಬಹುದಾಗಿದೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  People who are more dependent on their smartphones are less certain about their relationships, according to new research.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more