ಇಸ್ರೋ 'ಯುವ ವಿಜ್ಞಾನಿ' ಕೋರ್ಸ್‌ಗೆ ಅರ್ಜಿ ಆಹ್ವಾನ ; ಇದೇ ಏಪ್ರಿಲ್ 3 ಕೊನೆಯ ದಿನ!

|

ಹಲವು ವಿಸ್ಮಯಗಳ ತಾಣವಾಗಿರುವ ಅಂತರಿಕ್ಷದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಅಚ್ಚರಿಯ ಸಂಗತಿಗಳ ಬಗ್ಗೆ ತಿಳಿಯುವ ಆಸಕ್ತಿ ಹೆಚ್ಚು. ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅದಕ್ಕೊಂದು ವೇದಿಕೆ ಕಲ್ಪಿಸಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಅಂತರಿಕ್ಷದ ಟೆಕ್ನೊಲಜಿ ಬಗ್ಗೆ ಮಾಹಿತಿ ಒದಗಿಸಲು ಮುಂದಾಗಿದೆ.

ಇಸ್ರೋ 'ಯುವ ವಿಜ್ಞಾನಿ' ಕೋರ್ಸ್‌ಗೆ ಅರ್ಜಿ ಆಹ್ವಾನ ; ಇದೇ ಏಪ್ರಿಲ್ 3 ಕೊನೆಯ ದಿನ!

ಹೌದು, ದೇಶದ ಹೆಮ್ಮೆಯ 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ' 'ಯುವ ವಿಜ್ಞಾನಿ ಕಾರ್ಯಕ್ರಮ' (YUVIKA) ವನ್ನು ಆಯೋಜಿಸಿದ್ದು, ಸಂಸ್ಥೆಯು ಶಾಲಾ ಮಕ್ಕಳಿಗೆ ಅಂತರಿಕ್ಷದ ತಂತ್ರಜ್ಞಾನದ ಮಾಹಿತಿ ನೀಡುವ ಉದ್ದೇಶ ಹೊಂದಿದೆ. ಎರಡು ವಾರಗಳ ಕಾಲ ನಡೆಯುವ ಯುವಿಕಾ ಕೋರ್ಸ್‌ಗೆ ಇದೇ ಮಾರ್ಚ್ 25 ರಿಂದ ಅರ್ಜಿ ಆಹ್ವಾನಿಸಿದ್ದು, ತರಗತಿಗಳು ಇದೇ ಮೇ ತಿಂಗಳಲ್ಲಿ ಆರಂಭವಾಗಲಿವೆ.

ಇಸ್ರೋ 'ಯುವ ವಿಜ್ಞಾನಿ' ಕೋರ್ಸ್‌ಗೆ ಅರ್ಜಿ ಆಹ್ವಾನ ; ಇದೇ ಏಪ್ರಿಲ್ 3 ಕೊನೆಯ ದಿನ!

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಶ್ರೇಷ್ಠ ವಿಜ್ಞಾನಿಗಳು ಶಾಲಾ ವಿದ್ಯಾರ್ಥಿಗಳಿಗೆ ಅಂತರಿಕ್ಷ ಟೆಕ್ನೊಲಜಿ, ಅಂತರಿಕ್ಷ ವಿಜ್ಞಾನ ಮತ್ತು ಅಂತರಿಕ್ಷ ಅಪ್ಲಿಕೇಶನ್‌ಗಳ ಕುರಿತಾಗಿ ಬೇಸಿಕ್ ಮಾಹಿತಿ ನೀಡಲಿದ್ದಾರೆ. ಹಾಗಾದರೇ ಇಸ್ರೋ ಸಂಸ್ಥೆ ನಡೆಸಲಿರುವ ಈ ಯುವ ವಿಜ್ಞಾನಿ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಮತ್ತು ಕಾರ್ಯಕ್ರಮದ ಪ್ರಮುಖ ಅಂಶಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏನಿದು ಯುವಿಕಾ ಕೋರ್ಸ್‌

ಏನಿದು ಯುವಿಕಾ ಕೋರ್ಸ್‌

ಶಾಲಾ ವಿದ್ಯಾರ್ಥಿಗಳಿಗೆ ಅಂತರಿಕ್ಷ ಟೆಕ್ನೊಲಜಿ ಬಗ್ಗೆ ಇಸ್ರೋದ ಪ್ರಮುಖ ವಿಜ್ಞಾನಿಗಳಿಂದ ಅಂತರಿಕ್ಷದ ತಂತ್ರಜ್ಞಾನದ ಮಾಹಿತಿಯನ್ನು ತಿಳಿಸುವುದು ಮತ್ತು ಅವರಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವುದು 'ಯುವ ವಿಜ್ಞಾನಿ ಕಾರ್ಯಕ್ರಮದ' ಆಶಯವಾಗಿದೆ. ಇಸ್ರೋ ಯುವಿಕಾ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಿದ್ದು, ಈ ಮೂಲಕ ಸರ್ಕಾರದ ಜೈ ವಿಜ್ಞಾನ, ಜೈ ಅನುಸಂದಾನ ಘೋಷ ವ್ಯಾಕ್ಯವನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

ಆಯ್ಕೆಯ ಮಾನದಂಡ

ಆಯ್ಕೆಯ ಮಾನದಂಡ

ಪ್ರಸ್ತುತ ಒಂಬತ್ತನೇ ತರಗತಿ ಮುಗಿಸಿರುವ ವಿದ್ಯಾರ್ಥಿಗಳು ಇಸ್ರೋದ 'ಯುವಿಕಾ ಕೋರ್ಸ್‌'ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. CBSE, ICSE ಅಥವಾ ಸ್ಟೇಟ್‌ ಸಿಲೆಬಸ್ ನಲ್ಲಿ ಓದುತ್ತಿರುವ, ದೇಶದ ಯಾವುದೇ ಭಾಗದಿಂದಲೂ ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಇಸ್ರೋ ಸಂಸ್ಥೆ ಪ್ರತಿ ರಾಜ್ಯದಿಂದ ಮೂರು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಿದೆ.

ಆಯ್ಕೆ ಹೇಗೆ

ಆಯ್ಕೆ ಹೇಗೆ

ಯುವಿಕಾ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯ ಎಂಟನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಮತ್ತು ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಫಲಿತಾಂಶದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿ ಆಗಿದ್ದರೇ ವಿಶೇಷ ಆದ್ಯತೆ ಇರಲಿದೆ.

ವೆಚ್ಚ ಭರಿಸಲಿದೆ ಇಸ್ರೋ

ವೆಚ್ಚ ಭರಿಸಲಿದೆ ಇಸ್ರೋ

ಆಯ್ಕೆ ಆಗುವ ವಿದ್ಯಾರ್ಥಿಗಳಿಯ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಿದ್ದು, ಕೋರ್ಸ್‌ ಸಮಯದಲ್ಲಿ ಅಗತ್ಯವಿರುವ ಪರಿಕರಗಳನ್ನು ಒದಗಿಸಲಿದೆ. ಇದರೊಂದಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭರಿಸುವ ಜೊತೆಗೆ ವಿದ್ಯಾರ್ಥಿಯನ್ನು ಕಳುಹಿಸಲು ಬರುವ ಪಾಲಕರೊಬ್ಬರ ಪ್ರಯಾಣ ವೆಚ್ಚವನ್ನು ಸಹ ಇಸ್ರೋ ಭರಿಸಲಿದೆ.

ಅರ್ಜಿ ಸಲ್ಲಿಸುವುದು ಹೇಗೆ

ಅರ್ಜಿ ಸಲ್ಲಿಸುವುದು ಹೇಗೆ

ಇಸ್ರೋದ ಯುವ ವಿಜ್ಞಾನಿ ಕೋರ್ಸ್‌ಗೆ ಅರ್ಜಿಸಲ್ಲಿಸಲು ಇದೇ ಏಪ್ರಿಲ್ 3 ಕೊನೆಯ ದಿನವಾಗಿದ್ದು, ಆನ್‌ಲೈನ್ ಮೂಲಕ ಮಾತ್ರ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿಸಲ್ಲಿಸಲು ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. www.isro.gov.in

Best Mobiles in India

English summary
ISRO offers 2-week science course for school students.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X