ಚಂದ್ರಯಾನ-3 ಸಿದ್ಧತೆಯಲ್ಲಿ ಇಸ್ರೋ : 2020ರ ನವೆಂಬರ್‌ಗೆ ಉಡಾವಣೆ!

|

ಇತ್ತೀಚಿಗಷ್ಟೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ISRO) ಚಂದ್ರಯಾನ-2 ಉಡಾವಣೆ ಮಾಡಿದ್ದು, ಚಂದ್ರನ ಅಂಗಳದ ಮೇಲೆ ವಿಕ್ರಂ ಲ್ಯಾಂಡರ್ ಇಳಿಸುವ ಯೋಜನೆ ಅಂದುಕೊಂಡಂತೆ ನಡೆಯಲಿಲ್ಲ. ಆದ್ರೆ ಈಗ ಇಸ್ರೋ ಮತ್ತೊಮ್ಮೆ ಚಂದ್ರಯಾನ-3 ಮಿಷನ್ ಉಡಾವಣೆ ಮಾಡಲು ಯೋಜನೆ ಮಾಡಿದ್ದು, ಈ ಬಾರಿ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕೆಳಗಿಳಿಸುವ ಪ್ರಯತ್ನ ಮಾಡಲಿದೆ.

ಇಸ್ರೋ

ಹೌದು, ಇಸ್ರೋ ಸಂಸ್ಥೆಯು ಇದೀಗ ಚಂದ್ರಯಾನ-3 ಯೋಜನೆ ಮೂಲಕ ಚಂದ್ರನ ಮೇಲೆ ಮತ್ತೊಮ್ಮೆ ಲ್ಯಾಂಡರ್‌ ಮತ್ತು ರೋವರ್‌ ಇಳಿಸಲು ಸಜ್ಜಾಗುತ್ತಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುಂಬರುವ ನವೆಂಬರ್ 2020ರಲ್ಲಿ ನಡೆಸಲು ಇಸ್ರೋ ತಯಾರಾಗುತ್ತಿದೆ. ಈಗಾಗಲೇ ಈ ಯೋಜನೆಯ ಕುರಿತಾಗಿ ಸಿದ್ಧತೆಯ ಕೆಲಸಗಳನ್ನು ಶುರುಮಾಡಲಾಗಿದೆ ಎಂದು ಇಸ್ರೋ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಂದ್ರಯಾನ-3

ಚಂದ್ರಯಾನ-3 ಮಹತ್ವದ ಯೋಜನೆಯ ಕುರಿತು ಇಸ್ರೋ ತಂಡ ಸಿದ್ಧತೆಯಲ್ಲಿದ್ದು, ವರ್ಷ್ಯಾಂತ್ಯದೊಳಗೆ ವರದಿ ತಯಾರಾಗಲಿದೆ. ಈ ಬಾರಿಯ ಚಂದ್ರಯಾನದಲ್ಲಿ ಲ್ಯಾಂಡರ್‌ ಮತ್ತು ರೋವರ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಏಕೆಂದರೇ ಚಂದ್ರಯಾನ-2 ರಲ್ಲಿ ಆರ್ಬಿಟರ್‌ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ನೂತನ ಯೋಜನೆಯಲ್ಲಿ ಆರ್ಬಿಟರ್‌ಗೆ ಹೆಚ್ಚು ಒತ್ತನ್ನು ನೀಡಲಾಗುವುದಿಲ್ಲ ಎನ್ನಲಾಗಿದೆ.

ಚಂದ್ರಯಾನ್

ಚಂದ್ರಯಾನ-3 ಯೋಜನೆಯಲ್ಲಿ ಮಿಷನ್‌ನ ಪೇಲೋಡ್ ಸಾಮರ್ಥ್ಯವು ಸುಮಾರು 500 ಕಿ.ಗ್ರಾಂ ಇರಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಉಡಾವಣೆಯ ಒಟ್ಟು ದ್ರವ್ಯರಾಶಿ 6 ಟನ್ ಅಥವಾ ಅದಕ್ಕಿಂತ ಹೆಚ್ಚಾಗಿರಲಿದೆ ಎನ್ನಲಾಗುತ್ತಿದೆ. ಅಕ್ಟೋಬರ್ 22, 2008 ರಲ್ಲಿ ಚಂದ್ರಯಾನ್ -1 ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದ್ದು, ಈ ಯೋಜನೆಯು ಚಂದ್ರನ ಮೇಲೆ ನೀರನ್ನು ಸಂಶೋಧಿಸಿತ್ತು.

ಲ್ಯಾಂಡರ್

ಹಾಗೆಯೇ ಜುಲೈ22, 2019ರಲ್ಲಿ ಚಂದ್ರಯಾನ-2 ಮಿಷನ್ ಉಡಾವಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವ ಯೋಜನೆ ಹೊಂದಿತ್ತು. ಅದಕ್ಕಾಗಿ ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಹಗುರವಾಗಿ ಲ್ಯಾಂಡ್‌ ಆಗಬೇಕಿತ್ತು. ಆದರೆ ಇಸ್ರೊ ಅಂದುಕೊಂಡಂತೆ ಲ್ಯಾಂಡರ್ ಇಳಿದಿಲ್ಲ. ಆದ್ರೆ, ಈಗ ಇಸ್ರೋದಿಂದ ಚಂದ್ರಯಾನ-3 ಯೋಜನೆ ಸಿದ್ಧವಾಗುತ್ತಿದೆ.

Best Mobiles in India

English summary
Indian Space Research Organization (ISRO) is preparing for its next moon mission. Called Chandrayaan-3. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X