ಇಸ್ರೋದ ಮಹತ್ತರ ಸಾಧನೆ; ನಿಗದಿತ ಕಕ್ಷೆ ಸೇರಿದ ಎಮಿಸ್ಯಾಟ್‌ ಉಪಗ್ರಹ.!

|

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಬೆಳಿಗ್ಗೆ 9.27ಕ್ಕೆ, ಶ್ರೀಹರಿಕೋಟಾದ ಸತೀಶ ಧವನ ಸ್ಥಳದಿಂದ, ಪೋಲಾರ್‌ ಉಪಗ್ರಹ ಉಡ್ಡಯನ ವಾಹನ PSLV C-45 ದ ಮೂಲಕ ಎಮಿಸ್ಯಾಟ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಈ ಮೂಲಕ ಮಹತ್ತರ ಸಾಧನೆಯನ್ನು ಮಾಡಿದೆ. ಎಮಿಸ್ಯಾಟ್‌ ಉಪಗ್ರಹ ಇತರೆ 28 ಉಪಗ್ರಹಗಳನ್ನು ಸಹ ತನ್ನೊಂದಿಗೆ ಹೊತ್ತೊಯ್ದಿದೆ.

ಇಸ್ರೋದ ಮಹತ್ತರ ಸಾಧನೆ; ನಿಗದಿತ ಕಕ್ಷೆ ಸೇರಿದ ಎಮಿಸ್ಯಾಟ್‌ ಉಪಗ್ರಹ.!

ಎಲೆಕ್ಟ್ರೋ-ಮ್ಯಾಗ್ನೆಟಿಕ್ ಇಂಟೆಲಿಜೆನ್ಸ್ ಉಪಗ್ರಹ ಎಮಿಸ್ಯಾಟ್‌ ಯಶಸ್ವಿಯಾಗಿ ಕಕ್ಷೆಯನ್ನು ಸೇರಿದ್ದು, ಈ ಉಪಗ್ರಹ ಭಾರತೀಯ ಭದ್ರತಾ ವಿಭಾಗಕ್ಕೆ ಉಪಯುಕ್ತವಾಗಲಿದೆ. ಶತ್ರು ಪಡೆಗಳ ರೆಡಾರ ಬಗ್ಗೆ ನಿಗಾ ಇಡಲು ಈ ಉಪಗ್ರಹ ನೆರವಾಗಲಿದೆ. ಇಸ್ರೋ ಸಂಸ್ಥೆಯು ಈ ಎಮಿಸ್ಯಾಟ್ ಉಪಗ್ರಹ 436 ಕಿ.ಲೋ ತೂಕದವನ್ನು ಹೊಂದಿತ್ತು. ಈ ಉಡಾವಣೆಯನ್ನು ವೀಕ್ಷಿಸಲು ಸಾಮಾನ್ಯ ಜನರು ಅವಕಾಶ ಮಾಡಿಕೊಡಲಾಗಿತ್ತು.

ಇಸ್ರೋದ ಮಹತ್ತರ ಸಾಧನೆ; ನಿಗದಿತ ಕಕ್ಷೆ ಸೇರಿದ ಎಮಿಸ್ಯಾಟ್‌ ಉಪಗ್ರಹ.!

ಭಾರತೀಯ ಸೇನಾಪಡೆಗಳಿಗೆ ಗುಪ್ತಚರ ಮಾಹಿತಿ ಒದಗಿಸುವ ಇಸ್ರೊ ನಿರ್ಮಿತ ಎಮಿಸ್ಯಾಟ್ ಉಪಗ್ರಹವು ತನ್ನೊಂದಿಗೆ ಲುಥಿಯಾನ್, ಸ್ಪೆನ್, ಸ್ವಿಜರ್ಲ್ಯಾಂಡ್ ಮತ್ತು ಯುಎಸ್‌ ಸೇರಿದಂತೆ ಒಟ್ಟು 28 ರಾಷ್ಟ್ರಗಳ ಚಿಕ್ಕ ಉಪಗ್ರಹಗಳನ್ನು ತನ್ನೊಂದಿಗೆ ಕಕ್ಷೆಗೆ ಹೊತ್ತೊ ಹೋಗಿದೆ. 748 ಕಿ.ಮೀ ಆರ್ಬಿಟ್‌ ದೂರದ ವರೆಗೂ ಕ್ರಮಿಸಿದ್ದು ಇತರೆ 28 ಉಪಗ್ರಹಗಳನ್ನು 504ಕಿ.ಮೀ ದೂರದವರೆಗೂ ಕಕ್ಷೆಯನ್ನು ತಲುಪಿಸಿದೆ.

ಇಸ್ರೋದ ಮಹತ್ತರ ಸಾಧನೆ; ನಿಗದಿತ ಕಕ್ಷೆ ಸೇರಿದ ಎಮಿಸ್ಯಾಟ್‌ ಉಪಗ್ರಹ.!

ಎಮಿಸ್ಯಾಟ್ ಉಪಗ್ರಹವು ಯಶಸ್ವಿಯಾಗಿ ತನ್ನ ನಿಗದಿತ ಕಕ್ಷೆ ಸೇರುತ್ತಿದ್ದಂತೆ ಇಸ್ರೊ ಮುಖ್ಯಸ್ಥ ಕೆ. ಶಿವನ್ ಮತ್ತು ಇಸ್ರೋ ತಂಡ ಸಂತಸ ವ್ಯಕ್ತಪಡಿಸಿದರು. 'ಎಮಿಸ್ಯಾಟ್ ಉಪಗ್ರಹ ಯಶಸ್ಸಿನ ಹಿಂದೆ ಇಸ್ರೋದ ಪ್ರತಿಯೊಬ್ಬರ ಕೆಲಸದ ಪರಿಶ್ರಮದ ಫಲ ಎಂಬುದನ್ನು ಇಸ್ರೋ ತಂಡಕ್ಕೆ ಕೆ. ಶಿವನ್ ಅವರು ತಿಳಿಸಿದ್ದು, ಎಲ್ಲರಿಗೂ ಧನ್ಯವಾದವನ್ನು ಸಹ ಸಲ್ಲಿಸಿದರು.

ಉಪಗ್ರಹ ಉಡ್ಡಯನ ವಾಹನ PSLV C-45 ದ 47 ನೇ ಉಡಾವಣೆ ಇದಾಗಿದ್ದು, ಉದ್ದದ ಉಡ್ಡಯನ ವಾಹನವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಉದ್ದಿಮೆಯೊಂದು ಎಮಿಸ್ಯಾಟ್‌ಗೆ ಶೇ 60 ರಿಂದ 70ರಷ್ಟು ಬಿಡಿಭಾಗಗಳನ್ನು ಸಿದ್ಧಪಡಿಸಿಕೊಟ್ಟಿದೆ.

Best Mobiles in India

English summary
Isro’s PSLV-C45 places Emisat, 28 foreign satellites in orbits.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X