ಫೇಸ್‌ಬುಕ್ ಸಂಸ್ಥೆಗೆ 81 ಕೋಟಿ ರೂ.ದಂಡ!
ವಿಶ್ವದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಸಿದ್ದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಇಟಲಿ ಸರ್ಕಾರ ಭಾರೀ ದಂಡ ವಿಧಿಸಿದೆ. ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ತನ್ನ ಬಳಕೆದಾರರ ಡೇಟಾವನ್ನು ದುರ್ಬಳಕೆ ಮಾಡಿಕೊಂಡು ಅವರ ದಾರಿತಪ್ಪಿಸಿದೆ ಎಂದು ಇಟಾಲಿಯನ್ ಅಧಿಕಾರಿಗಳು ಫೇಸ್‌ಬುಕ್ ಸಂಸ್ಥೆಗೆ 81 ಕೋಟಿ ರೂ. ದಂಡ ದಂಡವಿಧಿಸಿದ್ದಾರೆ.
ದೇಶದ ಫೇಸ್‌ಬುಕ್ ಬಳಕೆದಾರರರು ನೀಡಿರುವ ವೈಯಕ್ತಿಕ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಫೇಸ್‌ಬುಕ್ ಬಳಸಿಕೊಂಡಿದೆ. ಜೊತೆಗೆ ಈ ಮಾಹಿತಿಯನ್ನು ದೇಶದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ಸಹ ಫೇಸ್‌ಬುಕ್ ತಂದಿರಲಿಲ್ಲ. ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸುಮಾರು 81 ಕೋಟಿ ರೂ. ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಟಲಿ ತಿಳಿಸಿದೆ.

ಫೇಸ್‌ಬುಕ್ ತನ್ನ ಬಳಕೆದಾರರ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದು, ಈ ಮೂಲಕ ವೆಬ್ಸೈಟ್ಗಳಿಂದ ಮತ್ತು ಇತರೆ ಕೆಲ ಅಪ್ಲಿಕೇಶನ್ಗಳ ಮೂಲಕ ಅನುಚಿತ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿದೆ. ಈ ಮೂಲಕ ಬಳಕೆದಾರರ ದತ್ತಾಂಶಗಳನ್ನು ಬಳಸಿ ಫೇಸ್‌ಬುಕ್ ಲಾಭ ಮಾಡಿಕೊಳ್ಳುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಯೋರ್ವರು ಹೇಳಿರುವುದು ದಾಖಲಾಗಿದೆ.
ದೇಶದ ಗ್ರಾಹಕ ಕೋಡ್‌ನ 21, 22, 24 ಮತ್ತು 25 ಲೇಖನಗಳನ್ನು ಫೇಸ್‌ಬುಕ್ ಸಂಸ್ಥೆ ಉಲ್ಲಂಘಿಸಿದೆ ಎಂದು ಇಟಾಲಿಯನ್ ನಿಯಂತ್ರಕ ಮಂಡಳಿ ಹೇಳಿದ್ದು, ಈ ನಿಟ್ಟಿನಲ್ಲಿ ಅಧಿಕೃತ ವೆಬ್ಸೈಟ್ನಲ್ಲಿ ಮತ್ತು ಆಪ್ನಲ್ಲಿ ಕ್ಷಮಾಪಣೆ ಪ್ರಕಟಿಸುವಂತೆ ಫೇಸ್‌ಬುಕ್‌ಗೆ ಎಸಿಜಿಎಂ ಪ್ರಾಧಿಕಾರ ಸೂಚಿಸಿದೆ. ಆದರೆ, ಫೇಸ್‌ಬುಕ್ ಕ್ಷಮಾಪಣೆ ಪ್ರಕಟಿದೆಯೇ ಎಂಬುದು ಮಾತ್ರ ತಿಳಿದುಬಂದಿಲ್ಲ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ಸಂಸ್ಥೆಯ ವಕ್ತಾರರು, ನಾವು ನಮ್ಮ ಬಳಕೆದಾರರ ಮಾಹಿತಿ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದೇವೆ. ನಾವು ಡೇಟಾವನ್ನು ಯಾವ ರೀತಿಯಾಗಿ ಬಳಸಿಕೊಳ್ಳುತ್ತೇವೆ, ನಮ್ಮ ವ್ಯವಹಾರಗಳು ಹೇಗೆ ನಡೆಯುತ್ತಿದೆ ಮತ್ತು ಸಂಸ್ಥೆಯ ನೀತಿ ನಿಯಮಗಳು ಯಾವುವು ಎಂಬುದನ್ನು ಅರ್ಥ ಮಾಡಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಓದಿರಿ: ಗೂಗಲ್‌ನಿಂದ ಈ 22 ಕಳ್ಳ ಆಪ್‌ಗಳು ಬ್ಯಾನ್!..ನಿಮ್ಮ ಫೋನನ್ನು ಈಗಲೇ ಚೆಕ್ ಮಾಡಿ!


Click it and Unblock the Notifications








