Home
ಸುದ್ದಿಜಾಲ

Itel: ಐಟೆಲ್‌ನಿಂದ ಹೊಸ ಫೋನ್‌ ಲಾಂಚ್; 32GB ಸ್ಟೋರೇಜ್.. 4000mAh ಬ್ಯಾಟರಿ, ಅಗ್ಗದ ಬೆಲೆ!

ಐಟೆಲ್‌(Itel) ಫೋನ್‌ಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಉಂಟಾಗುತ್ತಿದೆ. ಅದರಲ್ಲೂ ಬಹಳ ಅಗ್ಗದ ಬೆಲೆಯಲ್ಲಿ ಈ ಫೋನ್‌ಗಳು ಲಭ್ಯ ಆಗುತ್ತಿರುವುದರಿಂದ ಸಾಕಷ್ಟು ಭಾರತೀಯ ಬಳಕೆದಾರರು ಫೀಚರ್ಸ್‌ ಫೋನ್‌ಗಳ ಬದಲಿಗೆ ಇವುಗಳನ್ನೇ ಖರೀದಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಐಟೆಲ್‌ ಹೊಸ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ.

ಹೌದು, ಐಟೆಲ್‌ ಸ್ಮಾರ್ಟ್‌ಫೋನ್‌ಗಳು ಇಂದು ಇತರೆ ಸ್ಮಾರ್ಟ್‌ಫೋನ್‌ಗಳಿಗೆ ತಮ್ಮದೇ ಆದ ಪೈಪೋಟಿ ನೀಡುತ್ತಿವೆ. ಈ ಬೆಳವಣಿಗೆ ನಡುವೆ ಐಟೆಲ್‌ ಭಾರತದಲ್ಲಿ ಐಟೆಲ್‌ A05s (Itel A05s) ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ದೊಡ್ಡ ಡಿಸ್‌ಪ್ಲೇ ಹೊಂದಿದ್ದು, ಉತ್ತಮ ಪ್ರೊಸೆಸರ್ ಅನ್ನು ಪಡೆಯುವ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಐಟೆಲ್‌ನಿಂದ ಹೊಸ ಫೋನ್‌ ಲಾಂಚ್; 32GB ಸ್ಟೋರೇಜ್.. 4000mAhಬ್ಯಾಟರಿ, ಅಗ್ಗದ ಬೆಲೆ

ಐಟೆಲ್‌ A05s ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ (HD+LCD) ಡಿಸ್‌ಪ್ಲೇ ಹೊಂದಿದ್ದು, ಇದು 1612 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಹಾಗೂ 120Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಆಯ್ಕೆಯನ್ನೂ ಸಹ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರರು ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ಐಟೆಲ್‌ A05s ಪ್ರೊಸೆಸರ್‌ ಮಾಹಿತಿ: ಈ ಫೋನ್‌ ಅನ್ನು ಪ್ರಬಲ 1.6GHz ಯುನಿಸಾಕ್ SC9863A ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ (Unisock SC9863A octa-core processor) ಪರಿಚಯಿಸಲಾಗಿದೆ. ಈ ಪ್ರೊಸೆಸರ್ ಸುಧಾರಿತ ಕಾರ್ಯಕ್ಷಮತೆಯನ್ನು ನೀಡಲಿದ್ದು, ವಿಡಿಯೋ ವೀಕ್ಷಣೆಗೆ ಹಾಗೂ ಇನ್ನಿತರೆ ಕಾರ್ಯಚಟುವಟಿಕೆಗೆ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ ಜೊತೆಗೆ ಆಂಡ್ರಾಯ್ಡ್ 13 ಗೋ ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಅನ್ನು ರನ್‌ ಮಾಡಲಿದೆ.

ಉಳಿದಂತೆ ಈ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಇದರೊಂದಿಗೆ ಜೊತೆಗೆ, ಸ್ಟೋರೇಜ್‌ ವಿಸ್ತರಣೆಗೂ ಅವಕಾಶ ನೀಡಲಾಗಿದೆ. ಅಂದರೆ ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ (Micro SD card) ಬಳಕೆ ಮಾಡಿಕೊಂಡು ಹೆಚ್ಚಿನ ಸ್ಟೋರೇಜ್‌ ಪಡೆದುಕೊಳ್ಳಬಹುದಾಗಿದೆ.

ಐಟೆಲ್‌ A05s ಕ್ಯಾಮೆರಾ ರಚನೆ: ಈ ಫೋನ್ ಕ್ಯಾಮೆರಾ ವಿಚಾರದಲ್ಲಿ ಅಷ್ಟೇನು ಉತ್ತಮ ಫೀಚರ್ಸ್‌ ಅನ್ನು ಪಡೆದಿಲ್ಲ. ಆದರೆ, ಬೆಲೆ ವಿಚಾರಕ್ಕೆ ಬಂದಾಗ ಇತರೆ ಫೋನ್‌ಗಳಿಗೆ ಹೋಲಿಕೆ ಮಾಡಿದ್ರೆ ಈ ಫೋನ್‌ ಬೆಸ್ಟ್‌ ಎನ್ನಬಹುದು. ಅದರಂತೆ ಈ ಫೋನ್ 5 ಮೆಗಾಪಿಕ್ಸೆಲ್‌ನ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್‌ ಎಲ್‌ಇಡಿ ಫ್ಲಾಶ್ ಬೆಂಬಲ ಪಡೆದಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್‌ ಸೆನ್ಸರ್‌ ಆಯ್ಕೆ ನೀಡಲಾಗಿದೆ.

ಐಟೆಲ್‌ A05s ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 4000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಇದು 10 ವ್ಯಾಟ್ ವೇಗದ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಈ ಮೂಲಕ ವೇಗದ ಚಾರ್ಜಿಂಗ್‌ ಹಾಗೂ ದೀರ್ಘ ಬ್ಯಾಕಪ್‌ ಅನ್ನು ಈ ಫೋನ್‌ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಉಳಿದಂತೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ಸಿಮ್, 4G ವೋಲ್ಟ್‌ಇ, ವೈ-ಫೈ, ಬ್ಲೂಟೂತ್, ಜಿಪಿಎಸ್, 3.5 ಎಂಎಂ ಆಡಿಯೊ ಜಾಕ್ ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಐಟೆಲ್‌ A05s ಬೆಲೆ ಹಾಗೂ ಲಭ್ಯತೆ: ಈ ವಿಶೇಷ ಸ್ಮಾರ್ಟ್‌ಫೋನ್‌ ಅನ್ನು 6,499 ರೂ.ಗಳ ಬೆಲೆಯಲ್ಲಿ ಪರಿಚಯಿಸಲಾಗಿದೆ. ಹಾಗೆಯೇ ಇದು ನೆಬ್ಯುಲಾ ಬ್ಲ್ಯಾಕ್, ಮೆಡೋ ಗ್ರೀನ್, ಕ್ರಿಸ್ಟಲ್ ಬ್ಲೂ ಮತ್ತು ಗ್ಲೋರಿಯಸ್ ಆರೆಂಜ್ ಎಂಬ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಈ ಹೊಸ ಫೋನ್ ಅನ್ನು ವಿಶೇಷವಾಗಿ ಐಟೆಲ್‌ ಇಂಡಿಯಾದ ವೆಬ್‌ಸೈಟ್‌ನಲ್ಲಿಯೂ ಖರೀದಿಸಬಹುದು.

ಐಟೆಲ್‌ನಿಂದ ಹೊಸ ಫೋನ್‌ ಲಾಂಚ್; 32GB ಸ್ಟೋರೇಜ್.. 4000mAhಬ್ಯಾಟರಿ, ಅಗ್ಗದ ಬೆಲೆ

ಐಟೆಲ್‌ ಕೆಲವು ದಿನಗಳ ಹಿಂದಷ್ಟೇ ಭಾರತದಲ್ಲಿ ಐಟೆಲ್‌ T1 ಪ್ರೊ ಎಂಬ ಇಯರ್‌ಬಡ್‌ಗಳನ್ನು ಸಹ ಲಾಂಚ್ ಮಾಡಿದೆ. ಈ ಇಯರ್‌ಬಡ್ಸ್‌ ಬೇಸ್‌ ಬೂಸ್ಟ್ ಡ್ರೈವರ್‌ಗಳನ್ನು ಹೊಂದಿದ್ದು, ನಾಯ್ಸ್‌ ಕ್ಯಾನ್ಸಲಿಂಗ್ ಫೀಚರ್ಸ್‌ ಅನ್ನು ಸಹ ಪಡೆದುಕೊಂಡಿದೆ. ಇದರೊಟ್ಟಿಗೆ ಇಯರ್‌ಬಡ್‌ಗಳು ಟಚ್‌ ಕಂಟ್ರೋಲ್‌ ಆಯ್ಕೆ ಹೊಂದಿದ್ದು, ಬ್ಲೂಟೂತ್ ಆವೃತ್ತಿ v5.3 , IPX5 ರೇಟಿಂಗ್ ಮತ್ತು 6 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಸೇರಿದಂತೆ ವಿವಿಧ ಸೌಲಭ್ಯ ಪಡೆದುಕೊಂಡಿದೆ. ಇದರ ಬೆಲೆ 849ರೂ.ಗಳು.

Best Mobiles in India

English summary
Itel A05s smartphone has been launched in India. This phone has a 6.6 inch HD Plus LCD display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+