ಅಗ್ಗದ ಬೆಲೆಯಲ್ಲಿ ಭಾರತದಲ್ಲಿ ಐಟೆಲ್ A47 ಸ್ಮಾರ್ಟ್‌ಫೋನ್ ಲಾಂಚ್!
ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಮೊಬೈಲ್‌ಗಳನ್ನು ಪರಿಚಯಿಸಿರುವ ಕಂಪನಿಗಳ ಪೈಕಿ ಐಟೆಲ್ ಸಹ ಒಂದಾಗಿದೆ. ಐಟೆಲ್ ಕಂಪನಿಯು ಈಗಾಗಲೇ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಐಟೆಲ್ ಕಂಪನಿಯು ಭಾರತದಲ್ಲಿ ಹೊಸದಾಗಿ ಐಟೆಲ್ A47 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ.

ಹೌದು, ಐಟೆಲ್ ಕಂಪೆನಿ ಹೊಸ ಐಟೆಲ್ A47 ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 2GB RAM ಸಾಮರ್ಥ್ಯವನ್ನು ಹೊಂದಿದ್ದು, 32GB ಆಂತರೀಕ ಸ್ಟೋರೇಜ್ ಅನ್ನು ಪಡೆದಿದೆ. ಹಾಗೆಯೇ ಈ ಪೋನ್ 3,020mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇನ್ನುಳಿದಂತೆ ಐಟೆಲ್ A47 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ
ಐಟೆಲ್ A47 ಸ್ಮಾರ್ಟ್‌ಫೋನ್ ತನ್ನ ವರ್ಗದಲ್ಲಿಯೇ ಉತ್ತಮ ರೆಸಲ್ಯೂಶನ್ ಹೊಂದಿರುವ 5.5-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು IPS ಡಿಸ್‌ಪ್ಲೇ ಆಗಿದ್ದು, 18:9 ರೆಶಿಯೋ ಹೊಂದಿದ್ದು, ಕಂಫರ್ಟ್ ಅನುಕೂಲ ಹೊಂದಿದೆ.

ಪ್ರೊಸೆಸರ್ ಬಲ
ಐಟೆಲ್ A47 ಸ್ಮಾರ್ಟ್‌ಫೋನ್ 1.4GHz ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಪೈ 9 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಗ್ಗದ ಬೆಲೆಯ ಈ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್ ಮೂಲಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮಾದರಿ
ಐಟೆಲ್ A47 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಿಯರ್ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 5ಎಂಪಿ ಸೆನ್ಸಾರ್ ಪಡೆದಿದ್ದು, AI ಆಧಾರಿತವಾಗಿದೆ. ಎರಡನೇ ಕ್ಯಾಮೆರಾವು ಬೇಸಿಕ್ ಸೆನ್ಸಾರ್‌ನ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾದಲ್ಲಿ ಎಐ ಬ್ಯೂಟಿ ಮೋಡ್, ಪೋರ್ಟ್ರೇಟ್ ಮೋಡ್, ಎಚ್‌ಡಿಆರ್, ಫೀಚರ್ಸ್ ಅನ್ನು ಸಹ ಒಳಗೊಂಡಿದೆ.

ಐಟೆಲ್ A47 ಸ್ಮಾರ್ಟ್‌ಫೋನ್ 3,020mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು, ಉತ್ತಮ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ VOLTE, ವೈಫೈ, ಬ್ಲೂಟೂತ್ , ಹಾಟ್‌ಸ್ಪಾಟ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆಯು 5,499ರೂ. ಆಗಿದೆ. ಪರ್ಪಲ್ ಹಾಗೂ ಐಸ್ ಲೆಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.


Click it and Unblock the Notifications