Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇಲ್ಲಿ ಗಮನಿಸಿ!

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಪ್ರಮುಖ ಆನ್‌ಲೈನ್‌ ಮಾರುಕಟ್ಟೆ ಆಗಿ ಗುರುತಿಸಿಕೊಂಡಿದೆ. ಅಮೆಜಾನ್ ಇ ಕಾಮರ್ಸ್‌ ತಾಣವು ಒಂದಿಲ್ಲೊಂದು ರಿಯಾಯಿತಿ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಸಾಗಿದೆ. ಇದೀಗ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಹೊಸ ಐಟೆಲ್ A60 ಮೊಬೈಲ್‌ ಸಖತ್ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಪ್ರಮುಖ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಐಟೆಲ್ A60 ಮೊಬೈಲ್‌ ಶೇ. 17% ರಷ್ಟು ನೇರ ಡಿಸ್ಕೌಂಟ್‌ ಪಡೆದುಕೊಂಡಿದೆ. ಗ್ರಾಹಕರು ಈ ಫೋನ್‌ ಅನ್ನು 5,999ರೂ. ಗಳ ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೇ ಲಭ್ಯ ಇರುವ ಎಕ್ಸ್‌ಚೆಂಜ್‌ ಆಫರ್‌, ಬ್ಯಾಂಕ್‌ ಡಿಸ್ಕೌಂಟ್‌ ಹಾಗೂ ಇತರೆ ಕೊಡುಗೆ ಪಡೆದುಕೊಂಡರೆ ಮತ್ತಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದು.

ಅಗ್ಗದ ಬೆಲೆಯಲ್ಲಿ ಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇಲ್ಲಿ ಗಮನಿಸಿ!

ಐಟೆಲ್ A60 ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ ಸಾಮರ್ಥ್ಯ ದೊಂದಿಗೆ ಕೆಲಸ ಮಾಡಲಿದ್ದು, ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಪ್ರಾಥಮಿಕ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯ ಲಭ್ಯ. ಇನ್ನುಳಿದಂತೆ ಐಟೆಲ್ A60 ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೇಗಿದೆ
ಐಟೆಲ್ A60 ಮೊಬೈಲ್‌ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಪಡೆದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಹೊಂದಿದೆ. ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 267 PPI ಆಗಿದೆ.

ಪ್ರೊಸೆಸರ್‌ ಪವರ್ ಸೌಲಭ್ಯ
ಐಟೆಲ್ A60 ಮೊಬೈಲ್‌ 1.4GHz ಕ್ವಾಡ್ ಕೋರ್ SC9832E ಪ್ರೊಸೆಸರ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲ ದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 2 GB RAM ಮತ್ತು 32 GB ಆಂತರೀಕ ಸ್ಟೋರೇಜ್ ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯ ವನ್ನು ವಿಸ್ತರಿಸಬಹುದಾಗಿದೆ.

ಡ್ಯುಯೆಲ್‌ ಕ್ಯಾಮೆರಾ ಸೆನ್ಸಾರ್ ಸೌಲಭ್ಯ
ಐಟೆಲ್ A60 ಮೊಬೈಲ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸರ್ ಮತ್ತು VGA ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 5 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇದರ ಬೇಸಿಕ್‌ ಎಡಿಟಿಂಗ್ ಆಯ್ಕೆಗಳು ಇವೆ.

ಐಟೆಲ್ A60 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಅಗ್ಗದ ಬೆಲೆಯ ಐಟೆಲ್ A60 ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ LTE ಬೆಂಬಲ, Wi-Fi, GPS, ಬ್ಲೂಟೂತ್ ಮತ್ತು 3.5mm ಆಡಿಯೊ ಜಾಕ್‌ನಂತಹ ಫೀಚರ್ಸ್‌ ಗಳ ಸೌಲಭ್ಯಗಳನ್ನು ಪಡೆದಿದೆ.

ಮೆಮೊರಿ ಆಯ್ಕೆ ಮತ್ತು ಕಲರ್ ಆಯ್ಕೆ
ಐಟೆಲ್ A60 ಮೊಬೈಲ್‌ ಭಾರತದಲ್ಲಿ 2 GB RAM ಮತ್ತು 32 GB ಆಂತರೀಕ ಸ್ಟೋರೇಜ್ ಪಡೆದಿದೆ. ಇನ್ನು ಈ ಫೋನ್‌ ಬ್ಲೂ, Vert Menthe ಮತ್ತು ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಐಟೆಲ್‌ ಸ್ಟೋರ್‌, ಪ್ರಮುಖ ರಿಟೇಲ್‌ ಸ್ಟೋರ್‌ ಹಾಗೂ ಆನ್‌ಲೈನ್‌ ತಾಣಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
itel A60 price drop on amazon website. offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+