Home
ಸುದ್ದಿಜಾಲ

ಭಾರೀ ಬೆಲೆ ಇಳಿಕೆ ಕಂಡಿದೆ ಈ ಅಗ್ಗದ ಸ್ಮಾರ್ಟ್‌ಫೋನ್‌!..ಅಚ್ಚರಿಯ ಬೆಲೆ!

ಇ ಕಾಮರ್ಸ್‌ ಸೈಟ್‌ಗಳ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಅಮೆಜಾನ್‌ ಪ್ಲಾಟ್‌ಫಾರ್ಮ್‌ ಫೋನ್‌ಗಳಿಗೆ ಬೊಂಬಾಟ್‌ ಆಫರ್‌ ನೀಡುವ ಮೂಲಕ ಅಧಿಕ ಶಾಪಿಂಗ್ ಪ್ರಿಯರನ್ನು ಸೆಳೆದಿದೆ. ಇದೀಗ ಅಮೆಜಾನ್‌ ತಾಣದಲ್ಲಿ ಅಗ್ಗದ ಬೆಲೆಗೆ ಫೋನ್‌ ಖರೀದಿಸುವವರಿಗೆ ಸಿಹಿಸುದ್ದಿ ಲಭ್ಯ ಇದೆ. ಏಕೆಂದರೆ ಐಟೆಲ್‌ ಸಂಸ್ಥೆಯ 'ಐಟೆಲ್‌ A60' ಮೊಬೈಲ್‌ ಭಾರೀ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಅಮೆಜಾನ್‌ ತಾಣದಲ್ಲಿ ಐಟೆಲ್‌ A60 ಮೊಬೈಲ್‌ ಶೇ. 21% ರಷ್ಟು ಆಕರ್ಷಕ ಡಿಸ್ಕೌಂಟ್‌ ಹೊಂದಿದ್ದು, ಖರೀದಿದಾರರು ಈ ಮೊಬೈಲ್‌ ಅನ್ನು 5,699ರೂ. ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದಲ್ಲದೇ ಕೆಲವು ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್‌ ಕೊಡುಗೆ ಹಾಗೂ ಇಎಮ್‌ಐ ಕೊಡುಗೆಗಳು ಸಹ ಲಭ್ಯ ಇರಲಿವೆ.

ಭಾರೀ ಬೆಲೆ ಇಳಿಕೆ ಕಂಡಿದೆ ಈ ಅಗ್ಗದ ಸ್ಮಾರ್ಟ್‌ಫೋನ್‌!..ಅಚ್ಚರಿಯ ಬೆಲೆ!

ಅಂದಹಾಗೆ ಈ ಫೋನ್‌ 1.4GHz ಕ್ವಾಡ್-ಕೋರ್ SC9832E ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದ್ದು, ಬ್ಲೂ ಮತ್ತು ಬ್ಲ್ಯಾಕ್‌ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಹಾಗಾದರೇ ಐಟೆಲ್‌ A60 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹಾಗೂ ವಿನ್ಯಾಸದ ಹೀಗಿದೆ

ಐಟೆಲ್ A60 ಮೊಬೈಲ್‌ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ಅಲ್ಲದೇ ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 267 PPI ಆಗಿದೆ.

ಭಾರೀ ಬೆಲೆ ಇಳಿಕೆ ಕಂಡಿದೆ ಈ ಅಗ್ಗದ ಸ್ಮಾರ್ಟ್‌ಫೋನ್‌!..ಅಚ್ಚರಿಯ ಬೆಲೆ!

ಪ್ರೊಸೆಸರ್‌ ಪವರ್‌ ಸಾಮರ್ಥ್ಯ ಹೀಗಿದೆ

ಐಟೆಲ್ A60 ಮೊಬೈಲ್‌ 1.4GHz ಕ್ವಾಡ್ ಕೋರ್ SC9832E ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32GB ಆಂತರೀಕ ಸ್ಟೋರೇಜ್ ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128 GB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ ಸೆನ್ಸಾರ್ ಸೌಲಭ್ಯ ಹೀಗಿದೆ

ಐಟೆಲ್ A60 ಮೊಬೈಲ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡದಿದ್ದು, ಇದರಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸರ್ ಮತ್ತು VGA ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 5 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಬೇಸಿಕ್‌ ಫೋಟೋ ಎಡಿಟಿಂಗ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಭಾರೀ ಬೆಲೆ ಇಳಿಕೆ ಕಂಡಿದೆ ಈ ಅಗ್ಗದ ಸ್ಮಾರ್ಟ್‌ಫೋನ್‌!..ಅಚ್ಚರಿಯ ಬೆಲೆ!

ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ ಇತರೆ ಮಾಹಿತಿ

ಐಟೆಲ್ A60 ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ LTE ಸಪೋರ್ಟ್, Wi-Fi, ಜಿಪಿಎಸ್‌, ಬ್ಲೂಟೂತ್ ಮತ್ತು 3.5mm ಆಡಿಯೊ ಜಾಕ್‌ನಂತಹ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ.

ಮೆಮೊರಿ ಆಯ್ಕೆ ಹಾಗೂ ಕಲರ್ ಆಯ್ಕೆ ಮಾಹಿತಿ

ಐಟೆಲ್ A60 ಫೋನ್‌ 2GB RAM ಮತ್ತು 32GB ಸ್ಟೋರೇಜ್‌ ವೇರಿಯಂಟ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ ಬ್ಲೂ ಮತ್ತು ಬ್ಲ್ಯಾಕ್‌ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಐಟೆಲ್‌ ಸ್ಟೋರ್‌, ಪ್ರಮುಖ ರಿಟೇಲ್‌ ಸ್ಟೋರ್‌ ಹಾಗೂ ಆನ್‌ಲೈನ್‌ ತಾಣಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
ಅಮೆಜಾನ್‌ ತಾಣದಲ್ಲಿ ಐಟೆಲ್‌ A60 ಮೊಬೈಲ್‌ ಶೇ. 21% ರಷ್ಟು ಆಕರ್ಷಕ ಡಿಸ್ಕೌಂಟ್‌ ಹೊಂದಿದ್ದು, ಖರೀದಿದಾರರು ಈ ಮೊಬೈಲ್‌ ಅನ್ನು 5,699ರೂ. ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿ ಮಾಡಲು ಅವಕಾಶ ಇದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+