ತುಂಬಾ ಅಗ್ಗದ ಬೆಲೆಯಲ್ಲಿ ಐಟೆಲ್ A60 ಸ್ಮಾರ್ಟ್‌ಫೋನ್ ಲಾಂಚ್!..ಫೀಚರ್ಸ್ ಏನು?
ಐಟೆಲ್ ಮೊಬೈಲ್ ಬ್ರ್ಯಾಂಡ್ ಹೊಸದಾಗಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದುವೇ ಐಟೆಲ್ A60 (itel A60) ಸ್ಮಾರ್ಟ್‌ಫೋನ್ ಆಗಿದೆ. ಇದು ಅಗ್ಗದ ಸ್ಮಾರ್ಟ್‌ಫೋನ್ ಆದರೂ, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಗ್ರಾಹಕರ ಗಮನ ಸೆಳೆದಿದೆ.
ಹೌದು, ಐಟೆಲ್ ಸಂಸ್ಥೆಯು ನೂತನ ಐಟೆಲ್ A60 ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್ ಮಾಡಿದೆ. ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಇದು ಎಂಟ್ರಿ ಲೆವೆಲ್ ಫೋನ್ ಆಗಿದ್ದು, 2GB RAM ವೇರಿಯಂಟ್ ಅನ್ನು ಒಳಗೊಂಡಿದೆ.

ಐಟೆಲ್ A60 ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ ಬೆಲೆಯು 5,999ರೂ. ಗಳು ಆಗಿದೆ. ಇನ್ನು ಈ ಫೋನ್ ಬ್ಲೂ, Vert Menthe ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಐಟೆಲ್ ಸ್ಟೋರ್, ಪ್ರಮುಖ ರಿಟೇಲ್ ಸ್ಟೋರ್ ಹಾಗೂ ಆನ್‌ಲೈನ್ ತಾಣಗಳಲ್ಲಿ ಖರೀದಿಗೆ ಲಭ್ಯ. ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಟೆಲ್ A60 : ಡಿಸ್‌ಪ್ಲೇ ವಿನ್ಯಾಸ
ಐಟೆಲ್ A60 ಸ್ಮಾರ್ಟ್‌ಫೋನ್ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಹೊಂದಿದೆ. ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 267 PPI ಆಗಿದೆ.

ಐಟೆಲ್ A60 : ಪ್ರೊಸೆಸರ್ ಯಾವುದು?
ಐಟೆಲ್ A60 ಸ್ಮಾರ್ಟ್‌ಫೋನ್ 1.4GHz ಕ್ವಾಡ್-ಕೋರ್ SC9832E ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32GB ಇಂಟರ್ ಸ್ಟೋರೇಜ್ ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಐಟೆಲ್ A60 : ಕ್ಯಾಮೆರಾ ವಿಶೇಷ
ಐಟೆಲ್ A60 ಸ್ಮಾರ್ಟ್‌ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 8 ಮೆಗಾಪಿಕ್ಸೆಲ್ ಸೆನ್ಸರ್ ಮತ್ತು VGA ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಬೇಸಿಕ್ ಎಡಿಟಿಂಗ್ ಆಯ್ಕೆಗಳು ಇವೆ.

ಐಟೆಲ್ A60 : ಬ್ಯಾಟರಿ ಮತ್ತು ಇತರೆ
ಐಟೆಲ್ A60 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ LTE ಬೆಂಬಲ, Wi-Fi, GPS, ಬ್ಲೂಟೂತ್ ಮತ್ತು 3.5mm ಆಡಿಯೊ ಜಾಕ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.
ಐಟೆಲ್ A60 : ಬೆಲೆ ಮತ್ತು ಲಭ್ಯತೆ
ಐಟೆಲ್ A60 ಸ್ಮಾರ್ಟ್‌ಫೋನ್ ಭಾರತದಲ್ಲಿ 5,999ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್ ಬ್ಲೂ, Vert Menthe ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಐಟೆಲ್ ಸ್ಟೋರ್, ಪ್ರಮುಖ ರಿಟೇಲ್ ಸ್ಟೋರ್ ಹಾಗೂ ಆನ್‌ಲೈನ್ ತಾಣಗಳಲ್ಲಿ ಖರೀದಿಗೆ ಲಭ್ಯ.
ಐಟೆಲ್ ಪ್ಯಾಡ್ 1 ಫೀಚರ್ಸ್
ಇತ್ತೀಚಿಗೆ ಐಟೆಲ್ ಭಾರತದಲ್ಲಿ ಐಟೆಲ್ ಪ್ಯಾಡ್ 1 ಅನ್ನು ಬಿಡುಗಡೆ ಮಾಡಿದೆ. ಇದು 10.1 ಇಂಚಿನ IPS LCD ಡಿಸ್‌ಪ್ಲೇ ಜೊತೆಗೆ ಹೆಚ್‌ಡಿ+ ರೆಸಲ್ಯೂಶನ್ ಹೊಂದಿದೆ. ಇದು ಆಕ್ಟಾ-ಕೋರ್ SC9863A1 ಪ್ರೊಸೆಸರ್‌ನಿಂದ ಚಾಲಿತವಾಗಿದೆ, ಇದು 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆ ಪಡೆದಿದೆ.


Click it and Unblock the Notifications








