Home
ಸುದ್ದಿಜಾಲ

ಕಡಿಮೆ ಬೆಲೆಯ ಈ ಫೋನಿಗೂ ಬಿಗ್‌ ಡಿಸ್ಕೌಂಟ್‌; ಆಫರ್‌ ಬೆಲೆ ತಿಳಿದ್ರೆ, ವಾವ್‌ ಅಂತೀರಾ!

ಸದ್ಯ ಇ ಕಾಮರ್ಸ್‌ ತಾಣಗಳು ರಿಯಾಯಿತಿ ಕೊಡುಗೆಗಳ ಮೂಲಕ ಖರೀದಿದಾರರನ್ನು ತಮ್ಮತ್ತ ಸೆಳೆಯುತ್ತಿವೆ. ಆ ಲಿಸ್ಟ್‌ನಲ್ಲಿ ಅಮೆಜಾನ್‌ ವೆಬ್‌ಸೈಟ್‌ ಸಹ ಇದ್ದು, ಇದು ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಡಿಸ್ಕೌಂಟ್‌ ಕೊಡುಗೆ ನೀಡುವ ಮೂಲಕ ಅಧಿಕ ಖರೀದಿದಾರರನ್ನು ಆಕರ್ಷಿಸುತ್ತ ಮುನ್ನಡೆದಿದೆ. ಇದೀಗ ಅಮೆಜಾನ್‌ ತಾಣದಲ್ಲಿ ಐಟೆಲ್‌ A70 (itel A70) ಮೊಬೈಲ್‌ ಬೊಂಬಾಟ್‌ ಕೊಡುಗೆಯಲ್ಲಿ ಖರೀದಿಗೆ ಲಭ್ಯ ಇದ್ದು, ಮೊಬೈಲ್‌ ಪ್ರಿಯರಿಗೆ ಸಂತಸ ನೀಡಿದೆ.

ಹೌದು, ಇ ಕಾಮರ್ಸ್‌ ದೊಡ್ಡಣ್ಣ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಐಟೆಲ್‌ A70 (itel A70) ಮೊಬೈಲ್‌ ಶೇ. 32% ರಷ್ಟು ನೇರ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ 4GB RAM + 128 GB ವೇರಿಯಂಟ್‌ 6,799ರೂ. ಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ, ಗ್ರಾಹಕರಿಗೆ ಇತರೆ ಕೆಲವು ಆಫರ್‌ ಒಳಗೊಂಡಂತೆ ಈ ಫೋನ್‌ ಅನ್ನು ಮತ್ತಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ.

ಕಡಿಮೆ ಬೆಲೆಯ ಈ ಫೋನಿಗೂ ಡಿಸ್ಕೌಂಟ್‌; ಆಫರ್‌ ಬೆಲೆ ತಿಳಿದ್ರೆ, ವಾವ್‌ ಅಂತೀರಾ!

ಐಟೆಲ್‌ A70 ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಈ ಮೊಬೈಲ್‌ ಅಜೂರ್ ಬ್ಲೂ, ಬ್ರಿಲಿಯಂಟ್ ಗೋಲ್ಡ್, ಫೀಲ್ಡ್ ಗ್ರೀನ್ ಮತ್ತು ಸ್ಟೈಲಿಶ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಲು ಅವಕಾಶ ಪಡೆದಿದೆ. ಇನ್ನುಳಿದಂತೆ ಐಟೆಲ್‌ A70 ಮೊಬೈಲ್‌ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ A70 - ಫೀಚರ್ಸ್‌ ಹೀಗಿವೆ

ಐಟೆಲ್‌ A70 ಮೊಬೈಲ್‌ 6.6 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್‌ ಸಪೋರ್ಟ್‌ ಇದ್ದು, 500 ನಿಟ್ಸ್‌ನ ಬ್ರೈಟ್‌ನೆಸ್ ಲೆವೆಲ್‌ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಡೈನಾಮಿಕ್ ಬಾರ್ ಫೀಚರ್ಸ್‌ ಲಭ್ಯ.

ಐಟೆಲ್‌ A70 ಫೋನ್‌ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದು ಆಂಡ್ರಾಯ್ಡ್‌ 13 ಗೋ ಆವೃತ್ತಿ ಆಧಾರಿತ ಐಟೆಲ್‌ ಓಎಸ್‌ 13 ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 4GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 8GB ಯಿಂದ 12GB ವರೆಗೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ.

ಐಟೆಲ್‌ A70 ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದೆ. ಅಲ್ಲದೇ ಇದರ ಎರಡನೇ ಕ್ಯಾಮೆರಾವು ಬೇಸಿಕ AI-ಬೆಂಬಲಿತ ಕ್ಯಾಮೆರಾ ಸೆನ್ಸಾರ್‌ ಅನ್ನು ಪಡೆದಿದೆ. ಇನ್ನು ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಐಟೆಲ್‌ A70 ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದ್ದು, 10W ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 4G, Wi-Fi 802.11, ಬ್ಲೂಟೂತ್ 5.0, GPS/GLONASS, ಮತ್ತು USB ಟೈಪ್-C ಹಾಗೂ ಹೆಡ್‌ಫೋನ್‌ ಜ್ಯಾಕ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಸೌಲಭ್ಯ ಸಹ ಲಭ್ಯ.

Best Mobiles in India

English summary
itel A70 available at biggest discount price tag via amazon website. check offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+