Itel: ಇಷ್ಟೊಂದು ಕಡಿಮೆ ಬೆಲೆಯಲ್ಲಿ ಲಭ್ಯವೇ ಈ ಫೋನ್? 32 GB ಸ್ಟೋರೇಜ್... 4000mAh ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಇದೀಗ ಐಟೆಲ್ (Itel) ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಪಡೆಯುವ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಅದರಂತೆ ಈಗ ಬಜೆಟ್ ಬೆಲೆಯ ಫೋನ್‌ಗೆ ಆಫರ್ ಸಹ ಇದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಐಟೆಲ್ ಔರಾ 05i ಸ್ಮಾರ್ಟ್‌ಫೋನ್ (Itel Aura 05i Smartphone) ಆಫರ್ ಬೆಲೆಯಲ್ಲಿ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 32 GB ಸ್ಟೋರೇಜ್ ಆಯ್ಕೆ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಏನು?, ಇದರ ಪ್ರಮುಖ ಫೀಚರ್ಸ್ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಟೆಲ್ ಔರಾ 05i ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 6,799 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 5,515 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 18% ರಿಯಾಯಿತಿ ಘೋಷಣೆ ಮಾಡಲಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್ ಆಪರ್ ಪಡೆಯುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಅಂದರೆ ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಎಮ್‌ಐ ವ್ಯವಹಾರದ ಮೇಲೆ ಆಫರ್ 10% ರಿಯಾಯಿತಿ ಸಿಗಲಿದೆ
ಐಟೆಲ್ ಔರಾ 05i ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಬಹುಪಾಲು ಜನರು ಬಜೆಟ್ ಬೆಲೆ ವಿಭಾಗದಲ್ಲಿಯೇ ಇನ್ನೂ ಕಡಿಮೆ ಬೆಲೆ ಹೊಂದಿರುವ ಫೋನ್‌ಗಳನ್ನು ಸರ್ಚ್ ಮಾಡುತ್ತಿರುತ್ತಾರೆ. ಅಂತವರಿಗೆ ಈ ಸ್ಮಾರ್ಟ್‌ಫೋನ್ ಉತ್ತಮ. ಅದರಂತೆ ಈ ಫೋನ್ 6.6 ಇಂಚಿನ IPS ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 60 Hz ರಿಫ್ರೆಶ್ ರೇಟ್, 120 Hz ಟಚ್ ಸ್ಯಾಂಪ್ಲಿಂಗ್ ರೇಟ್ ಆಯ್ಕೆ ಹಾಗೂ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಐಟೆಲ್ ಔರಾ 05i ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಯೂನಿಸೋಕ್ SC9863A ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 2 GB RAM + 2 GB ವರ್ಚುವಲ್ RAM ಹಾಗೂ 32 GB ಸ್ಟೋರೇಜ್ ಇಂಟರ್ ಸ್ಟೋರೇಜ್ ಮೂಲಕ ಈ ಬೆಲೆಗೆ ತಕ್ಕ ಸೌಲಭ್ಯ ಪಡೆದಿದೆ. ಅಷ್ಟೇ ಅಲ್ಲದೆ ಡೆಡಿಕೇಟೆಡ್ ಮೆಮೊರಿ ಕಾರ್ಡ್ ಸ್ಲಾಟ್ ಸಹ ಇದ್ದು, 1 TB ವರೆಗೆ ಸ್ಟೋರೇಜ್ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.
ಐಟೆಲ್ ಔರಾ 05i ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಸಿಂಗಲ್ ರಿಯರ್ ಹಾಗೂ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಅಂದರೆ ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದ್ದು ಇದು 720p HD ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಮಾಡಲು ಅನುಮತಿಸುತ್ತದೆ. ಜೊತೆಗೆ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದೆ.
ಐಟೆಲ್ ಔರಾ 05i ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 4000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಉಳಿದಂತೆ 4G, VoLTE, ಬ್ಲೂಟೂತ್, ವೈ-ಫೈ, ಯುಎಸ್‌ಬಿ ಟೈಪ್ - ಸಿ, ಆಂಡ್ರಾಯ್ಡ್ v13 ಜೊತೆಗೆ ರಿಯರ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆದಿದೆ. ಈ ಮೂಲಕ ಬಜೆಟ್ ಬೆಲೆಯಲ್ಲಿ ಈ ಫೋನ್ ಉತ್ತಮ ಅನುಭವ ನೀಡಲಿದೆ.

ಈ ಫೋನ್ ಅನ್ನು ಸಾಮಾನ್ಯ ಬಳಕೆಗೆ ಮಾತ್ರ ಸೀಮಿತಗೊಳಿಸಿಕೊಳ್ಳಬಹುದಾಗಿದೆ, ಅದಾಗ್ಯೂ ಸ್ಟೋರೇಜ್ ವಿಚಾರದಲ್ಲಿ 1TB ವರೆಗೂ ವಿಸ್ತರಣೆಗೆ ಅವಕಾಶ ನೀಡಲಿದ್ದು, ಈ ಮೂಲಕ ಇದು ಈ ಬೆಲೆಯಲ್ಲಿ ಉತ್ತಮ ಎಂದೇ ಹೇಳಬಹುದು. ಅಲ್ಲದೆ ಯಾರೆಲ್ಲಾ ಕಡಿಮೆ ದರದಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿ ಮಾಡಲು ಮುಂದಾಗುವಿರೋ ಅವರು ಈ ಹೊಸ ಫೋನ್ ಅನ್ನೇ ಖರೀದಿ ಮಾಡಿದ್ರೆ ಉತ್ತಮ ಎನಿಸುತ್ತದೆ. ಅದಾಗ್ಯೂ ಐಟೆಲ್ ಹೊಸದಾಗಿ ಇದೇ ರೀತಿಯ ಬೆಲೆಯಲ್ಲಿ ಉತ್ತಮ ಫೀಚರ್ಸ್‌ನೊಂದಿಗೆ ಕೆಲವು ಫೋನ್‌ಗಳನ್ನು ಲಾಂಚ್ ಮಾಡಿದ್ದು, ಅವುಗಳ ಕಡೆಗೂ ಕಣ್ಣಾಯಿಸಬಹುದು.


Click it and Unblock the Notifications








