Home
ಸುದ್ದಿಜಾಲ

ಅಬ್ಬಬ್ಬಾ..ಜಸ್ಟ್‌ 2,499ರೂ.ಗೆ ಫ್ಲಿಪ್‌ ಫೋನ್‌ ಲಾಂಚ್‌!..ಗ್ಲಾಸ್ ಫಿನಿಶ್‌ ಕೀ ಪ್ಯಾಡ್‌ ಇದೆ!

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳ ಭರಾಟೆಯ ನಡುವೆ ಇಂದಿಗೂ ಕೀಪ್ಯಾಡ್ ಮೊಬೈಲ್‌ಗಳು ತಮ್ಮ ಜನಪ್ರಿಯತೆ ಉಳಿಸಿಕೊಂಡಿವೆ ಎಂಬುದು ಅಚ್ಚರಿಯ ಸಂಗತಿಯೇ ಸರಿ. ಈ ನಿಟ್ಟಿನಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ಬಳಕೆದಾರರ ಅಗತ್ಯಗಳಿಗೆ ಅನುಸಾರವಾಗಿ ಕೀಪ್ಯಾಡ್ ಮೊಬೈಲ್‌ಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಸದ್ಯ ಐಟೆಲ್‌ ಸಂಸ್ಥೆಯು ಹೊಸದೊಂದು ಫೀಚರ್‌ ಫೋನ್‌ ಲಾಂಚ್ ಮಾಡಿದ್ದು, ಅದುವೇ ಐಟೆಲ್‌ ಫ್ಲಿಪ್‌ 1 (itel Flip 1) ಆಗಿದೆ.

ಹೌದು, ಐಟೆಲ್‌ ಸಂಸ್ಥೆಯು ಹೊಸದಾಗಿ ಐಟೆಲ್ ಫ್ಲಿಪ್‌ 1 (itel Flip 1) ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ ಫ್ಲಿಪ್‌ ಮಾದರಿಯ ರಚನೆ ಅನ್ನು ಪಡೆದಿರುವುದು ವಿಶೇಷ, ಹಾಗೆಯೇ ಗ್ಲಾಸ್ ಫಿನಿಶ್‌ ಕೀ ಪ್ಯಾಡ್‌ ಹಾಗೂ ಲೆದರ್‌ ಬ್ಯಾಕ್‌ ವಿನ್ಯಾಸವನ್ನು ಹೊಂದಿದೆ. ಇದರ ಜೊತೆಗೆ ಬಿಗ್‌ ಬ್ಯಾಟರ್‌ ಸೌಲಭ್ಯ ಒಳಗೊಂಡಿದ್ದು, ಮತ್ತೊಂದು ಪ್ರಮುಖ ಹೈಲೈಟ್‌ ಆಗಿದೆ.

ಅಬ್ಬಬ್ಬಾ..2,499ರೂ.ಗೆ ಫ್ಲಿಪ್‌ ಫೋನ್‌ ಲಾಂಚ್‌!..ಗ್ಲಾಸ್ ಫಿನಿಶ್‌ ಕೀ ಪ್ಯಾಡ್‌!

ಐಟೆಲ್‌ ಸಂಸ್ಥೆಯ ಈ ನೂತನ ಮೊಬೈಲ್‌ ಆರೆಂಜ್‌, ಲೈಟ್‌ ಬ್ಲೂ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಇದು 13 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ ಜೊತೆಗೆ ಕ್ಯಾಮೆರಾ ಹಾಗೂ ಎಫ್‌ಎಮ್‌ ರೇಡಿಯೋ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೇ ಐಟೆಲ್ ಫ್ಲಿಪ್‌ 1 (itel Flip 1) ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ ಫ್ಲಿಪ್‌ 1 ಫೋನ್‌ ಫೀಚರ್ಸ್‌

ಐಟೆಲ್ ಫ್ಲಿಪ್‌ 1 (itel Flip 1) ಫೋನ್‌ 2.4 ಇಂಚಿನ OVGA ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, ಗಾಜಿನ ಕೀಪ್ಯಾಡ್ ವಿನ್ಯಾಸ ಹೊಂದಿದೆ. ಹಾಗೆಯೇ ಇದು ಫ್ಲಿಪ್ ವಿನ್ಯಾಸ ಹಾಗೂ ಟೆಕ್ಸ್ಚರ್ಡ್ ಲೆದರ್ ಬ್ಯಾಕ್ ಲುಕ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೀಚರ್‌ ಮೊಬೈಲ್‌ ಬ್ಲೂಟೂತ್ ಕರೆ ಅನ್ನು ಕೂಡಾ ಸಪೋರ್ಟ್‌ ಮಾಡುತ್ತದೆ.

ಐಟೆಲ್ ಫ್ಲಿಪ್‌ 1 ಫೋನ್‌ VGA ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಜೊತೆಗೆ FM ರೇಡಿಯೋ ಹಾಗೂ ಡ್ಯುಯಲ್ ಸಿಮ್ ಬೆಂಬಲ ಕೂಡಾ ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ 1200mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಟೈಪ್-ಸಿ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ, ಸುಮಾರು 7 ದಿನಗಳ ಬ್ಯಾಟರಿ ಬಾಳಿಕೆ ಬರುತ್ತದೆ ಎನ್ನಲಾಗಿದೆ.

ಅಲ್ಲದೇ ಈ ನೂತನ ಫೋನ್‌ 13 ಭಾರತೀಯ ಭಾಷೆಗಳಿಗೆ ಬೆಂಬಲ ಪಡೆದಿದ್ದು, ಜೊತೆಗೆ ಕಿಂಗ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಈ ಫೋನ್ ಬ್ಲೂಟೂತ್ ಕರೆಯನ್ನು ಸಪೋರ್ಟ್ ಮಾಡುತ್ತದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸಂಪರ್ಕಗಳನ್ನು ಸಿಂಕ್ ಮಾಡುವ ಮೂಲಕ ಸಾಧನದಿಂದ ನೇರವಾಗಿ ಕರೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಐಟೆಲ್ ಫ್ಲಿಪ್‌ 1 ಫೋನ್‌ ಹಗುರವಾದ ಮತ್ತು ಪೋರ್ಟಬಲ್ ಆಗಿದ್ದು, ಒಂದು ಕೈಯಿಂದ ಸುಲಭವಾಗಿ ಬಳಕೆ ಮಾಡಲು ವಿನ್ಯಾಸ ಮಾಡಲಾಗಿದೆ. ಇನ್ನು ಇದರ ಟೆಕ್ಸ್ಚರ್ಡ್ ಲೆದರ್ ಫಿನಿಶ್ ಫೋನಿನ ಸೊಬಗನ್ನು ಹೆಚ್ಚಿಸಿದೆ.

ಬೆಲೆ ಹಾಗೂ ಲಭ್ಯತೆಯ ಮಾಹಿತಿ

ಐಟೆಲ್ ಫ್ಲಿಪ್‌ 1 ಫೋನ್‌ (itel Flip 1) 2,499ರೂ. ಗಳ ಪ್ರೈಸ್‌ ಟ್ಯಾಗ್‌ ಅನ್ನು ಪಡೆದುಕೊಂಡಿದೆ. ಇನ್ನು ಗ್ರಾಹಕರು ಈ ಫೋನ್‌ ಅನ್ನು ಆರೆಂಜ್‌, ಲೈಟ್‌ ಬ್ಲೂ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಇಂದಿನಿಂದ ಭಾರತದಾದ್ಯಂತ ರೀಟೇಲ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯ ಇರಲಿದೆ. ಹಾಗೆಯೇ ಈ ಮೊಬೈಲ್‌ 1 ವರ್ಷದ ವಾರಂಟಿಯೊಂದಿಗೆ ಬರುತ್ತದೆ.

Best Mobiles in India

English summary
itel Flip 1 Feature Phone launched in India for Rs. 2499. Check Specifications, color and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+