ಐಟೆಲ್ ಐಕಾನ್ 2 ಫಸ್ಟ್ ಲುಕ್: ಅಗ್ಗದ ಬೆಲೆಗೆ ಬೊಂಬಾಟ್ ಸ್ಮಾರ್ಟ್‌ವಾಚ್!
ಅಗ್ಗದ ಸ್ಮಾರ್ಟ್ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವ ಐಟೆಲ್ ಕಂಪನಿಯು ಹೊಸದಾಗಿ ಐಟೆಲ್ ಐಕಾನ್ 2 (Itel Icon 2) ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್ ವಾಚ್ ಕೆಲವೊಂದು ಅಪ್‌ಡೇಟ್ ಫೀಚರ್ಸ್‌ಗಳನ್ನು ಪಡೆದಿದ್ದು, ಡಿಸೈನ್ ಹಾಗೂ ಬೆಲೆಯಿಂದಲೂ ಗ್ರಾಹಕರನ್ನು ಆಕರ್ಷಿಸಿದೆ.
ಐಟೆಲ್ ಐಕಾನ್ 2 ಡಿವೈಸ್ ಬಿಗ್ ಬ್ಯಾಟರಿ ಸೌಲಭ್ಯ ಪಡೆದಿದ್ದು, ಸುಮಾರು 30 ದಿನಗಳ ಸ್ಟ್ಯಾಂಡ್‌ಬೈ ಬ್ಯಾಕ್‌ಅಪ್ ಒದಗಿಸಲಿದೆ. ಹಾಗೆಯೇ ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದಿರುವುದರಿಂದ ಮಳೆ ನೀರು ಹಾಗೂ ಬೆವರಿನ ಹನಿಯಿಂದ ಸಮಸ್ಯೆ ಇರದು. ಇನ್ನು ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್‌ನ ಕಾರ್ಯ ವೈಖರಿ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸೈನ್ ಮತ್ತು ರಚನೆ ಹೇಗಿದೆ
ಐಟೆಲ್ ಐಕಾನ್ 2 ವಾಚ್ ಚೌಕಾಕಾರದ ರಚನೆ ಪಡೆದಿದ್ದು, ಇದರ ನಾಲ್ಕು ಮೂಲೆಗಳು ಕರ್ವ್ ರಚನೆಯಲ್ಲಿ ಇವೆ. ಹಾಗೆಯೇ ದೀರ್ಘಾವಧಿಯ ಬ್ಯಾಟರಿ ವ್ಯವಸ್ಥೆಯನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸುತ್ತದೆ. ಡಿಸ್‌ಪ್ಲೇ ರಚನೆ ಉತ್ತಮವಾಗಿದ್ದು, ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಪಷ್ಟ ಕಾಣುವಿಕೆಯನ್ನು ಖಾತ್ರಿಗೊಳಿಸುತ್ತದೆ.

ಕರ್ವ್ ಮಾದರಿ ಡಿಸ್‌ಪ್ಲೇ
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ 1.83 ಇಂಚಿನ HD ಕರ್ವ್ ಮಾದರಿಯ ಟಚ್ ಸ್ಕ್ರೀನ್ ಡಿಸ್‌ಪ್ಲೇ ಪಡೆದಿದೆ. ಈ ಡಿಸ್‌ಪ್ಲೇಯು 240 x 240 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಹಾಗೆಯೇ 500nit ಬ್ರೈಟ್ನೆಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ತನ್ನ ವರ್ಗದಲ್ಲೇ ಇದರ ಟಚ್ ಸ್ಕ್ರೀನ್ ಬಳಸಲು ಸುಗಮವಾಗಿದ್ದು, ಜೊತೆಗೆ ಇದರ ಹೊರಾಂಗಣದಲ್ಲಿಯೂ ಉತ್ತಮ ಡಿಸ್‌ಪ್ಲೇ ಸಪೋರ್ಟ್ ಸಿಗಲಿದೆ.

100ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ ನಲ್ಲಿ ಪ್ರೀ ಇನ್‌ಸ್ಟಾಲ್ ಇರುವ 100ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್ ಆಯ್ಕೆ ಕೂಡಾ ಕಾಣಬಹುದಾಗಿದೆ. ಹಾಗೆಯೇ ಐಕಾನ್ 2 ವಾಚ್ ಹೃದಯ ಬಡಿತ, SpO2 ಮಾನಿಟರ್ ಮತ್ತು ಸ್ಲಿಪ್ ಸೈಕಲ್ ಮೇಲ್ವಿಚಾರಣೆ ಮಾಡುವ ಸೌಲಭ್ಯಗಳನ್ನು ಪಡೆದಿದೆ. ಇಂತಹ ಕೆಲವು ಫೀಚರ್ಸ್‌ಗಳ ಮೂಲಕ ತನ್ನ ಪ್ರತಿ ಸ್ಪರ್ಧಿಗಳಿಗೆ ಪೈಫೋಟಿ ನೀಡುವ ಸೂಚನೆ ನೀಡಿದೆ.
ದೀರ್ಘ ಬ್ಯಾಟರಿ ಸೌಲಭ್ಯ
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ ಡಿವೈಸ್ 250mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಚಾವ್ 30 ದಿನಗಳ ಸ್ಟ್ಯಾಂಡ್ ಬೈ ಅವಧಿಯನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್ ವಾಚ್ ಬ್ಲೂಟೂತ್ v5.3 ಸಪೋರ್ಟ್ ಪಡೆದಿದ್ದು, ತಡೆರಹಿತ ಕನೆಕ್ಟಿವಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ 150 ಕ್ಕೂ ಹೆಚ್ಚು ವಾಚ್ ಫೇಸ್ ಆಯ್ಕೆಗಳ ಲಿಸ್ಟ್ ಸಹ ಕಾಣಬಹುದಾಗಿದೆ.
ಕೊನೆಯ ಮಾತು
ಒಟ್ಟಾರೆಯಾಗಿ, ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ ಸಂಸ್ಥೆಯ ಈ ಮೊದಲಿನ ವಾಚ್‌ಗಿಂತ ಅಪ್‌ಡೇಟ್ ಕಂಡಿದ್ದು, ಅದರ ಅಪ್‌ಡೇಟ್ ಆವೃತ್ತಿಯಾಗಿ ಕಾಣಿಸಿಕೊಂಡಿದೆ. ಈ ವಾಚ್ ಕರ್ವ್ ಡಿಸ್‌ಪ್ಲೇ, ಆಕರ್ಷಕ ಡಿಸೈನ್ ಹಾಗೂ ಫಿಟ್‌ನೆಸ್ ಆಯ್ಕೆಗಳಿಂದಲೂ ಗಮನ ಸೆಳೆಯುತ್ತದೆ. ಮುಖ್ಯವಾಗಿ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಹೈಲೈಟ್ ಎನಿಸಿದೆ. ಗ್ರಾಹಕಸ್ನೇಹಿ ಬೆಲೆಗೆ ಈ ವಾಚ್ ಖರೀದಿಗೆ ಸೂಕ್ತ ಎನ್ನಬಹುದಾಗಿದೆ.
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ ಬೆಲೆ 1,099ರೂ. ಆಗಿದೆ. ಇನ್ನು ವಾಚ್ ಬ್ಲ್ಯಾಕ್, ಬ್ಲೂ ಹಾಗೂ ರೋಸ್ ಗೋಲ್ಡ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಗ್ರಾಹಕರು ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಖರೀದಿಸಬಹುದು.


Click it and Unblock the Notifications








