ಕಡಿಮೆ ಬೆಲೆಗೆ ಲಾಂಚ್ ಆಯ್ತು ಐಟೆಲ್ ಐಕಾನ್ 3 ಸ್ಮಾರ್ಟ್‌ವಾಚ್!..ಕರ್ವ್ ಡಿಸ್‌ಪ್ಲೇ ಇದೆ!
ಅಗ್ಗದ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಟೆಲ್ (itel) ಸಂಸ್ಥೆಯು ಇಂದು ಭಾರತದಲ್ಲಿ ಹೊಸದಾಗಿ ಐಕಾನ್ 3 ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ವಾಚ್ ಈ ಹಿಂದಿನ ಐಕಾನ್ 2 ವಾಚ್‌ನ ಮುಂದಿನ ಆವೃತ್ತಿಯಾಗಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ.
ಹೌದು, ಐಟೆಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಐಕಾನ್ 3 (Icon 3) ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿದೆ. ಈ ವಾಚ್ ದೊಡ್ಡ ಸ್ಕ್ರೀನ್ ಪಡೆದಿದ್ದು, ಇದರ ಡಿಸ್‌ಪ್ಲೇಯು AMOLED ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್ ಆಗಿದೆ. ಅಲ್ಲದೇ ಇದು ಡಾರ್ಕ್ ಕ್ರೋಮ್, ಮಿಡ್ನೈಟ್ ಬ್ಲೂ ಮತ್ತು ಶೈನಿ ಗೋಲ್ಡ್ ಕಲರ್ ಆಯ್ಕೆಗಳನ್ನು ಕೂಡಾ ಪಡೆದಿದೆ.

ಇನ್ನು ಈ ಸ್ಮಾರ್ಟ್‌ವಾಚ್ ಬೆಲೆಯು 1,699ರೂ. ಗಳು ಆಗಿದ್ದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತದೆ. ಹಾಗೆಯೇ ಈ ವಾಚ್ ಆಲ್ವೇಸ್ ಆನ್ ಡಿಸ್‌ಪ್ಲೇ ಮಾದರಿಯನ್ನು ಪಡೆದಿರುವುದು ಇನ್ನೊಂದು ವಿಶೇಷ ಆಗಿದೆ. ಹಾಗಾದರೇ ಐಕಾನ್ 3 ಸ್ಮಾರ್ಟ್‌ವಾಚ್ ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕಾನ್ 3 ಸ್ಮಾರ್ಟ್‌ವಾಚ್ ಫೀಚರ್ಸ್
ಐಟೆಲ್ ಸಂಸ್ಥೆಯ ಈ ವಾಚ್ ಪ್ರಿಮಿಯಂ ಜಿಂಕ್ ಅಲೋಯ್ ಫ್ರೆಮ್‌ನ ರಚನೆ ಪಡೆದಿದ್ದು, ಡ್ಯುಯಲ್ ಸೈಡ್ ಕೀ ಸೌಲಭ್ಯ ಪಡೆದಿದೆ. ಇದು 2.01 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, 500 ನಿಟ್ಸ್ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಹಾಗೆಯೇ ಇದು 2.5D ಕರ್ವ್ ಗ್ಲಾಸ್‌ನ ಲುಕ್ ಪಡೆದಿದೆ. ಆಲ್ವೇಸ್ ಆನ್ ಡಿಸ್‌ಪ್ಲೇ ಇದ್ದು, ಸೂರ್ಯನ ಬೆಳಕಿನಲ್ಲಿ ಅತ್ಯುತ್ತಮವಾಗಿ ಕಾಣಿಸಲಿದೆ.
ಇನ್ನು ಈ ಸ್ಮಾರ್ಟ್ ವಾಚ್ 24 ಗಂಟೆಗಳ ಆರೋಗ್ಯ ಮೇಲ್ವಿಚಾರಣೆ ಸೌಲಭ್ಯ ಪಡೆದುಕೊಂಡಿದ್ದು, ಸುಲಭವಾದ ನ್ಯಾವಿಗೇಷನ್‌ಗಾಗಿ ಫಂಗಕ್ಷನಲ್ ಕ್ರೌನ್ ಆಯ್ಕೆ ಅನ್ನು ಇದು ಹೊಂದಿದೆ. ಹಾಗೆಯೇ 150 ಕ್ಕೂ ಅಧಿಕ ಫೇಸ್ ವಾಚ್ ಆಯ್ಕೆ ಪಡೆದಿದ್ದು, ಹಾಗೆಯೇ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.
ಅಲ್ಲದೇ ಈ ಐಟೆಲ್ ಐಕಾನ್ 3 ಸ್ಮಾರ್ಟ್ ವಾಚ್ 310mAh ಬ್ಯಾಟರಿ ಬ್ಯಾಕ್‌ಅಪ್ ಸೌಲಬ್ಯ ಸಹ ಪಡೆದುಕೊಂಡಿದೆ. ಇದರ ಬ್ಯಾಟರಿಯು 15 ದಿನಗಳವರೆಗೆ ಸ್ಟ್ಯಾಂಡ್‌ಬೈ ಪಡೆದಿದ್ದು, ಬ್ಲೂಟೂತ್ ಕಾಲಿಂಗ್ ನೊಂದಿಗೆ 2 ದಿನಗಳವರೆಗೆ ಬ್ಯಾಕ್‌ಅಪ್ ನೀಡುತ್ತದೆ ಎಂದು ಸಂಸ್ಥೆಯು ಹೇಳಿದೆ. ಇನ್ನು ಈ ಐಕಾನ್ 3 ವಾಚ್ 47.2 X 37.7 X 11.86mm ಸುತ್ತಳತೆಯನ್ನು ಪಡೆದಿದ್ದು, 52 ಗ್ರಾಂ ತೂಕವನ್ನು ಹೊಂದಿದೆ.
ಹೆಲ್ತ್ ಟ್ರ್ಯಾಕ್‌ಗೆ ಸಂಬಂಧಿಸ ಆಯ್ಕೆಗಳನ್ನು ಸಹ ಒಳಗೊಂಡಿರುವ ಈ ವಾಟ್ ಹೃದಯ ಬಡಿತ ಸೆನ್ಸಾರ್, ರಕ್ತದ ಆಮ್ಲಜನಕದ ಮಟ್ಟದ ಟ್ರ್ಯಾಕಿಂಗ್ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕರ್ ಸೌಲಭ್ಯಗಳನ್ನು ಕೂಡಾ ಒಳಗೊಂಡಿದೆ. ಇದರೊಂದಿಗೆ ಈ ವಾಚ್ 100+ ಸ್ಪೋರ್ಟ್ಸ್ ಮೋಡ್ ಆಯ್ಕೆಗಳಿಗೆ ಸಪೋರ್ಟ್ ಪಡೆದುಕೊಂಡಿದೆ. ಇದು ಬ್ಲೂಟೂತ್ 5.1 ಕನೆಕ್ಟಿವಿಟಿ ಹೊಂದಿದೆ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್‌ಗೆ ಹೊಂದಿಕೆಯಾಗಬೇಕು.
ಬೆಲೆ ಎಷ್ಟು, ಕಲರ್ ಆಯ್ಕೆ ಮಾಹಿತಿ
ಭಾರತದಲ್ಲಿ ಐಟೆಲ್ ಐಕಾನ್ 3 ಬೆಲೆ 1,699ರೂ ಆಗಿದ್ದು, ಮಾರ್ಚ್ 24 ರಿಂದ ಮಾರ್ಚ್ 29 ರವರೆಗೆ ಅಮೆಜಾನ್ ತಾಣದಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯ ಇರುತ್ತದೆ. ಪ್ರಿ ಬುಕಿಂಗ್ ಮಾಡುವ ಮೊದಲ 500 ಖರೀದಿದಾರರಿಗೆ 100ರೂ.ಗಳ ಸ್ಪೆಷಲ್ ರಿಯಾಯಿತಿ ಸಿಗಲಿದೆ ಎನ್ನಲಾಗಿದೆ. ಹಾಗೆಯೇ ಮಾರ್ಚ್ 24 ರಿಂದ ರಿಟೇಲ್ ಸ್ಟೋರ್‌ಗಳಲ್ಲಿಯೂ ಖರೀದಿಗೆ ಲಭ್ಯ ಆಗಲಿದೆ.


Click it and Unblock the Notifications








