ಅಗ್ಗದ ದರದಲ್ಲಿ ಫಾಸ್ಟ್ ಚಾರ್ಜರ್ ಲಾಂಚ್!..ಲ್ಯಾಪ್‌ಟಾಪ್ ಸಹ ಚಾರ್ಜ್ ಮಾಡಬಹುದು!
ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಸ್ಮಾರ್ಟ್‌ಫೋನ್ ಹಾಗೂ ಇತರೆ ಸ್ಮಾರ್ಟ್ ಡಿವೈಸ್ ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಟೆಲ್ (itel) ಇದೀಗ ಭಾರತದಲ್ಲಿ ಹೊಸದೊಂದು ಉತ್ಪನ್ನವನ್ನು ಲಾಂಚ್ ಮಾಡಿದೆ. ಐಟೆಲ್ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಉತ್ಪನ್ನ ಅದುವೇ VOLTX 65W GaN ಫಾಸ್ಟ್ ಚಾರ್ಜರ್ ಆಗಿದೆ.
ಹೌದು, ಐಟೆಲ್ ಸಂಸ್ಥೆಯು ಹೊಸದಾಗಿ ದೇಶಿಯ ಮಾರುಕಟ್ಟೆಯಲ್ಲಿ VOLTX 65W GaN ಫಾಸ್ಟ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದೆ. ಇನ್ನು ನೂತನವಾಗಿ ಘೋಷಿಸಲಾದ ಈ ವೇಗದ ಚಾರ್ಜರ್ ಸಂಸ್ಥೆಯ ಮೊದಲ ಅಧಿಕ ವ್ಯಾಟೇಜ್ ಫಾಸ್ಟ್ ಚಾರ್ಜರ್ ಆಗಿದೆ. ಈ ಚಾರ್ಜರ್ ಯುಎಸ್‌ಬಿ ಟೈಪ್-ಎ ಪೋರ್ಟ್ ಸೇರಿ ಮೂರು ಪೋರ್ಟ್ ಆಯ್ಕೆ ಒಳಗೊಂಡಿದೆ.

ಐಟೆಲ್ ಸಂಸ್ಥೆಯು ಬಿಡುಗಡೆ ಮಾಡಿರುವ ಹೈ-ವ್ಯಾಟೇಜ್ ಫಾಸ್ಟ್ ಚಾರ್ಜರ್‌ನ ಬೆಲೆ 1,699 ರೂ ಆಗಿದ್ದು, ಈ ಫಾಸ್ಟ್ ಚಾರ್ಜರ್ ಸಾಧನವು ಸದ್ಯದಲ್ಲೇ ಆಫ್‌ಲೈನ್ ತಾಣಗಳ ಮೂಲಕ ಖರೀದಿಗೆ ಲಭ್ಯ ಆಗಲಿದೆ. ಅಂದಹಾಗೆ ಈ ಫಾಸ್ಟ್ ಚಾರ್ಜರ್ ವೈಟ್ ಕಲರ್ ಆಯ್ಕೆಯಲ್ಲಿ ಲಭ್ಯ ಆಗಲಿದೆ. ಹಾಗಾದರೆ ಈ ಚಾರ್ಜರ್‌ನ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಐಟೆಲ್ VOLTX 65W GaN ಫಾಸ್ಟ್ ಚಾರ್ಜರ್ ಫೀಚರ್ಸ್
ಐಟೆಲ್ ಸಂಸ್ಥೆಯ ಈ ನೂತನ ಫಾಸ್ಟ್ ಚಾರ್ಜರ್ ಲ್ಯಾಪ್‌ಟಾಪ್‌ಗಳಿಗೆ, ಸ್ಮಾರ್ಟ್‌ಫೋನ್‌ಗಳಿಗೆ ಹಾಗೂ ಸ್ಮಾರ್ಟ್ ಗ್ಯಾಜೆಟ್‌ಗಳಿಗೂ ಚಾರ್ಜ್ ಮಾಡಬಹುದಾಗಿದೆ ಎಂದು ಸಂಸ್ಥೆಯು ಬಹಿರಂಗಪಡಿಸಿದೆ. ಹಾಗೆಯೇ 65W ನ ಈ ಚಾರ್ಜರ್ ತಡೆರಹಿತ ಚಾರ್ಜಿಂಗ್ ಸೌಲಭ್ಯ ಒದಗಿಸುತ್ತದೆ ಅಲ್ಲದೇ ಡಿವೈಸ್‌ಗಳಿಗೆ ಪರಿಣಾಮಕಾರಿಯಾಗಿ, ತ್ವರಿತವಾಗಿ ಚಾರ್ಜ್ ಮಾಡಲು ಪೂರಕವಾಗಿದೆ.
ಇನ್ನು ಈ ಚಾರ್ಜರ್ ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳ ಆಯ್ಕೆ ಪಡೆದುಕೊಂಡಿದೆ. ಅವುಗಳಲ್ಲಿ ಸಾಮಾನ್ಯ ಯುಎಸ್‌ಬಿ ಟೈಪ್-ಎ ಪೋರ್ಟ್ ಒಳಗೊಂಡಂತೆ ಇತರೆ ಮೂರು ಪೋರ್ಟ್‌ಗಳ ಆಯ್ಕೆ ಅನ್ನು ಇದು ಹೊಂದಿದೆ.
ಅದೇ ರೀತಿ ಇದರ ದ್ವಿತೀಯ ಯುಎಸ್‌ಬಿ ಟೈಪ್ - ಸಿ (USB type C) ಪೋರ್ಟ್ ಮೂಲಕ ಬಳಕೆದಾರರು ಲ್ಯಾಪ್‌ಟಾಪ್ ಗಳನ್ನು ಚಾರ್ಜ್ ಮಾಡಬಹುದಾಗಿದೆ. ಈ ಚಾರ್ಜರ್ 65W ವೇಗದ ಚಾರ್ಜಿಂಗ್ ತಂತ್ರಜ್ಞಾನವು ಚಾರ್ಜಿಂಗ್‌ಗೆ ನೆರವಾಗಲಿದೆ. ವೇಗದ ಚಾರ್ಜರ್ ಓವರ್ ವೋಲ್ಟೇಜ್ ನಂತಹ ಸಂದರ್ಭಗಳಲ್ಲಿ ರಕ್ಷಣೆಯನ್ನು ಬೆಂಬಲಿಸುತ್ತದೆ ಹಾಗೂ ಯಾವುದೇ ಪರಿಸ್ಥಿತಿಯಲ್ಲಿ ಬಳಸಲು ಸುರಕ್ಷಿತವಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.
ಬೆಲೆ ಹಾಗೂ ಲಭ್ಯತೆ
ಭಾರತೀಯ ಮಾರುಕಟ್ಟೆಯಲ್ಲಿ ಐಟೆಲ್ VOLTX 65W GaN ಫಾಸ್ಟ್ ಚಾರ್ಜರ್ 1,699 ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫಾಸ್ಟ್ ಚಾರ್ಜರ್ ಸಾಧನವು ವೈಟ್ ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯ ಇರಲಿದ್ದು, ಇನ್ನು ಕೆಲವು ದಿನಗಳಲ್ಲಿ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟ ಸಹ ಪ್ರಾರಂಭ ಮಾಡಲಿದೆ.
ಇನ್ನು ಐಟೆಲ್ ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ ಐಟೆಲ್ P55 ಸರಣಿಯಲ್ಲಿ ಸ್ಮಾರ್ಟ್‌ಫೋನ್ ಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ಐಟೆಲ್ ಕಂಪನಿಯು ತನ್ನ ಐಕಾನ್ ಸರಣಿಯಲ್ಲಿ ಎರಡು ಸ್ಮಾರ್ಟ್‌ವಾಚ್‌ಗಳನ್ನು ಸಹ ಇತ್ತೀಚಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳು ಕ್ರಮವಾಗಿ ಐಟೆಲ್ ಐಕಾನ್ 2 ಹಾಗೂ ಐಟೆಲ್ ಐಕಾನ್ 3 ಸ್ಮಾರ್ಟ್‌ವಾಚ್ ಆಗಿವೆ. ಇದಲ್ಲದೇ ಐಟೆಲ್ ಪವರ್ ಬ್ಯಾಂಕ್ ಸಾಧನಗಳ ಆಯ್ಕೆ ಸಹ ಒಳಗೊಂಡಿದ್ದು, ಇದರ ಜೊತೆಗೆ ಆಡಿಯೋ ವಿಭಾಗದಲ್ಲಿ ಕೆಲವು ಇಯರ್‌ಬಡ್ಸ್, ಸ್ಪೀಕರ್ಸ್‌ಗಳ ಆಯ್ಕೆ ಒಳಗೊಂಡಿದೆ.


Click it and Unblock the Notifications








