Home
ಸುದ್ದಿಜಾಲ

ಈ ಸ್ವದೇಶಿ ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!..ಈಗ 5,999ರೂ. ಲಭ್ಯ!

ಸ್ವದೇಶಿ ಐಟೆಲ್‌ ಮೊಬೈಲ್‌ ಬ್ರ್ಯಾಂಡ್‌ ಕೆಲವು ಆಂಡ್ರಾಯ್ಡ್‌ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳ ಫೋನ್‌ಗಳಿಗೆ ಪೈಪೋಟಿ ನೀಡುತ್ತ ಸಾಗಿದೆ. ಇತ್ತೀಚೆಗೆ ಐಟೆಲ್‌ ಬಿಡುಗಡೆ ಮಾಡಿರುವ ಐಟೆಲ್‌ P40 (itel P40) ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಮಾದರಿಯಲ್ಲಿ ಗಮನ ಸೆಳೆದಿದ್ದು, ಇದೀಗ ಆನ್‌ಲೈನ್‌ನಲ್ಲಿ ಸಖತ್‌ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಅಮೆಜಾನ್‌ ಆಯೋಜಿಸಿರುವ ಅಮೆಜಾನ್ ಪ್ರೈಮ್‌ ಡೇಸ್‌ ಸೇಲ್‌ ನಲ್ಲಿ ಐಟೆಲ್‌ ಸಂಸ್ಥೆಯು ಐಟೆಲ್‌ P40 (itel P40) ಸ್ಮಾರ್ಟ್‌ಫೋನ್‌ ಶೇ. 25% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 2GB RAM + 64GB ಸ್ಟೋರಜ್‌ ಬೆಲೆ 7,999ರೂ. ಇದ್ದು, ಕೊಡುಗೆಯಲ್ಲಿ 5,999ರೂ. ದರದಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು ಬ್ಯಾಂಕ್‌ ಆಫರ್‌ ಮೂಲಕ ಮತ್ತಷ್ಟು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ.

ಈ ಸ್ವದೇಶಿ ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!..ಈಗ 5,999ರೂ. ಲಭ್ಯ!

ಅಂದಹಾಗೆ ಈ ಫೋನ್‌ ಆಕ್ಟೋ ಕೋರ್ SC9863A ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸಲ್‌ ಆಗಿದ್ದು, 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ ಬ್ಲ್ಯಾಕ್‌, ಬ್ಲೂ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಐಟೆಲ್ P40 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ P40 ಡಿಸ್‌ಪ್ಲೇ ವಿನ್ಯಾಸದ ಮಾಹಿತಿ ವಿವರ : ಐಟೆಲ್‌ P40 ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ + ಐಪಿಎಸ್‌ ವಾಟರ್‌ಡ್ರಾಪ್ ಮಾದರಿಯ ಡಿಸ್‌ಪ್ಲೇ ಅನ್ನು ಪಡೆದಿದ್ದು ಇದು, 1612 X 720 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಅನ್ನು ಒಳಗೊಂಡಿದೆ. ಹಾಗೆಯೇ ಇದು 120 Hz ಟಚ್ ಸ್ಯಾಂಪ್ಲಿಂಗ್ ರಿಫ್ರೆಶ್‌ ರೇಟ್‌ ಪಡೆದಿದೆ.

ಐಟೆಲ್‌ P40 ಪ್ರೊಸೆಸರ್‌ ಕಾರ್ಯವೈಖರಿಯ ಮಾಹಿತಿ ಇಲ್ಲಿದೆ : ಆಕ್ಟೋ ಕೋರ್ SC9863A ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 (ಗೋ ಎಡಿಷನ್) ಆಪರೇಟಿಂಗ್ ಸಿಸ್ಟಮ್ ಸಪೋರ್ಟ್‌ ಸಹ ಇದೆ. ಅಲ್ಲದೇ 4GB/6GB RAM ಮತ್ತು 32GB/64GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಪಡೆದಿದೆ. ಹಾಗೆಯೇ ಅಧಿಕ ಹೆಚ್ಚುವರಿ ಸ್ಟೋರೇಜ್‌ ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ನೀಡಲಾಗಿದೆ.

ಐಟೆಲ್‌ P40 ಕ್ಯಾಮೆರಾ ಸೆನ್ಸಾರ್ ಮಾಹಿತಿ : ಈ ಮೊಬೈಲ್‌ ಡ್ಯುಯಲ್‌ ರಿಯರ್ ‌ಕ್ಯಾಮೆರಾ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಆಯ್ಕೆ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. ಜೊತೆಗೆ ಎಲ್‌ಇಡಿ ಪ್ಲ್ಯಾಶ್‌ ಲೈಟ್‌ ಆಯ್ಕೆ ನೀಡಲಾಗಿದೆ.

ಐಟೆಲ್‌ P40 ಫೋನ್‌ನ ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ : ಐಟೆಲ್ P40 ಫೋನ್‌ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದರೊಂದಿಗೆ 8W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರ ಸ್ಟ್ಯಾಂಡ್‌ಬೈ ಟೈಮ್‌ 57 ದಿನಗಳಾಗಿದ್ದು, ಮ್ಯೂಸಿಕ್‌ ಪ್ಲೇಗಾಗಿ 203 ಗಂಟೆಗಳು ಮತ್ತು ವಿಡಿಯೋಗಾಗಿ 28 ಗಂಟೆಗಳ ಬ್ಯಾಕ್‌ಅಪ್‌ ನೀಡಲಿದೆ.

ಐಟೆಲ್‌ P40 ಫೋನ್‌ನ ಇತರೆ ಫೀಚರ್ಸ್‌ ಮಾಹಿತಿ : ಐಟೆಲ್ P40 ಮೊಬೈಲ್‌ ರಿಯರ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಪಡೆದಿದ್ದು, ಜೊತೆಗೆ ಫೇಸ್‌ ಅನ್‌ಲಾಕ್‌ ಆಯ್ಕೆ ಹೊಂದಿದೆ. ಹಾಗೆಯೇ ಈ ಮೊಬೈಲ್‌ ಬ್ಲೂಟೂತ್, ವೈ-ಫೈ, 4G, ಜಿಪಿಎಸ್‌ ನಂತಹ ಹಲವು ಆಯ್ಕೆಗಳನ್ನು ಸಹ ಪಡೆದುಕೊಂಡಿದೆ.

Best Mobiles in India

English summary
Itel P40 huge price down on Amazon prime day sale. offer price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+