Home
ಸುದ್ದಿಜಾಲ

ಎಂಟ್ರಿ ಕೊಡಲಿದೆ ಐಟೆಲ್‌ P40+ ಫೋನ್‌!..7,000mAh ಖಚಿತ!..ಬೆಲೆಯೂ ಅಗ್ಗ!

ದೇಶಿಯ ಮಾರುಕಟ್ಟೆಯಲ್ಲಿ 'ಐಟೆಲ್‌' (itel) ಸಂಸ್ಥೆಯು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಐಟೆಲ್‌ ಭಿನ್ನ ಶ್ರೇಣಿಯಲ್ಲಿ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಇತ್ತೀಚಿನ ಐಟೆಲ್‌ P40 ಸರಣಿ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಎನಿಸಿವೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಈಗ ಮತ್ತೊಂದು ನೂತನ ಫೋನ್‌ ಲಾಂಚ್‌ಗೆ ಅಣಿಯಾಗಿದೆ.

ಹೌದು, ಐಟೆಲ್‌ ಮೊಬೈಲ್‌ ಸಂಸ್ಥೆಯು ಹೊಸದಾಗಿ ಐಟೆಲ್‌ P40+ (itel P40+) ಬಿಡುಗಡೆ ಮಾಡಲು ಸಜ್ಜಾಗಿದ್ದು, ಈ ಮೂಲಕ ತನ್ನ ಮೊಬೈಲ್‌ ಶ್ರೇಣಿಯನ್ನು ವಿಸ್ತರಿಸಲಿದೆ. ಅಂದಹಾಗೆ ಈ ನೂತನ ಫೋನ್‌ ಐಟೆಲ್‌ P40 ಫೋನಿನ ಅಪ್‌ಗ್ರೇಡ್‌ ಆವೃತ್ತಿಯಾಗಿದ್ದು, ಕೆಲವು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಫೋನಿನ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಅಮೆಜಾನ್‌ ತಾಣದಲ್ಲಿ ಮೈಕ್ರೋಸೈಟ್‌ ಕಾಣಬಹುದಾಗಿದೆ.

ಎಂಟ್ರಿ ಕೊಡಲಿದೆ ಐಟೆಲ್‌ P40+ ಫೋನ್‌!..7,000mAh ಖಚಿತ!..ಬೆಲೆಯೂ ಅಗ್ಗ!

ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಐಟೆಲ್‌ P40+ ಬರೋಬ್ಬರಿ 7000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಇದರೊಂದಿಗೆ 18W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಸಹ ಪಡೆದಿರಲಿದೆ. ಹಾಗೆಯೇ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಹೊಂದಿರಲಿದ್ದು, ಸೈಡ್‌ ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಹಾಗಾದರೆ ಐಟೆಲ್‌ ಐಟೆಲ್‌ P40+ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ P40+ ಡಿಸ್‌ಪ್ಲೇ ಮಾಹಿತಿ : ಐಟೆಲ್‌ P40+ ಫೋನ್‌ 6.8 ಇಂಚಿನ ಎಲ್‌ಸಿಡಿ ಪ್ಯಾನೆಲ್‌ ರಚನೆಯನ್ನು ಹೊಂದಿರಲಿದ್ದು, ಇದರೊಂದಿಗೆ ಡಿಸ್‌ಪ್ಲೇಯು ಹೆಚ್‌ಡಿ+ ರೆಸಲ್ಯೂಶನ್‌ ಸಾಮರ್ಥ್ಯ ಅನ್ನು ಪಡೆದಿರಲಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 20:9 ಆಗಿರಲಿದೆ. ಪಂಚ್‌ಹೋಲ್‌ ಮಾದರಿಯ ಡಿಸ್‌ಪ್ಲೇ ಇದ್ದು, 90Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ 91% ರಷ್ಟು ಆಗಿದೆ.

ಐಟೆಲ್‌ P40+ ಪ್ರೊಸೆಸರ್‌ ಹಾಗೂ ಮೆಮೊರಿ ಮಾಹಿತಿ : ಐಟೆಲ್‌ P40+ ಮೊಬೈಲ್‌ Unisoc T606 ಚಿಪ್‌ಸೆಟ್ ಪ್ರೊಸೆಸರ್‌ ಬಲದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ, ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್ 4 GB RAM + 128 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ನ ಆಯ್ಕೆ ಪಡೆದಿರಲಿದೆ.

ಐಟೆಲ್‌ P40+ ಕ್ಯಾಮೆರಾ ಸೆನ್ಸಾರ್‌ ರಚನೆ : ಐಟೆಲ್‌ P40+ ಮೊಬೈಲ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಆ ಪೈಕಿ ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು AI ಲೆನ್ಸ್‌ ಸಪೋರ್ಟ್‌ ಪಡೆದಿರಲಿದೆ. ಜೊತೆಗೆ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆಯನ್ನು ಸಹ ಇದು ಒಳಗೊಂಡಿರಲಿದೆ.

ಐಟೆಲ್‌ P40+ ಬ್ಯಾಟರಿ ಪವರ್‌ ಎನಿದೆ : ಐಟೆಲ್‌ P40+ ಮೊಬೈಲ್‌ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದರೊಂದಿಗೆ 18W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ. ಒಮ್ಮೆ ಚಾರ್ಜ್‌ ಮಾಡಿದರೆ, ಸುಮಾರು 4 ದಿನಗಳ ಬಾಳಿಕೆ ಒದಗಿಸಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೋನ್‌ ಗ್ರೀನ್‌ ಕಲರ್‌ ಆಯ್ಕೆ ಪಡೆದಿರಲಿದೆ. ಐಟೆಲ್‌ P40+ ಮೊಬೈಲ್‌ 10,000ರೂ. ಗಳ ಒಳಗಿನ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿರುವ ಈ ಫೋನ್‌ ಜುಲೈ 2 ನೇ ವಾರದಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ. ಅಮೆಜಾನ್ ಇ ಕಾಮರ್ಸ್‌ ತಾಣವು ಆಯೋಜಿಸುವ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ.

Best Mobiles in India

English summary
itel to unveil P40+ with 7000mAh battery and 8GB RAM; smartphone to boast segment first features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+