Home
ಸುದ್ದಿಜಾಲ

7,000mAh ಬ್ಯಾಟರಿ ಇರುವ ಈ ಮೊಬೈಲ್‌ ಈಗ ಸಸ್ತಾ ಬೆಲೆಗೆ ಲಭ್ಯ!

ಐಟೆಲ್‌ ಮೊಬೈಲ್‌ ಕಂಪನಿಯ ಅಗ್ಗದ ದರದ ಸ್ಮಾರ್ಟ್‌ಫೊನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಪರಿಚಿತವಾಗಿದೆ. ಈ ಸಂಸ್ಥೆಯು ಮುಖ್ಯವಾಗಿ ಎಂಟ್ರಿ ಲೆವೆಲ್‌ ಮಾದರಿಯ ಫೋನ್‌ಗಳನ್ನು ಹೆಚ್ಚಾಗಿ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಆ ಪೈಕಿ ಐಟೆಲ್‌ P40+ ಮೊಬೈಲ್‌ ಇದೀಗ ಸಖತ್ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ನಲ್ಲಿ ಐಟೆಲ್‌ P40+ ಫೋನ್‌ ಶೇ. 24% ರಷ್ಟು ರಿಯಾಯಿತಿ ಪಡೆದಿದ್ದು, ಈ ಫೋನಿನ 4 GB RAM + 128 GB ವೇರಿಯಂಟ್‌ ಫೋನ್‌ 7,599ರೂ. ಗಳ ಆಫರ್‌ನಲ್ಲಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ನಲ್ಲಿ ಲಭ್ಯ ಇತರೆ ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಆಫರ್‌ ಪಡೆದುಕೊಂಡರೆ, ಈ ಮೊಬೈಲ್‌ ಮತ್ತಷ್ಟು ಡಿಸ್ಕೌಂಟ್‌ ಬೆಲೆಗೆ ಲಭ್ಯ.

7,000mAh ಬ್ಯಾಟರಿ ಇರುವ ಈ ಮೊಬೈಲ್‌ ಈಗ ಸಸ್ತಾ ಬೆಲೆಗೆ ಲಭ್ಯ!

ಐಟೆಲ್‌ P40+ ಮೊಬೈಲ್‌ ಆಕ್ಟಾ-ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಹಿಂಭಾಗದಲ್ಲಿ ಇದು ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನು ಇದರ ಪ್ರಮುಖ ಹೈಲೈಟ್‌ ಅಂದರೆ ಈ ಫೋನ್‌ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿರುವುದು. ಹಾಗಾದರೆ ಐಟೆಲ್‌ P40+ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ P40+ ಫೋನಿನ ಫೀಚರ್ಸ್‌ ಹೀಗಿವೆ

ಐಟೆಲ್‌ P40+ ಮೊಬೈಲ್‌ 6.8 ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 720 x 1,640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ನಲ್ಲಿ ಕೆಲಸ ನಿರ್ವಹಿಸಲಿದೆ.

ಐಟೆಲ್‌ P40+ ಮೊಬೈಲ್‌ ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 12 ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಹೆಚ್ಚುವರಿ ಬಳಕೆಯಾಗದ ಸ್ಟೋರೇಜ್‌ ಬಳಸಿಕೊಂಡು ಇನ್‌ಬಿಲ್ಟ್‌ RAM ಅನ್ನು ವರ್ಚುವಲ್‌ ಆಗಿ 8GB ವರೆಗೆ ವಿಸ್ತರಿಸುವ ಆಯ್ಕೆ ಪಡೆದುಕೊಂಡಿದೆ.

ಐಟೆಲ್‌ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮೊದಲ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ನಲ್ಲಿದೆ. ಜೊತೆಗೆ ಹಿಂದಿನ ಫ್ಲ್ಯಾಶ್‌ ಸೌಲಭ್ಯ ಪಡೆದಿದೆ. ದ್ವಿತೀಯ ಕ್ಯಾಮೆರಾ ಎಐ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೌಲಭ್ಯ ಕೂಡ ನೀಡಲಾಗಿದೆ.

ಐಟೆಲ್‌ P40+ ಮೊಬೈಲ್‌ 7,000 mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರುವ ಜೊತೆಗೆ 18W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಮೊಬೈಲ್‌ ಬ್ಯಾಟರಿಯು 18 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಅಲ್ಲದೆ 72 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ಮತ್ತು ಗರಿಷ್ಠ 41 ಗಂಟೆಗಳ ಟಾಕ್ ಟೈಮ್ ಅನ್ನು ಸಿಂಗಲ್‌ ಚಾರ್ಜ್‌ನಲ್ಲಿ ಒದಗಿಸಲಿದೆ.

ಐಟೆಲ್‌ ಸಂಸ್ಥೆಯ ಐಟೆಲ್‌ P40+ ಫೋನ್‌ 4GB RAM + 128GB ಸ್ಟೋರೇಜ್ ಸೌಲಭ್ಯದ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ ಅನ್ನು ಗ್ರಾಹಕರು ಫೋರ್ಸ್ ಬ್ಲ್ಯಾಕ್ ಮತ್ತು ಐಸ್ ಸಯಾನ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.

Best Mobiles in India

English summary
itel P40 Plus receive great price drop on flipkart website. offer, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+