ಈ ಎಂಟ್ರಿ ಲೆವೆಲ್ ಮೊಬೈಲ್‌ಗೆ ಬಿಗ್ ಡಿಸ್ಕೌಂಟ್!..ಭಾರೀ ಉಳಿತಾಯ!
ಆನ್‌ಲೈನ್ ಮೂಲಕ ಮೊಬೈಲ್ ಖರೀದಿ ಮಾಡಬಯಸುವ ಅನೇಕಕ ಗ್ರಾಹಕರು ಮೊದಲಿಗೆ ಅಮೆಜಾನ್ ತಾಣದತ್ತ ಮುಖ ಮಾಡುತ್ತಾರೆ. ಅಮೆಜಾನ್ ಪ್ಲಾಟ್‌ಫಾರ್ಮ್ ಸಹ ಗ್ರಾಹಕರನ್ನು ಸೆಳೆಯಲು ಹಲವು ರಿಯಾಯಿತಿ ಕೊಡುಗೆ ನೀಡುತ್ತ ಬಂದಿದೆ. ಸದ್ಯ ಎಂಟ್ರಿ ಲೆವೆಲ್ ಮಾದರಿಯ ಐಟೆಲ್ P40+ ಸ್ಮಾರ್ಟ್‌ಫೋನ್ ಕೂಡಾ ಅಮೆಜಾನ್ ತಾಣದಲ್ಲಿ ಬೊಂಬಾಟ್ ಡಿಸ್ಕೌಂಟ್ ಪಡೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ದೀಪಾವಳಿ ಹಬ್ಬದ ಸಂದರ್ಭ ಇದೀಗ ಐಟೆಲ್ P40+ ಸ್ಮಾರ್ಟ್‌ಫೋನ್ ಶೇ. 17% ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಇದರ 4GB RAM + 64GB ಸ್ಟೋರೇಜ್ ವೇರಿಯಂಟ್ ಅನ್ನು ಗ್ರಾಹಕರು 7,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಅಮೆಜಾನ್ ತಾಣದಲ್ಲಿ ಲಭ್ಯ ಇರುವ ಇತರೆ ಎಲ್ಲ ಕೊಡುಗೆಗಳು ಪಡೆದುಕೊಂಡರೆ ಈ ಫೋನ್ ಮತ್ತಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ.

ಅಂದಹಾಗೆ ಐಟೆಲ್ P40+ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಯುನಿಸೊಕ್ T606 SoC ಪ್ರೊಸೆಸರ್ ಪವರ್ ಹೊಂದಿದ್ದು, ಹಿಂಭಾಗದಲ್ಲಿ ಇದು ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಇದರ ಪ್ರಮುಖ ಹೈಲೈಟ್ ಅಂದರೆ ಅದು 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಆಗಿದೆ. ಹಾಗಾದರೆ ಐಟೆಲ್ P40+ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸೈನ್ ಹೇಗಿದೆ ಹಾಗೂ ಡಿಸ್‌ಪ್ಲೇ ರಚನೆ
ಐಟೆಲ್ P40+ ಮೊಬೈಲ್ 6.8 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 720 x 1,640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ನಲ್ಲಿ ಕೆಲಸ ನಿರ್ವಹಿಸಲಿದೆ.

ಪ್ರೊಸೆಸರ್ ಪವರ್ ಸಾಮರ್ಥ್ಯ
ಐಟೆಲ್ P40+ ಮೊಬೈಲ್ ಆಕ್ಟಾ-ಕೋರ್ ಯುನಿಸೊಕ್ T606 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 12 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಆಂತರೀಕ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಹೆಚ್ಚುವರಿ ಬಳಕೆಯಾಗದ ಸ್ಟೋರೇಜ್ ಬಳಸಿಕೊಂಡು ಇನ್‌ಬಿಲ್ಟ್ RAM ಅನ್ನು ವಾಸ್ತವಿಕವಾಗಿ 8GB ವರೆಗೆ ವಿಸ್ತರಿಸಬಹುದಾಗಿದೆ.
ಕ್ಯಾಮೆರಾ ರಚನೆ ಮಾಹಿತಿ
ಐಟೆಲ್ ಸಂಸ್ಥೆಯ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಜೊತೆಗೆ ಹಿಂದಿನ ಫ್ಲ್ಯಾಶ್ ಸೌಲಭ್ಯ ಪಡೆದಿದೆ. ಎರಡನೇ ಕ್ಯಾಮೆರಾ ಎಐ ಸೆನ್ಸಾರ್ ಪಡೆದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ಬ್ಯಾಟರಿ ಬಲ ಮತ್ತು ಇತರೆ ಸೌಲಭ್ಯಗಳು
ಐಟೆಲ್ P40+ ಮೊಬೈಲ್ 7,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರುವ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಮೊಬೈಲ್ ಬ್ಯಾಟರಿಯು 18 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಅಲ್ಲದೆ 72 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಟೈಂ ಮತ್ತು ಗರಿಷ್ಠ 41 ಗಂಟೆಗಳ ಟಾಕ್ ಟೈಮ್ ಅನ್ನು ಸಿಂಗಲ್ ಚಾರ್ಜ್‌ನಲ್ಲಿ ಒದಗಿಸಲಿದೆ.
ಮೆಮೊರಿ ಮತ್ತು ಕಲರ್ ಆಯ್ಕೆ
ಭಾರತದಲ್ಲಿ ಐಟೆಲ್ P40+ ಫೋನ್ 4GB RAM + 128GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಅನ್ನು ಫೋರ್ಸ್ ಬ್ಲ್ಯಾಕ್ ಮತ್ತು ಐಸ್ ಸಯಾನ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications