ಬಜೆಟ್ ಬೆಲೆಯ ಐಟೆಲ್ P40 ಸ್ಮಾರ್ಟ್‌ಫೋನ್ ಲಾಂಚ್: 6,000mAh ಬ್ಯಾಟರಿ ಆಯ್ಕೆ!
ಸ್ಮಾರ್ಟ್ ಗ್ಯಾಜೆಟ್ ತಯಾರಿಕಾ ಸಂಸ್ಥೆಯಾದ ಐಟೆಲ್ ಇತ್ತೀಚೆಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಿದ್ದು, ಅದರಂತೆ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇರುವ ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಇದು 57 ದಿನಗಳ ಸ್ಟ್ಯಾಂಡ್‌ಬೈ ಟೈಮ್ ನೀಡಲಿದೆ.
ಹೌದು, ಐಟೆಲ್ ಸಂಸ್ಥೆಯು ಐಟೆಲ್ P40 (itel P40) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಮೂಲಕ ಐಟೆಲ್ ತನ್ನ P ಸರಣಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಈ ಫೋನ್ ಶೈಲಿ ಪೊಕೊವನ್ನು ಹೋಲಲಿದ್ದು ಆಕ್ಟೋ ಕೋರ್ SC9863A ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬುದನ್ನು ವಿವರಿಸಲಾಗಿದೆ ಓದಿರಿ.

ಐಟೆಲ್ P40 ಡಿಸ್‌ಪ್ಲೇ ವಿವರ: ಈ ಹೊಸ ಐಟೆಲ್ P40 ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ + ಐಪಿಎಸ್ ವಾಟರ್‌ಡ್ರಾಪ್ ಡಿಸ್‌ಪ್ಲೇ ಹೊಂದಿದ್ದು, 1612 X 720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 120 Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಕಾಣಿಸಿಕೊಂಡಿದೆ.
ಐಟೆಲ್ P40 ಪ್ರೊಸೆಸರ್ ಮಾಹಿತಿ: ಆಕ್ಟೋ ಕೋರ್ SC9863A ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಜೊತೆಗೆ ಇದು ಆಂಡ್ರಾಯ್ಡ್ 12 (ಗೋ ಎಡಿಷನ್) ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗಲಿದೆ. ಇದರೊಂದಿಗೆ 4GB/6GB RAM ಮತ್ತು 32GB/64GB ಇಂಟರ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚಿನ ಇಂಟರ್ ಸ್ಟೋರೇಜ್ ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿದೆ.
ಐಟೆಲ್ P40 ಕ್ಯಾಮೆರಾ ರಚನೆ: ಈ ಹೊಸ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ವೀಡಿಯೊ ಗ್ರಾಫಿಕ್ಸ್ ಅರೇ (VGA) ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಪಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಉತ್ತಮ ಚಿತ್ರ ಸೆರೆಹಿಡಿಯಲು ಎಲ್‌ಇಡಿ ಪ್ಲ್ಯಾಶ್ ಲೈಟ್ ಆಯ್ಕೆ ನೀಡಲಾಗಿದೆ.

ಐಟೆಲ್ P40 ಫೋನ್‌ನ ಬ್ಯಾಟರಿ ಸಾಮರ್ಥ್ಯ: ಐಟೆಲ್ P40 ಫೋನ್ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದನ್ನು ಆಗಾಗ್ಗೆ ಚಾರ್ಜಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ 8 W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಬಹುದಾಗಿದೆ. ಸ್ಟ್ಯಾಂಡ್‌ಬೈ ಟೈಮ್ 57 ದಿನಗಳಾಗಿದ್ದು, ಕರೆಗಾಗಿ 32 ಗಂಟೆಗಳು ಹಾಗೂ ಮ್ಯೂಸಿಕ್ ಪ್ಲೇಗಾಗಿ 203 ಗಂಟೆಗಳು ಮತ್ತು ವಿಡಿಯೋಗಾಗಿ 28 ಗಂಟೆಗಳ ಬ್ಯಾಕಪ್ ನೀಡಲಿದೆ.
ಐಟೆಲ್ P40 ಫೋನ್‌ನ ಕನೆಕ್ಟಿವಿಟಿ ಫೀಚರ್ಸ್: ಇನ್ನುಳಿದಂತೆ ಈ ಫೋನ್ ರಿಯರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಹಾಗೂ ಫೇಸ್ ಅನ್‌ಲಾಕ್ ಆಯ್ಕೆ ಹೊಂದಿದ್ದು, ಈ ಮೂಲಕ ಉತ್ತಮ ಭದ್ರತಾ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್, ವೈ-ಫೈ, 4G, ಜಿಪಿಎಸ್ ಸೇರಿದಂತೆ ಹಲವು ಆಯ್ಕೆ ಪಡೆದುಕೊಂಡಿದೆ.

ಐಟೆಲ್ P40 ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ಗೆ ಆರಂಭಿಕ ಬೆಲೆಯಾಗಿ 7,999 ರೂ.ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ಫೋನ್ ಕಪ್ಪು, ನೀಲಿ ಮತ್ತು ಚಿನ್ನದ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಇದನ್ನು ನೀವು ಐಟೆಲ್ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಈ ಫೋನ್ 4G ಬೆಂಬಲಿತ ಆಗಿರುವುದರಿಂದ ಕಡಿಮೆ ದರದಲ್ಲಿ ಲಭ್ಯವಾಗುತ್ತಿದ್ದು, ಶೀಘ್ರದಲ್ಲೇ 5G ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗುತ್ತದೆ ಎಂಬ ಮಾಹಿತಿಗಳು ತಿಳಿದುಬಂದಿದೆ.


Click it and Unblock the Notifications








