Home
ಸುದ್ದಿಜಾಲ

ಲಾಂಚ್‌ ಆಯ್ತು ಅಗ್ಗದ ಐಟೆಲ್ 5G ಫೋನ್‌!.. ಬೆಲೆ ಕೇಳಿ ಗ್ರಾಹಕ ಅಚ್ಚರಿ!

ಸ್ವದೇಶಿ ಮೂಲದ ಐಟೆಲ್‌ ಮೊಬೈಲ್‌ ಬ್ರ್ಯಾಂಡ್‌ ಇದೀಗ ಭಾರತೀಯ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ ಐಟೆಲ್‌ P55 5G ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದೆ. ಈ ಫೋನ್‌ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದ್ದು, ಕೆಲವು ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರ ಗಮನ ಕೂಡಾ ಸೆಳೆದಿದೆ.

ಹೌದು, ಐಟೆಲ್‌ ಕಂಪನಿಯು ನೂತನ ಐಟೆಲ್‌ P55 5G ( itel P55 5G ) ಸ್ಮಾರ್ಟ್‌ಫೋನ್‌ ಜೊತೆಗೆ ಐಟೆಲ್‌ S23+ ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಐಟೆಲ್‌ P55 5G ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ಐಟೆಲ್‌ P55 5G ಸ್ಮಾರ್ಟ್‌ಫೋನ್‌ 4GB RAM + 64GB ಹಾಗೂ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಇದರ ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಪಡೆದಿದೆ. ಹಾಗಾದರೆ ಇನ್ನುಳಿದಂತೆ ಐಟೆಲ್‌ P55 5G ಹಾಗೂ ಐಟೆಲ್‌ S23+ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾಂಚ್‌ ಆಯ್ತು ಅಗ್ಗದ ಐಟೆಲ್ 5G ಫೋನ್‌!.. ಬೆಲೆ ಕೇಳಿ ಗ್ರಾಹಕ ಅಚ್ಚರಿ!

ಐಟೆಲ್‌ P55 5G ಡಿಸ್‌ಪ್ಲೇ ವಿನ್ಯಾಸ :
ಐಟೆಲ್‌ P55 5G ಸ್ಮಾರ್ಟ್‌ಫೋನ್‌ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಹೊಂದಿದೆ. ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 267 PPI ಆಗಿದೆ.

ಐಟೆಲ್‌ P55 5G ಪ್ರೊಸೆಸರ್‌ ಯಾವುದು :
ಐಟೆಲ್‌ P55 5G ಸ್ಮಾರ್ಟ್‌ಫೋನ್‌ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಹಾಗೆಯೇ 4GB RAM + 64GB ಹಾಗೂ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಐಟೆಲ್‌ P55 5G ಕ್ಯಾಮೆರಾ ಸೆನ್ಸಾರ್ :
ಐಟೆಲ್‌ P55 5G ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಸೆನ್ಸರ್ ಮತ್ತು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಬೇಸಿಕ್‌ ಎಡಿಟಿಂಗ್ ಆಯ್ಕೆಗಳು ಇವೆ.

ಐಟೆಲ್‌ P55 5G ಬ್ಯಾಟರಿ ಮತ್ತು ಇತರೆ ಆಯ್ಕೆಗಳು :
ಐಟೆಲ್‌ P55 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಜೊತೆಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಸೈಡ್‌ ಮೌಂಟೆಡ್‌ ಫಿಂಗರ್ಪ್ರಿಂಟ್‌ ಸೆನ್ಸಾರ್, ಬ್ಲೂಟೂತ್ 5.1, ಜಿಪಿಎಸ್‌, ಯುಎಸ್‌ಬಿ ಟೈಪ್‌-ಸಿ ಫೀಚರ್ಸ್‌ಗಳನ್ನು ಹೊಂದಿದೆ.

ಐಟೆಲ್‌ S23+ ಫೀಚರ್ಸ್‌ ಹೀಗಿವೆ :
ಐಟೆಲ್‌ 6.78 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಇದು 2400 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಪಡೆದಿದೆ. ಇದರ ಡಿಸ್‌ಪ್ಲೇಯು FHD+ 3D ಕರ್ವ್ಡ್ AMOLED ಡಿಸ್ಪ್ಲೇ ಆಗಿದ್ದು, 60Hz ರಿಫ್ರೆಶ್ ರೇಟ್ ಹಾಗೂ 500 nits ಪೀಕ್ ಬ್ರೈಟ್‌ನೆಸ್ ಹೊಂದಿದೆ. ಜೊತೆಗೆ 2GHz UNISOC T616 ಆಕ್ಟಾ-ಕೋರ್ 12nm ಪ್ರೊಸೆಸರ್ ಪವರ್‌ ಪಡೆದಿದೆ.

ಅಲ್ಲದೇ ಈ ಮೊಬೈಲ್‌ 8 RAM + 128GB ಸ್ಟೋರೇಜ್‌ ಪಡೆದಿದ್ದು ಹಾಗೆಯೇ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಅವಕಾಶ ಪಡೆದಿದೆ. ಜೊತೆಗೆ ಆಂಡ್ರಾಯ್ಡ್ 13 ಸಪೋರ್ಟ್ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಆಗಿದೆ. ಅಲ್ಲದೇ 5000mAh ಬ್ಯಾಟರಿ ಜೊತೆಗೆ 18W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.

ಐಟೆಲ್‌ P55 5G ಫೋನ್‌ ಭಾರತದಲ್ಲಿ 6GB + 128GB ಆವೃತ್ತಿಗೆ 9999ರೂ. ಆಗಿದೆ. ಹಾಗೆಯೇ 4GB + 64GB ವೇರಿಯಂಟ್‌ ಬೆಲೆಯು 9,699ರೂ. ಗಳು ಆಗಿದೆ. ಇನ್ನು ಈ ಫೋನ್‌ ಬ್ಲೂ ಹಾಗೂ ಗ್ರೀನ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅದೇ ಅಕ್ಟೋಬರ್‌ 4 ರಿಂದ ಅಮೆಜಾನ್‌ ತಾಣದಲ್ಲಿ ಖರೀದಿಗೆ ಲಭ್ಯ. ಇನ್ನು ಐಟೆಲ್‌ S23+ ಫೋನ್‌ ಬೆಲೆಯು 13,999ರೂ. ಆಗಿದ್ದು, ಅಕ್ಟೋಬರ್ 6 ರಿಂದ ಸೇಲ್ ಪ್ರಾರಂಭ ಆಗಲಿದೆ.

Best Mobiles in India

English summary
Itel India has launched its latest budget smartphones, the Itel S23+ and P55 5G. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+